ಶ್ರೀಕಾಂತ ಶೇಷಾದ್ರಿಬೆಂಗಳೂರು:ಕಾಂಗ್ರೆಸ್ ಆರಂಭದಿಂದಲೂ ಮಾಸ್ ಬೇಸ್ ಪಕ್ಷ. ಅದನ್ನು ಕೇಡರ್ ಬೇಸ್ ಪಕ್ಷವಾಗಿ ಮಾಡಬೇಕೆಂಬ ಪ್ರಯತ್ನ ಆಗಿಂದಾಗ್ಗೆ ನಡೆದಿದೆಯಾದರೂ ಸಫಲ ಕಂಡಿದ್ದಿಲ್ಲ. ಆದರೆ ಇದೀಗ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲು ಹೊರಟಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳ ನೇಮಕವಾಗುತ್ತಿದ್ದಂತೆ ವಿವಿಧ ಘಟಕಗಳು, ಜಿಲ್ಲಾ ಮತ್ತು ಬ್ಲಾಕ್ ಘಟಕಗಳ ಪುನಾರಚನೆಯೂ ಆಗಲಿದೆ. ಈ ಬಾರಿ ವಿಶೇಷ ರೀತಿಯಲ್ಲಿ ಬೂತ್ ಸಮಿತಿ ಪುನಾರಚಿಸಲು ಡಿಕೆಶಿ ಉದ್ದೇಶಿಸಿದ್ದಾರೆ. ಬೂತ್ ಸಮಿತಿ ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಅರಿತ ಕೆಪಿಸಿಸಿ, ಪಕ್ಷದ ಮುಖಂಡರಿಗೆ ಜವಾಬ್ದಾರಿ ವಹಿಸುತ್ತಿದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಕೆ.ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ಸೇರಿ ಎಲ್ಲ ಪ್ರಮುಖ ನಾಯಕರು, ಶಾಸಕರು, ಮಾಜಿ ಶಾಸಕರು, ಕಳೆದ ಚುನಾವಣೆಯ ಅಭ್ಯರ್ಥಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರು, ಪ್ರಮುಖ ಮುಖಂಡರು ತಾವು ಮತ ಚಲಾಯಿಸುವ ಬೂತ್ ಸಮಿತಿ ರಚಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಶಿವಕುಮಾರ್ ಗುರಿ ನಿಗದಿ ಮಾಡಿದ್ದಾರೆ.
ನಾಯಕರು ಬೂತ್ ಸಮಿತಿಗಳಲ್ಲಿ ಹಿಂಬಾಲಕರನ್ನು ಹಾಕಿರುತ್ತೇವೆ. ಚುನಾವಣೆ ಬಳಿಕ ನಾವೂ ಬೂತ್ ಕಡೆಗೆ ಹೋಗಿಲ್ಲ. ಇನ್ಮುಂದೆ ಎಲ್ಲ ಮುಖಂಡರು ಬೂತ್ ರಚಿಸಬೇಕು. ಯಾರೇ ಪದಾಧಿಕಾರಿ ಆಗಬೇಕಾದರೆ ಬೂತ್​ನಿಂದ ಪ್ರತಿನಿಧಿಯಾಗಬೇಕು.| ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಪ್ರಮುಖರು ತಂತಮ್ಮ ಬೂತ್​ಗಳನ್ನು ಪುನಾರಚಿಸುವ ಕೆಲಸ ಮಾಡಿದಾಗ ಬೂತ್ ಸಮಿತಿಗಳಿಗೆ ಮಹತ್ವ ಬರುತ್ತದೆ. ಜತೆಗೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಬೂತ್ ಪ್ರತಿನಿಧಿಯಾಗಿಯೇ ಪಕ್ಷದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕೆಂಬ ಕಲ್ಪನೆ ಹೊಂದಲಾಗಿದೆ. ಇಷ್ಟು ವರ್ಷ ಬೂತ್ ಸಮಿತಿ ಬಹುತೇಕ ಆ ಭಾಗದ ಶಾಸಕರ ಅಥವಾ ಮುಖಂಡರ ಮನೆಗಳಲ್ಲೋ ನಿರ್ಧಾರವಾಗುತ್ತಿತ್ತು. ಪಕ್ಷದ ಕಚೇರಿಯಲ್ಲಿ ತೀರ್ವನವಾಗಿದ್ದೂ ಅಪರೂಪ. ಆ ಭಾಗದ ಪ್ರಮುಖರು ತೀರ್ವನಿಸಿ ಕಳಿಸಿದ ಪಟ್ಟಿ ಪಕ್ಷ ಒಪ್ಪಬೇಕಿದ್ದರಿಂದ ಬಹುತೇಕರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ, ಈ ಬೆಳವಣಿಗೆಗೆ ಅವಕಾಶ ನೀಡದಿರಲು ಒಂದು ಸೂಕ್ತ ಸ್ಥಳದಲ್ಲಿ ಸಭೆ ಮಾಡಿ ಬೂತ್ ಸಮಿತಿ ರಚಿಸಲು ಸೂಚಿಸಲಾಗಿದೆ.
ಯಾರಿಗೆಲ್ಲ ಅವಕಾಶ?:ಪ್ರಮುಖ ಬೆಳವಣಿಗೆ ಎಂದರೆ ಮಹಿಳಾ/ಯುವ ಕಾಂಗ್ರೆಸ್, ಸೇವಾದಳ, ಸಾಮಾಜಿಕ ಜಾಲತಾಣ ಘಟಕದವರು ಸಮಿತಿಯಲ್ಲಿ ಇರಲೇಬೇಕೆಂಬ ನಿಯಮ ಜಾರಿಗೆ ತರಲಾಗುತ್ತಿದೆ.
ಇದನ್ನೂ ಓದಿ:ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?
ಟ್ಯಾಬ್-ಆಪ್!:ಮಾಹಿತಿ ಸಂಗ್ರಹ, ದಾಖಲೀಕರಣಕ್ಕೆ ಮೊಬೈಲ್ ಅಪ್ಲಿಕೇಷನ್ ತರಲು ನಿರ್ಧರಿಸಲಾಗಿದೆ. ಬ್ಲಾಕ್ ಉಸ್ತುವಾರಿ ಅಥವಾ ಕೋ ಆರ್ಡಿನೇಟರ್ಸ್ ತಮಗೆ ಜವಾಬ್ದಾರಿ ನೀಡಿದ ಸ್ಥಳಕ್ಕೇ ತೆರಳಿ ಅಲ್ಲಿಂದಲೇ ಮಾಹಿತಿ, ಫೋಟೋ ಸಂಗ್ರಹಿಸಿ ಅಪ್​ಲೋಡ್ ಮಾಡಬೇಕು. ಅದು ಆ ಕ್ಷಣವೇ ಕೆಪಿಸಿಸಿ ಡೇಟಾ ಬ್ಯಾಂಕ್​ಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಟ್ಯಾಬ್ ಸಹ ಖರೀದಿಸಲಾಗುತ್ತಿದೆ.
ಬಿಜೆಪಿ ಮಾಡಿತ್ತು ತಂತ್ರ:ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಬೂತ್ ಸಮಿತಿಗೆ ಮಹತ್ವ ಕೊಟ್ಟಿತ್ತು. ಚುನಾವಣೆಗೆ ಮುನ್ನ ಪ್ರತಿ ಬೂತ್ ಕ್ರಿಯಾಶೀಲ ಆಗಿರಿಸಿಕೊಳ್ಳುವ ಜತೆಗೆ, ಈ ಸಮಿತಿ ಮೂಲಕ ಪ್ರತಿ ಬೂತ್​ನಲ್ಲಿ ಪಕ್ಷಕ್ಕೆ ಶೇ.50ಕ್ಕಿಂತ ಹೆಚ್ಚು ಮತ ತರಬೇಕೆಂಬ ಗುರಿ ನೀಡಲಾಗಿತ್ತು. ಪಕ್ಷದ ಮತಗಳೆಷ್ಟು, ಬೇರೆ ಪಕ್ಷಕ್ಕೆ ಎಷ್ಟು ಮತ ಇದೆ, ಎಷ್ಟು ಮತದಾರರ ಮನವೊಲಿಸಿದರೆ ಪಕ್ಷಕ್ಕೆ ಮತ ವರ್ಗಾಯಿಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲೇ ಚುನಾವಣೆ ರಣತಂತ್ರ ರೂಪಿಸಲಾಗಿತ್ತು. ಈ ಕಾರಣಕ್ಕೆ ಬಿಜೆಪಿಯ ಪ್ರತಿ ನಾಯಕರೂ ತಮ್ಮ ಬೂತ್ ಬಗ್ಗೆ ಗಮನ ಕೊಟ್ಟಿದ್ದರು.
ಯೋಧರಿಗೆ ನಮನ ಸಲ್ಲಿಸಿದ ಕೆಪಿಸಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 8 =
Remember me
