
ಬೆಂಗಳೂರು:ಮಹಿಳೆಯರ ಸಬಲೀಕರಣ ಮಾಡಲು ಕಾಂಗ್ರೆಸ್ ಆದ್ಯತೆ ನೀಡಿದ್ದು, ಮುಂದಿನ ಪೀಳಿಗೆಯ ನಾಯಕಿಯರನ್ನು ತಯಾರಿಗೆ ಹಿರಿಯರಿಂದ ಸಲಹೆ ಪಡೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಮಹಿಳಾ ಕಾಂಗ್ರೆಸ್ ಹಿರಿಯ ಮುಖಂಡರ ಸಭೆ ಬಳಿಕಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಿಷ್ಯಕ್ಕೆ ಮಹಿಳೆಯರನ್ನು ರಾಜಕೀಯವಾಗಿ ಯಾವ ರೀತಿ ತಯಾರು ಮಾಡುವುದು, ಹಿರಿಯ ಮಹಿಳಾ ನಾಯಕಿಯರ ಜವಾಬ್ದಾರಿ ಕುರಿತು ಚರ್ಚೆ ಮಾಡಲು ಇಂದು ಪಕ್ಷದ ಹಿರಿಯ ನಾಯಕಿಯರ ಸಭೆ ಕರೆಯಲಾಗಿತ್ತು ಎಂದರು.ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರ ಅಭಿಪ್ರಾಯ ಹೇಗಿದೆ? ನಮ್ಮ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಏನೇನು ಬದಲಾವಣೆ ಆಗಿದೆ? ನಾವು ಇಷ್ಟು ಉತ್ತಮ ಯೋಜನೆ ಕೊಟ್ಟಿದ್ದರೂ ಜನರ ನಿರೀಕ್ಷೆ ಏನು? ಲೋಕಸಭೆ ಚುನಾವಣೆಯಲ್ಲಿ ಇನ್ನೂ ಐದಾರು ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದ್ದರೂ ಯಾಕೆ ಸಾಧ್ಯವಾಗಿಲ್ಲ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.ಸಭೆಯಲ್ಲಿ ಸುಮಾರು 40 ಮಂದಿ ಹಿರಿಯ ನಾಯಕಿಯರು ತಮ್ಮ ಅನುಭವಗಳನ್ನು ಆಧರಿಸಿ ಸಲಹೆ ನೀಡಿದ್ದಾರೆ. ಪಕ್ಷದ ಎಲ್ಲಾ ಮಟ್ಟದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಬೇಕು. ನಮ್ಮ ಪಕ್ಷ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೀಸಲಾತಿ ನೀಡಿದ್ದು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ತರಲು ಹೋರಾಟ ಮಾಡುತ್ತಿದ್ದೇವೆ ಎಂದರು.
ವಿಧಾನಸಭೆಯಲ್ಲಿ 11 ಕ್ಷೇತ್ರಲೋಕಸಭೆಗೆ 6 ಕ್ಷೇತ್ರಕ್ಕೆ ಟಿಕೆಟ್:ವಿಧಾನಸಭೆ ಚುನಾವಣೆಯಲ್ಲಿ 11 ಹಾಗೂ ಲೋಕಸಭೆ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಹಂಚಿಕೆ ಮಾಡಲಾಗಿತ್ತು. ಮುಂದೆ ಇನ್ನೂ ಆದ್ಯತೆ ನೀಡಲಾಗುವುದು. ಕುಟುಂಬದವರ ಜತೆಗೆ ಕಾರ್ಯಕರ್ತರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರನ್ನು ಯಾವ ರೀತಿ ನಾಯಕರಾಗಿ ತಯಾರು ಮಾಡಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು ಎಂದರು.
ಗ್ಯಾರಂಟಿಗೆ 50 ಸಾವಿರ ಕೋಟಿಗ್ಯಾರಂಟಿ ಯೋಜನೆಗಳಿಂದ 50 ಸಾವಿರ ಕೋಟಿ ಹಣ ವಿನಿಯೋಗ ಮಾಡುತ್ತಿದ್ದು, ಮಹಿಳೆಯರಿಗೆ ಯಾವ ರೀತಿ ಉಪಯೋಗವಾಗುತ್ತಿದೆ ಎಂದು ಪರಿಶೀಲನೆ ಮಾಡಲಾಗುವುದು ಈಗ ಮುಖ್ಯವಾಗಿದೆ ಎಂದ ಅವರು, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದರು.
ಇಂದಿರಾಗಾಂಧಿ ಸ್ಮರಣೆಇಂದಿರಾ ಗಾಂಧಿ ಅವರು, ವೃದ್ಧಾಪ್ಯ ವೇತನ ಯೋಜನೆ ತಂದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಕಾರ್ಯಕ್ರಮ ತಂದಿದ್ದು ಕಾಂಗ್ರೆಸ್ ಸರ್ಕಾರ. ಗ್ರಾಮೀಣ ಪ್ರದೇಶದಲ್ಲಿ ಮನೆ ಹಾಗೂ ನಿವೇಶನ ನೀಡುವಾಗ ಮಹಿಳೆ ಹೆಸರಲ್ಲಿ ನೊಂದಣಿಯಾಗಬೇಕು ಎಂದು ಕಾನೂನು ಮಾಡಿದ್ದೇವೆ. ಆ ಮೂಲಕ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಕವಾಗಿ ಶಕ್ತಿ ತುಂಬುವುದರ ಜತೆಗೆ ರಾಜಕೀಯವಾಗಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿ ತಾಲೂಕಿನಲ್ಲೂ ಮಹಿಳೆಯರ ಜತೆ ಸಭೆ ಮಾಡಬೇಕು ಎಂದು ಮಹಿಳಾ ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಹಂತ ಹಂತವಾಗಿ ಆದ್ಯತೆ:ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವಿದೆ. ಪ್ರತಿ ಸಮಿತಿಯಲ್ಲೂ ಮಹಿಳೆಯರಿಗೆ ಸ್ಥಾನ ನೀಡಲು ಸೂಚಿಸಲಾಗಿದೆ. ಮಹಿಳೆಯರಿಗೆ ಹಂತ ಹಂತವಾಗಿ ಆದ್ಯತೆ ನೀಡಲಾಗುವುದು. ಒಮ್ಮೆಲೆ ಎಲ್ಲಾ ಬದಲಾವಣೆ ತರಲು ಸಾಧ್ಯವಿಲ್ಲ ಎಂದರು.
ತಾಂತ್ರಿಕ ಸಮಿತಿಭದ್ರಾ ಆಣೆಕಟ್ಟು ಗೇಟ್ ತಾಂತ್ರಿಕ ತೊಂದರೆಯಿಂದ ನೀರು ಪೋಲಾಗುತ್ತಿರುವ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ನನ್ನನ್ನು ಭೇಟಿ ಮಾಡಿದ್ದು ತಾಂತ್ರಿಕ ಸಮಿತಿ ಕಳುಹಿಸಿಕೊಟ್ಟಿದ್ದು, ಹೇಗೆ ತಡೆಯಬೇಕು ಎಂದು ಪರಿಶೀಲನೆ ಮಾಡಲಾಗುವುದು ಎಂದರು.
ಜನಸಂಪರ್ಕ ಸಭೆ:ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದರು ಜನಸ್ಪಂದನಾ ಕಾರ್ಯಕ್ರಮ ಮಾಡಿದಾಗ ಅಧಿಕಾರಿಗಳು ಹೋಗಿದ್ದರು ಎಂಬ ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ನಾನು ಜನಸಂಪರ್ಕ ಸಭೆ ಮಾಡಿದ್ದೇನೆ ಹೊರತು, ಬೇರೆಯವರು ಸಭೆ ಮಾಡಿಲ್ಲ. ಅಧಿಕಾರಿಗಳ ಕಾರ್ಯಕ್ಕೆ ಬೆಂಬಲವಾಗಿ ಹೋಗಿ ಧನ್ಯವಾದ ತಿಳಿಸಿರಬಹುದು ಎಂದರು.
ಹಾಜರಿದ್ದವರು:ಹಿರಿಯ ಮಹಿಳಾ ಮುಖಂಡರ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಜಿ ಸಿ ಚಂದ್ರಶೇಖರ್, ವಸಂತ್ ಕುಮಾರ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆಯರಾದ ರಾಣಿ ಸತೀಶ್, ತಾರಾದೇವಿ ಸಿದ್ಧಾರ್ಥ, ಮುಖಂಡರಾದ ಜಾಲಜಾ ನಾಯಕ್, ಬಿಂಬಾ ರಾಯ್ಕರ್, ಜಯಮ್ಮ ಮತ್ತಿತರರು ಭಾಗವಹಿಸಿದ್ದರು.
ಹಿರಿಯ ನಾಯಕಿಯರಿಗೆ ಸನ್ಮಾನ:ಇದೇ ಸಂದರ್ಭದಲ್ಲಿ ಹಿರಿಯ ನಾಯಕಿಯರಾದ ಬಿಂಬಾ ರಾಯ್ಕರ್, ಸುಶೀಲ ಕೃಷ್ಣಮೂರ್ತಿ, ಪಂಕಜಾಕ್ಷಿ, ಮನೋರಮ ಹಾಗೂ ಪ್ಯಾರೆಜಾನ್ ಅವರನ್ನು ಡಿಸಿಎಂ ಶಿವಕುಮಾರ್ ಅವರು, ಶಾಲು, ಹಾರ, ಪೇಟ ಹಾಕಿ ಸನ್ಮಾನ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seventeen =
Remember me
