ಉಡುಪಿ:ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಹಿಂದಿನಿಂದಲೂ ಕೊರಗಜ್ಜನ ಹಲವಾರು ಪವಾಡಗಳು ನಡೆದಿವೆ. ಇದೀಗ ವಿಪರೀತ ಜ್ವರದಿಂದ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಮಗುವೊಂದು ಕೊರಗಜ್ಜನ ದಯೆಯಿಂದ ಬದುಕುಳಿದ ಘಟನೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಡೆದಿದೆ.
ಸಾಗರ ಮೂಲದ ಕುಟುಂಬದ ಹೆಣ್ಣು ಮಗುವೊಂದು ಅತಿಯಾದ ಜ್ವರದಿಂದ ಬಳಲುತ್ತಿದ್ದ ಕಾರಣ ನಗರದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮಗುವಿನ ಪ್ರಾಣ ಉಳಿಯುವ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮಗುವಿನ ಸ್ಥಿತಿ ಕಂಡು ಚಿಂತಾಕ್ರಾಂತರಾಗಿದ್ದ ಪೋಷಕರಿಗೆ ಅದೇ ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೋರ್ವರು ಕೊರಗಜ್ಜನ ಮೊರೆ ಹೋಗುವಂತೆ ಸೂಚಿಸಿದ್ದಾರೆ. ವ್ಯಕ್ತಿಯ ಸೂಚನೆಯಂತೆ ಆಸ್ಪತ್ರೆಯಿಂದ ಡಿಸ್​​​ಚಾರ್ಜ್ ಆದ ಬಳಿಕ ಪೋಷಕರು ಮಣಿಪಾಲದ ಸನ್ನಿಧಿಗೆ ತೆರಳಿ, ಕೊರಗಜ್ಜನ ಬಳಿ ಪ್ರಾರ್ಥಿಸಿ ಕರಿಗಂಧವನ್ನು ಮಗುವಿಗೆ ಹಣೆಗೆ ಹಚ್ಚಿದ್ದಾರೆ. ಕರಿಗಂಧ ಹಚ್ಚಿದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯದಲ್ಲಿ ಧಿಡೀರ್​ ಚೇತರಿಕೆ ಕಂಡುಬಂದಿದೆ. ಕುಟುಂಬವು ಕೊರಗಜ್ಜನನ್ನು ಸ್ಮರಿಸಿ ತಮ್ಮ ಊರಿಗೆ ಹಿಂದಿರುಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
