ಕೊಪ್ಪಳ:ಜನವರಿ 8ರಂದು ಕೊಪ್ಪಳದ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಜರುಗಲಿದೆ. ಭಾನುವಾರ ನಡೆಯಲಿರುವ ಜಾತ್ರೆಗೆ, ಇಂದು ಸಾರ್ವಜನಿಕ ಮೈದಾನದಿಂದ ಜಾಗೃತಿ ಜಾಥಾ ಮೂಲಕ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಸುಮಾರು 800 ವರ್ಷಗಳ ಹಳೆಯ ಮಠ ಇದಾಗಿದ್ದು, ಉತ್ತರ ಕರ್ನಾಟಕದ ಪ್ರಸಿದ್ಧ ಲಿಂಗಾಯತ ಮಠಗಳಲ್ಲಿ ಒಂದಾಗಿರುವ ಗವಿಸಿದ್ದೇಶ್ವರ ಮಠವನ್ನು ಗವಿಮಠ ಎಂದೂ ಕರೆಯುತ್ತಾರೆ.
ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು, ಅಗತ್ಯವಿರುವವರಿಗೆ ಆಹಾರವನ್ನು ಒದಗಿಸುವುದು ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನೀಡುವುದು- ಮುಂತಾದ ವಿವಿಧ ಚಟುವಟಿಕೆಗಳಿಂದ ಸಮಾಜವನ್ನು ಉನ್ನತೀಕರಿಸುವಲ್ಲಿ ಗವಿಮಠ ಬಹಳ ಹಿಂದಿನಿಂದಲೂ ತೊಡಗಿಸಿಕೊಂಡಿದೆ.
ಸಾಮಾಜಿಕ ಕಳಕಳಿಗೆ ಹೆಸರಾದ ಗವಿಮಠ ಜಾತ್ರೆ ಕೊಪ್ಪಳದ ಸಾರ್ವಜನಿಕ ಮೈದಾನದಿಂದ ಗವಿಮಠದವರೆಗೂ ಜಾಥಾ ಮೂಲಕ ಜರುಗಲಿದೆ. ಅಂಗಾಂಗ ದಾನದ ಕುರಿತು ಜಾಗೃತಿ ಜಾಥಾ ಮೂಲಕ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಎರಡು ಪುಟ್ಟ ಮಕ್ಕಳಿಂದ, ಹಸಿರು ನಿಶಾನೆ ತೋರುವ ಮೂಲಕ ನಡೆದ ಕಾರ್ಯಕ್ರಮದಲ್ಲಿ ಡಿಸಿ ಸುಂದರೇಶ್ ಬಾಬು, ಸಿಇಒ ಫೌಜಿಯಾ ಕೂಡ ಪಾಲ್ಗೊಂಡಿದ್ದರು.
ಜಾಥಾದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ‘ಪರೋಪಕಾರಾರ್ಥಂ ಇದಂ ಶರೀರಂ’ ಎನ್ನುವ ಘೋಷವಾಕ್ಯದಡಿ ನಡೆಯುವ ಜಾಥಾ ಇದಾಗಿದ್ದು, ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅಂಗಾಂಗ ದಾನ ಮಾಡಲು ಮನವಿ ಮಾಡಿದ್ದಾರೆ.
‘ದೇಶದಲ್ಲಿ ಈಗ ರಕ್ತದಾನ, ನೇತ್ರದಾನದಷ್ಟೆ ಅಂಗಾಂಗ ದಾನದ ಅಗತ್ಯವಿದೆ, ಒಂದೊಮ್ಮೆ ಇದಕ್ಕಾಗಿ ಪರದಾಡುವ ಸ್ಥಿತಿ ಇತ್ತು… ಇಂದು ಜಾಗೃತಿ ಮೂಲಕ ಒಂದು ಹಂತಕ್ಕೆ ಬಂದಿದೆ..’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
‘ಗವಿಮಠದ ಶ್ರೀಗಳು ಇಂತಹ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಕಾರ್ಯ… ನಮ್ಮ ದೇಶದಲ್ಲಿ ಇದರ ಜಾಗೃತಿ ಕಡಿಮೆ ಇದೆ. ಇದನ್ನು ಹಳ್ಳಿ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು… ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ..’ ಎಂದು ಜಿಲ್ಲಾಧಿಕಾರಿ ಸುಂದರೇಶ್​​ ಬಾಬು ಮಾತನಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − six =
Remember me
