ಬೆಂಗಳೂರು: ಡೇಟಾ ವಿಶ್ಲೇಷಣೆ ಕಾಪೋರೇಟ್ ಕಂಪನಿಗಳಲ್ಲಿ ಸಾಮಾನ್ಯ ಪ್ರಕ್ರಿಯೆ. ಅದೇ ಮಾದರಿಯಲ್ಲಿ ಪಕ್ಷದಲ್ಲೂ ಡೇಟಾ ವಿಶ್ಲೇಷಣೆಗೆ ಕಾಂಗ್ರೆಸ್ ಮುಂದಾಗಿದೆ. ಪಕ್ಷದ ಐಟಿ ಕೋಶದ ಮೂಲಕ ಡೇಟಾ ವಿಶ್ಲೇಷಣೆಗೆ ಒತ್ತು ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಪಕ್ಷದಿಂದ ಈಗಾಗಲೆ ಡಿಜಿಟಲ್ ಯೂತ್ ನೇಮಿಸುತ್ತಿದ್ದು, 58 ಸಾವಿರ ಬೂತ್​ಗಳಿಂದಲೂ ನಿಖರ ಅಂಕಿ-ಅಂಶ ಸಂಗ್ರಹಿಸುವುದು, ವಿಶ್ಲೇಷಿಸುವುದು, ಪ್ರಮುಖವಾಗಿ ಜನಾಭಿಪ್ರಾಯ ಕಂಡುಕೊಂಡು ನಾಡಿಮಿಡಿತ ಅರಿಯುವ ಕೆಲಸವನ್ನು ಮಾಡುವ ಉದ್ದೇಶದಿಂದ ವಿಶ್ಲೇಷಣಾ ಚಟುವಟಿಕೆ ನಡೆಸಲಾಗುತ್ತದೆ.
ಈ ಬಗ್ಗೆ ‘ವಿಜಯವಾಣಿ’ಗೆ ವಿವರಣೆ ನೀಡಿದ ಕೆಪಿಸಿಸಿ ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಸೆಲ್​ನ ಅಧ್ಯಕ್ಷ, ಶಾಸಕ ಪ್ರಿಯಾಂಕ್ ಖರ್ಗೆ, ಪಕ್ಷದ ಡಿಜಿಟಲ್ ಯೂತ್ ಅಥವಾ ಬೇರೆ ರೂಪದಲ್ಲಿ ಸಂಗ್ರಹವಾಗುವ ದತ್ತಾಂಶವನ್ನು ಕ್ರೋಡಿಕರಿಸಿ ಅದನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಬಳಸಿಕೊಂಡರೆ ಪಕ್ಷಕ್ಕೆ ಅನುಕೂಲವಾಗುತ್ತದೆ. ಕಾರ್ಯಕ್ರಮ ಜಾರಿಗೂ ಸಹಾಯವಾಗುತ್ತದೆ. ತಿರ್ವನ ಕೈಗೊಳ್ಳಲು ಸುಲಭವಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ:ಸ್ಮಾರ್ಟ್​ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…
ಪಕ್ಷದ ತೀರ್ವನದ ಬಗ್ಗೆ ಫೀಡ್​ಬ್ಯಾಕ್ ಯಾವ ರೀತಿ ಇದೆ, ಕಾರ್ಯಕರ್ತರ ಅನಿಸಿಕೆ, ಅಭಿಪ್ರಾಯ ಕ್ರೋಡಿಕರಿಸಲು ಅನುಕೂಲವಾಗಲಿದೆ. ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಹತ್ತಿರವಾಗಬಹುದು. ಈ ನಿಟ್ಟಿನಲ್ಲಿ ಪಕ್ಷದಿಂದ ಈ ತೀರ್ಮಾನ ಮಾಡಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ವಿವಿಧ ಘಟಕಗಳ ಮುಖ್ಯಸ್ಥರಿಗೆ ನಮ್ಮ ಕೋಶ ಬೆನ್ನೆಲುಬಾಗಿ ಕೆಲಸ ಮಾಡಲಿದೆ. ಪಕ್ಷದ ಚಟುವಟಿಕೆ ಎಲ್ಲಿ ಕ್ರಿಯಾಶೀಲವಾಗಿದೆ, ಎಲ್ಲಿ ಚೇತರಿಸಿಕೊಳ್ಳಬೇಕು, ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದು ಸೇರಿ ಎಲ್ಲ ರೀತಿಯಲ್ಲೂ ಅಧ್ಯಯನ ಮಾಡಿ ತೀರ್ಮಾನ ಮಾಡಲು ನಮ್ಮ ಡೇಟಾ ವಿಶ್ಲೇಷಣೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಆಗಸ್ಟ್​ 31ರ ನಂತರ ಲೋನ್​ ಮೊರಟೋರಿಯಂ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬ್ಯಾಂಕರ್​​ಗಳು
https://www.vijayavani.net/the-curious-case-of-a-belgian-woman-who-temporarily-thought-she-was-a-chicken/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
