ಬೆಂಗಳೂರು:ಇದು ಕೋವಿಡ್​ ಆಸ್ಪತ್ರೆಯ ಕರ್ಮಕಾಂಡ! ಆರೋಗ್ಯ ಸಚಿವರು ತುರ್ತಾಗಿ ಗಮನ ನೀಡಬೇಕಾದ ವಿಷ್ಯ ಇದು. ಕರೊನಾ ವಾರ್ಡಿನಲ್ಲಿ ಸೋಂಕಿತರಿಗೆ ‘ನರಕ’ ದರ್ಶನವಾಗುತ್ತಿದ್ದು, ಕುಡಿಯೋಕೆ ನೀರಿಲ್ಲದೆ ಶೌಚಗೃಹದ ನೀರನ್ನೇ ಕುಡಿದಿದ್ದಾರೆ!
ಕರೊನಾ ಸೋಂಕಿತರಿಗೆ ಸೂಕ್ತ ಊಟ-ತಿಂಡಿಯ ವ್ಯವಸ್ಥೆಯೂ ಇಲ್ಲ. ರೋಗದಿಂದ ಬಳಲುತ್ತಿರುವವರಿಗೆ ಹಸಿವಿನ ಶಿಕ್ಷೆಯೂ ಕಾಡುತ್ತಿದೆ. ಇಲ್ಲಿನ ಕರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇದು ರಾಜೀವ್ ಗಾಂಧಿ ಆಸ್ಪತ್ರೆಯ ನೂತನ ಕಟ್ಟಡದಲ್ಲಿರುವ ಕೋವಿಡ್​ ಆಸ್ಪತ್ರೆಯ ಕರ್ಮಕಾಂಡ.ಇದನ್ನೂ ಓದಿರಿಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!
ರಾಜೀವ್ ಗಾಂಧಿ ಆಸ್ಪತ್ರೆಯ ಕೋವಿಡ್​ ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ 20 ಮಂದಿ ಕರೊನಾ ಸೋಂಕಿತರಿದ್ದಾರೆ. ಮಡಿವಾಳ ಪೊಲೀಸ್ ಠಾಣೆ ಸಿಬ್ಬಂದಿ, ಸೌದಿ ಅರೇಬಿಯಾದಿಂದ ಮರಳಿದವರು, ಬೆಂಗಳೂರಿನ ನಿವಾಸಿಗಳು ಈ ವಾರ್ಡಿನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. 20 ಜನರಿಗೆ ಇರೋದು ಒಂದೇ ಬಕೆಟ್​-ಒಂದೇ ಮಗ್​. ಟಾಯ್ಲೆಟ್​ಗೆ ಹೋದಾಗ ಮಗ್​ಗಾಗಿ ಕಾಯುವಿಕೆ ತಪ್ಪಿದ್ದಲ್ಲ.
ಶೌಚಗೃಹದಲ್ಲಿ… ತೊಳೆದುಕೊಳ್ಳಲು ಒಂದು ಮಗ್ ಕೂಡ ಇಲ್ಲ. ಇನ್ನು ಸೋಪು, ಪೇಸ್ಟ್, ಸ್ಯಾನಿಟೈಸರ್ ಇಲ್ಲವೇ ಇಲ್ಲ. ಊಟ-ತಿಂಡಿಯಾದರೂ ಸಮಯಕ್ಕೆ ಸರಿಯಾಗಿ ಕೊಡುತ್ತಾರೆಯೇ..? ಅದೂ ಇಲ್ಲ. ನಿನ್ನೆ(ಶುಕ್ರವಾರ) ಸಂಜೆ 6 ಗಂಟೆಯಲ್ಲಿ ಅನ್ನ-ಸಾಂಬಾರ್ ಕೊಟ್ಟಿದ್ದಕ್ಕೆ, ಮರುದಿನ ಅಂದ್ರೆ ಶನಿವಾರ ಬೆಳಗ್ಗೆ 10 ಗಂಟೆವರೆಗೂ ತಿನ್ನೋಕೆ ಏನನ್ನೂ ಕೊಟ್ಟಿಲ್ಲ. ನಂತರ ಚಿಕ್ಕ ಗಾತ್ರದ 2 ಇಡ್ಲಿ- ಸಾಂಬಾರ್ ಹಾಗೂ ಕಾಫಿ ಕೊಟ್ಟಿದ್ದಾರಷ್ಟೆ. ರೋಗಿಗಳು ಹೊಟ್ಟೆ ತುಂಬ ಊಟವೂ ಇಲ್ಲದೆ ನರಕ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿರಿಕ್ವಾರಂಟೈನ್​ ಕೇಂದ್ರದಲ್ಲಿ ಕಾಮುಕ! ಕಂಡಕಂಡ ಯುವತಿಯರ ಮೇಲೆರಗುತ್ತಾನೆ…
ಕುಡಿವ ನೀರಿಲ್ಲದೆ ಶೌಚಗೃಹದ ನೀರನ್ನೇ ಸೋಂಕಿತರು ಕುಡಿದಿದ್ದಾರೆ. ಕುಡಿವ ನೀರು ಬೇಕು ಎಂದು ವಾರ್ಡಿನ ರೋಗಿಗಳು ಗಲಾಟೆ ಮಾಡಿದ್ದಕ್ಕೆ ಸದ್ಯ ವ್ಯವಸ್ಥೆ ಆಗಿದೆಯಂತೆ. ಇನ್ನು ಸ್ವಚ್ಛತೆ ಕೂಡ ಮರೀಚಿಕೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸೋಂಕಿತರನ್ನು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುವಂತೆ ಮಾಡಿದೆ. ಈ ಅವ್ಯವಸ್ಥೆಯ ಬಗ್ಗೆ ವಾರ್ಡಿನಲ್ಲಿರುವ ಕರೊನಾ ರೋಗಿಗಳೇ ಖುದ್ದು ವಿಡಿಯೋ ಮಾಡಿ ದಿಗ್ವಿಜಯ ಟಿವಿಗೆ ಕಳಿಸಿದ್ದಾರೆ.
ಸೋಂಕಿತರು ಆಸ್ಪತ್ರೆಯಲ್ಲಿ ಅನುಭವಿಸುತ್ತಿರುವ ನರಕದ ಬಗ್ಗೆ ಅವರ ಮಾತುಗಳಲ್ಲೇ ಕೇಳಲು ಕೆಳಗಿನ ಲಿಂಕ್​ ಅನ್ನು ಕ್ಲಿಕ್​ ಮಾಡಿ.
https://www.facebook.com/VVani4U/videos/3842009705873153/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
