
ಬೆಂಗಳೂರು:ತಾಯಂದಿರು ದಾರಿ ತಪ್ಪಿದ್ದಾರೆ ಅಂತ ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಹಿಳೆಯರಿಗೆ ಅಪಮಾನ ಮಾಡಿರುವುದಲ್ಲದೆ, ಹೆಣ್ಣು ಮಕ್ಕಳ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಸಹ ಅಧ್ಯಕ್ಷೆ ಐಶ್ವರ್ಯಾ ಮಹಾದೇವ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರು ಮಹಿಳೆ ಮೇಲೆ ಮಾತನಾಡಿರುವುದು ಇದು ಮೊದಲಲ್ಲ. ಎಲ್ಲಿ ಮಲಗಿದ್ದೆ ಅಂತ ಕೇಳಿ ಮಹಿಳೆಗೆ ಅವಮಾನ ಮಾಡಿದ್ದರು. ಸುಮಲತಾ ಬಗ್ಗೆ ಏನು ಮಾತನಾಡಿದ್ರು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅವರೊಬ್ಬರು ಶಾಸಕರು ಮತ್ತು ಮಾಜಿ ಸಿಎಂ ಎನ್ನುವ ಜವಬ್ದಾರಿಯನ್ನು ಮರೆತು ಮಾತನಾಡಿದ್ದಾರೆ. ಬಹುಶಃ ಗ್ಯಾರಂಟಿಗಳಿಂದ ಅವರಿಗೆ ಲಾಸ್ ಆಗಿರಬಹುದು ಎಂದರು.ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಕೂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಅವರ ವಿದ್ಯಾಭ್ಯಾಸಕ್ಕೆ ಹೇಗೆ ನೆರವಾಗಿವೆ ಎಂಬುದನ್ನು ಹೇಳಿಕೊಂಡಿದ್ದಾರೆ. ಅದನ್ನು ಮಾಧ್ಯಮಗಳು ಬಿತ್ತರಿಸಿವೆ. ಬೆಲೆ ಏರಿಕೆ, ಬಡತನ, ನಿರುದ್ಯೋಗ ಸಮಸ್ಯೆಗಳಿಂದ ತತ್ತರಿಸಿರುವ ಜನರಿಗೆ ಆಸರೆಯಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.ಮೈಸೂರಿನಲ್ಲಿ ಪ್ರಧಾನಿ ಮೋದಿ, ನಾರಿ ಸಮ್ಮಾನ, ಬೇಟಿ ಬಚಾವ್, ಬೇಟಿ ಪಡಾವ್ ಎಂದೆಲ್ಲಾ ಮೋದಿ ಅವರು ಮಾತನಾಡಿದರೆ ಹೊರತು. ಕುಮಾರಸ್ವಾಮಿ ಹೇಳಿಕೆ ಖಂಡಿಸಲಿಲ್ಲ. ಆದರೆ ಕಾಂಗ್ರೆಸ್ ಈ ಬಗ್ಗೆ ಹೋರಾಟ ಮಾಡಲಿದೆ ಎಂದರು.ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗಬಹುದು ಎಂದುಕೊಂಡಿದ್ದರು. ಅವರಿಗೆ ಹೀನಾಯ ಸೋಲನ್ನು ಈಗಲೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಬೇರೆ ಬೇರೆ ಹೇಳಿಕೆಗಳ ಮೂಲಕ ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಗೃಹ ಲಕ್ಷ್ಮಿಯಿಂದ ಮಹಿಳೆಯರು ಸಂತಸದಲ್ಲಿದ್ದಾರೆ. ಬಸ್‌ನಲ್ಲಿ ಫ್ರೀಯಾಗಿ ಹೂಮಾರಿ ಬರ್ತಿದ್ದಾರೆ. ಆ ಮಹಿಳೆಯರು ದಾರಿ ತಪ್ಪಿದ್ದಾರಾ ಕುಮಾರಸ್ವಾಮಿ ಅವರೇ? 2 ಸಾವಿರದಿಂದ ಮಹಿಳೆಯರು ಸ್ವಾವಲಂಬಿಯಾಗ್ತಿದ್ದಾರೆ. ಸಬಲೀಕರಣ ಆಗುತ್ತಿದೆ ಎನ್ನುವ ಬಗ್ಗೆ ನಿಮ್ಮ ಜಾಣ ಮರೆವು ಯಾಕೆ? ಎಂದು ಕೇಳಿದರು.ರಾಜ್ಯ ಮಹಿಳಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿದೆ. ಇನ್ನು ಕೇಂದ್ರ ಮಹಿಳಾ ಆಯೋಗ ಮಾತ್ರ ಇನ್ನು ಕಾರ್ಯಪ್ರವೃತ್ತವಾಗಿಲ್ಲ. ಕುಮಾರಸ್ವಾಮಿ ಅವರ ಕ್ಷಮೆಯಾಚನೆ ನಾವು ನೋಡಿದೆವು. ಸಮರ್ಥನೆಯ ಕ್ಷಮೆಯಾಚನೆ ಎಲ್ಲೂ ನಡೆಯುವುದಿಲ್ಲ ಎಂದರು.2 ಕೋಟಿ ಉದ್ಯೋಗವನ್ನ ಎಲ್ಲಿ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ, ಬಿಜೆಪಿಯ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇವೇಗೌಡರ ಕುಟುಂಬದಲ್ಲಿ 1500 ಕೋಟಿ ಆಸ್ತಿ ಇದೆ ಅಂತ 2011ರಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಕೆಎಂಎ್ ರೇವಣ್ಣನವರ ಭ್ರಷ್ಟಾಚಾರ ಬಗ್ಗೆ ಯಡಿಯೂರಪ್ಪನವರು ಮಾತನಾಡಿದ್ದರು. ನಾನು ಬಿಜೆಪಿಗೆ ಹೋಗಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಎಲ್ಲವನ್ನು ಮರೆತು ಒಂದೇ ವೇದಿಕೆಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೇಕೆದಾಟು ಯೋಜನೆಗೆ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದ್ದು ನೀಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5 ಸಾವಿರ ಕೋಟಿ ಹಣವನ್ನು ಕೇಂದ್ರ ನೀಡಲಿಲ್ಲ. ಕಳಸಾ ಬಂಡೂರಿ ವಿಚಾರದಲ್ಲಿ ಗೋವಾ ಸರ್ಕಾರದ ಜತೆ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ನೀವು ರೈತರ ಪರವಾಗಿ ಧ್ವನಿ ಎತ್ತಬಹುದಾಗಿತ್ತಲ್ಲವೇ? ಎಂದು ಕೇಳಿದರು.ಚುನಾವಣೆ ವೇಳೆ ಪಂಚರತ್ನ ಘೋಷಣೆ ಮಾಡಿದ್ದು ಪಂಚ ಪಂಗನಾಮವಾಗಿದ್ದು ಗೊತ್ತಿಲ್ಲವೇ?ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದರಾದ ಡಿ.ಕೆ ಸುರೇಶ್ ಬಗ್ಗೆ ಯಾವ ರೀತಿ ಮಾತನಾಡಿದ್ದೀರಿ ಗೊತ್ತಿದೆ. ಆದರೆ ನೀವು ಮಾತನಾಡುವಾಗ ಸೂಕ್ಷತೆ ಹಾಗೂ ತೂಕದ ಮಾತುಗಳನ್ನಾಡಿ ಎಂದರು.ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಹ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
