|ವೆಂಕಟೇಶಾಚಾರ್ ಬಿ.ಆರ್.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿನ, ಧರೆಗಧಿಕ ಶ್ರೀಕ್ಷೇತ್ರ ಶೂರ್ಪಾಲಯವು ಕೃಷಾ ್ಣ ನದಿತೀರದ ಒಂದು ಪುಟ್ಟ ಗ್ರಾಮ. ಇಲ್ಲಿ ಮೈಚೆಲ್ಲಿ ಹರಿಯುವ ಕೃಷ್ಣಾನದಿಯು ಸಾಧಕರ ಮನಸ್ಸನ್ನು ಆಕರ್ಷಿಸದೇ ಬಿಡುವುದಿಲ್ಲ. ಇಲ್ಲಿ ನರಸಿಂಹದೇವರ ದಿವ್ಯ ಭವ್ಯ ದೇವಸ್ಥಾನ ಇದೆ. ‘ಸಿರಿಯನು ತನ್ನ ತೊಡೆಯ ಮೇಲೆ ಇರಿಸಿಕೊಂಡ ಪಾದ’ ಎಂದು ಕನಕದಾಸರು ಪ್ರಾರ್ಥಿಸಿದಂತೆ ಲಕ್ಷ್ಮೀಸಮೇತನಾದ ನರಸಿಂಹನು ಪೂರ್ಣ ಸನ್ನಿಧಾನವನ್ನು ಇಲ್ಲಿ ಇರಿಸಿದ್ದಾನೆ. ಏಕಶಿಲೆ ಶಾಲಿಗ್ರಾಮದ ಈ ಸುಂದರ ಮೂರ್ತಿಯು ಒಬ್ಬ ಹುಟ್ಟು ಕುರುಡನ ಕರಕುಶಲದಿಂದ ನಿರ್ವಿುತವಾಗಿದೆ ಎಂದು ಐತಿಹ್ಯವಿದೆ.
ಶೂರ್ಪಾಲಯ ಕ್ಷೇತ್ರದಲ್ಲಿ ಕೋಟಿತೀರ್ಥ, ಚಕ್ರತೀರ್ಥ, ಕಂಠತೀರ್ಥ, ಉತ್ತುಂಗ ತೀರ್ಥ, ಮಧುತೀರ್ಥ, ಪಿತೃಋಣಮೋಚನ ತೀರ್ಥ, ಋಣಮೋಚನ ತೀರ್ಥ ಎಂಬ ಅಷ್ಟತೀರ್ಥಗಳು ಇವೆ. ಒಂದೊಂದು ತೀರ್ಥಕ್ಕೂ ಒಂದೊಂದು ಮಹಿಮೆ ಇದೆ. ರಾಜಸೂಯಯಾಗ, ಅಶ್ವಮೇಧಯಾಗ ಮಾಡಿದ ಫಲವನ್ನು ಉತ್ತುಂಗ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಪಡೆಯುತ್ತಾರೆ. ಸಕಲ ಜನರ ಪಾಪಗಳನ್ನು ಕಳೆಯುವ ಗಂಗೆಯು ತಾನು ಸಕಲ ಪಾಪಗಳಿಂದ ಭರಿತಳಾಗಿ ಅವುಗಳ ವಿಮೋಚನೆಗಾಗಿ ಕಾಶೀ ವಿಶ್ವನಾಥನ ಬಳಿ ವಿನಂತಿ ಮಾಡಿಕೊಂಡಾಗ ಅವನ ಪ್ರೇರಣೆಯಿಂದ ಕೃಷ್ಣಾನದಿ ತೀರಕ್ಕೆ ಬಂದು ಮುತ್ತು ರತ್ನಹವಳ ವಜ್ರ ವೈಡೂರ್ಯಗಳಿಂದ ತುಂಬಿದ ಮೊರದ ಬಾಗಿಣವನ್ನು ಕೊಟ್ಟು ಗಂಗೆ ತನ್ನ ಪಾಪಗಳನ್ನು ಕಳೆದುಕೊಳ್ಳುತ್ತಾಳೆ. ಸಂಸ್ಕೃತದಲ್ಲಿ ಮೊರಕ್ಕೆ ‘ಶೂರ್ಪ’ ಎನ್ನುತ್ತಾರೆ. ಗಂಗೆ ಕೃಷ್ಣೆಗೆ ಶೂರ್ಪವನ್ನು ನೀಡಿದ ಸ್ಥಳ-ಆಲಯ- ಇದಾದ್ದರಿಂದ ಇದು ಶೂರ್ಪಾಲಯ ಎಂದು ಹೆಸರು ಪಡೆದುಕೊಂಡಿದೆ. ಶೂರ್ಪಾಲಯವನ್ನೇ ಶೂರ್ಪಾಲಿ ಎಂದು ಗ್ರಾಮಸ್ಥರು ಕರೆಯುತ್ತಾರೆ.
ಪರಶುರಾಮದೇವರು ದೇವಸ್ಥಾನದ ಮುಂಭಾಗಕ್ಕೆ ಬಂದಾಗ ಪರಿಮಳಭರಿತ ರಮಣೀಯ ನಿಸರ್ಗದ ಸೌಂದರ್ಯ ನೋಡಿ ಆನಂದಬಾಷ್ಪ ಸುರಿಸಿದಾಗ ಅರಳಿಮರ ಚಿಗುರಿತು. ಅದೇ ಮರವು ಇವತ್ತೂ ನೋಡಲು ಸಿಗುವುದು ವಿಶೇಷ. ನರಸಿಂಹದೇವರ ಗರ್ಭಗುಡಿಯ ಹಿಂಭಾಗದಲ್ಲಿ ಉತ್ತರಾದಿಮಠದ ಪೀಠಾಧಿಪತಿಗಳಾದ ವಿದ್ಯಾಧೀಶತೀರ್ಥರು ಪ್ರತಿಷ್ಠಾಪನೆ ಮಾಡಿದ ಚಿಕ್ಕ ಹನುಮಂತದೇವರ ಮೂರ್ತಿ ಇದೆ. ಪ್ರಾಣದೇವರ ಕುತ್ತಿಗೆಯಲ್ಲಿ ಯಾವಾಗಲೂ ತೇವಾಂಶವಿದ್ದು ಇದರಿಂದ ಗಂಗಾದೇವಿ ನಿತ್ಯ ಸನ್ನಿಹಿತಳಾಗಿದ್ದಾಳೆ ಎಂಬ ನಂಬಿಕೆಯೂ ಇದೆ. ದೇವಸ್ಥಾನದ ಪ್ರಾಂಗಣದಲ್ಲಿ ಕೇಶವದೇವರು, ವರಾಹದೇವರು, ರಾಮಚಂದ್ರದೇವರು ವಿರಾಜಮಾನರಾಗಿದ್ದಾರೆ. ಶೂರ್ಪಾಲಯ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವು ವೈಶಾಖ ಮಾಸದ ಶುದ್ಧ ದಶಮಿಯಿಂದ ಪ್ರಾರಂಭವಾಗಿ ವೈಶಾಖ ದ್ವಿತೀಯಾವರೆಗೆ ನವರಾತ್ರಿ ಉತ್ಸವ ನೆರವೇರುತ್ತದೆ. ವೈಶಾಖ ಶುದ್ಧ ಪೌರ್ಣಿಮೆ ದಿವಸ ನರಸಿಂಹದೇವರ ಬೆಳ್ಳಿ ಮೂರ್ತಿಯನ್ನು ರಥದಲ್ಲಿರಿಸಿ ರಥೋತ್ಸವ ನೆರವೇರಿಸುತ್ತಾರೆ.
ಏಪ್ರಿಲ್ 5, 6 ಚೈತ್ರಶುದ್ಧ ಚತುರ್ದಶಿ-ಹುಣ್ಣಿಮೆಯಂದು ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ 1008ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ಶೂರ್ಪಾಲಿಕ್ಷೇತ್ರಕ್ಕೆ ಆಗಮಿಸುವವರಿದ್ದಾರೆ. ಎರಡು ದಿನಗಳ ಕಾಲ ಇಲ್ಲಿ ಗುರುಗಳ ಅನುಗ್ರಹ ಸಂದೇಶ, ಸಂಸ್ಥಾನ ಪೂಜೆ, ನರಸಿಂಹ ಮಂತ್ರಹೋಮ, ಕೋಟಿ ನರಸಿಂಹ ನಾಮಲೇಖನ ಯಜ್ಞದ ಶಿಲಾನ್ಯಾಸ ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
