ಬೆಂಗಳೂರು:ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್(ಕೆಪಿಸಿಎಲ್) ಉಷ್ಣ ವಿದ್ಯುತ್ ಸ್ಥಾವರಗಳಿಗಾಗಿ ಸದ್ಯ 3 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಹೊಂದಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ.ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ಒಳಗೊಂಡಿರುವ 5020 ಮೆಗಾವ್ಯಾಟ್, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್) 1700 ಮೆಗಾವ್ಯಾಟ್,ಯರ್ಮರಸ್ 1600 ಸ್ಥಾಪಿತ ಸಾಮರ್ಥ್ಯದ 2 ಘಟಕಗಳನ್ನು ಹೊಂದಿರುವ ಉಷ್ಣ ವಿದ್ಯುತ್ ಕೇಂದ್ರಗಳಾಗಿದ್ದು, ಎಲ್ಲಾ ಘಟಕಗಳಿಗೂ 6 ದಿನಗಳಿಗೆ ಸಾಕಾಗಲಿದೆ.ಮಳೆಗಾಲದಿಂದಾಗಿ ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಸತತವಾಗಿ ಏರುತ್ತಿದೆ ಮತ್ತು ಜಲ ಉತ್ಪಾದನೆಯು ಸಹ ಸುಧಾರಿಸಿದೆ ಎಂದು ಕೆಪಿಸಿ ವಿವರಿಸಿದೆ.ರಾಜ್ಯದಲ್ಲಿ ಬೇಡಿಕೆಯು ದಿನಕ್ಕೆ ಸುಮಾರು 200 ರಿಂದ 210 ಮಿಲಿಯನ್ ಯೂನಿಟ್ ಇದೆ.ನವೀಕರಿಸಬಹುದಾದ ಇಂಧನ ಉತ್ಪಾದನೆಯು ಪ್ರಸ್ತುತ ಬೇಡಿಕೆಯ ಸುಮಾರು ಶೇ.40 ರಿಂದ 45 ರಷ್ಟು ಇರುವುದರಿಂದ ಉಷ್ಣ ಉತ್ಪಾದನೆಯ ಬೇಡಿಕೆಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ.ಉಷ್ಣ ವಿದ್ಯುತ್ ಸ್ಥಾವರಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಿದ್ದು, ಉತ್ಪಾದನೆಗೆ ಕನಿಷ್ಠ 2 ರಿಂದ 3 ಘಟಕಗಳನ್ನು ಮಾತ್ರ ಮೀಸಲಿಡಲಾಗುವುದು ಎಂದು ವಿವರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
