ಹಾಸನ:ಕೌದಿ ಕಲೆಯಲ್ಲಿ ಪರಿಣಿತರಾಗಿದ್ದ ಗಂಗಾಬಾಯಿ ದೇಸಾಯಿ (75) ಅವರು ಇಂದು ನಿಧನರಾಗಿದ್ದಾರೆ. ಅವರು ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ.
ಕೌದಿ ಕಲೆಯನ್ನು ಪ್ರಸಿದ್ಧಿಗೊಳಿಸಿದವರಲ್ಲಿ ಗಂಗಾಬಾಯಿ ಅವರು ಪ್ರಮುಖರು. ಅನೇಕ ಕೌದಿ ಪ್ರದರ್ಶನ ಮೂಲಕವೂ ಗಮನ ಸೆಳೆದಿದ್ದರು. ಅವರ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿದ್ದವು.
ಮೂಲತಃ ಬಸವನ ಬಾಗೇವಾಡಿ ಭಾಗದವರಾದ ಗಂಗೂಬಾಯಿ ಅವರಿಗೆ ಮೂವರು ಪುತ್ರರಿದ್ದಾರೆ. ಖ್ಯಾತ ಚಿತ್ರ ಕಲಾವಿದರಾದ ಬಿ.ಎಸ್.ದೇಸಾಯಿ ಕೂಡ ಅವರ ಮಕ್ಕಳಲ್ಲಿ ಒಬ್ಬರು. ಕಲೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಗಂಗಾಬಾಯಿ ತಮ್ಮ ಪತಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗಂಗಾಬಾಯಿ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ. ಗಂಗೂಬಾಯಿ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಜತೆ ರಂಗಸಿರಿ, ಹಸಿರು ಭೂಮಿ ಬಳಗ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಸ ಎಸೆಯುವವರಿಗೆ ಬುದ್ಧಿ ಕಲಿಸಿದ ನಾಯಿ! ಈ ನಾಯಿಯಿಂದ ಕಲಿಯುವುದು ಸಾಕಷ್ಟಿದೆ…

ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
