ಬೆಂಗಳೂರು: ಬಿಜೆಪಿ ವಿಶ್ವಾಸ ದ್ರೋಹಿ ಪಕ್ಷ ಎನ್ನುವುದು ಸಾಬೀತಾಗಿದೆ. ಜನರಿಗೆ ಮೀಸಲಾತಿ ಎಂಬ ಚಾಕೋಲೇಟ್ ಹಂಚಿ ಚುನಾವಣೆಯ ಸಮಯದಲ್ಲಿ ಜೇನುಗೂಡಿಗೆ ಕೈ ಹಾಕಿದ್ದಾರೆ. ಎಲ್ಲಾ ಸಮಾಜಕ್ಕೂ ಬಿಜೆಪಿ ಸರ್ಕಾರ ದ್ರೋಹ ಮಾಡಿದ್ದು, ರಾಜಕೀಯ ಬದ್ದತೆ ಇದೆಯಾ? ಎಂದು ಬಿಜೆಪಿ ವಿರುದ್ಧು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡ್ತಾರೆ… ಬರೀ ಮೊಸರನ್ನ ತಿಂತಾರೆ; ಅನಿತಾ ಕುಮಾರಸ್ವಾಮಿ
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮೇ 13 ಬಿಜೆಪಿ ಸರ್ಕಾರದ ಶವಾಚರಣೆ ನಡೆಯುತ್ತದೆ. ಮೋಸ, ವಿಶ್ವಾಸ ದ್ರೋಹ ಮಾಡಿರುವುದಕ್ಕೆ ಯಾರು ಹೊಣೆ? ಸಮಾಜದ ಬೆನ್ನಿಗೆ ಅಲ್ಲ, ಹೃದಯಕ್ಕೆ ಚೂರಿ ಹಾಕಿದ್ದೀರಿ. ಡಬಲ್ ಇಂಜಿನ್ ಸರ್ಕಾರ ಸಂಸತ್‌ನಲ್ಲಿ ಮಾಡಬೇಕಿತ್ತು ಎಂದು ಡಿಕೆಶಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ವಿಚಾರ ಆಮೇಲೆ. ಮೊದಲು ನಿಮ್ಮ ಕೆಲಸದ ಸಾಧನೆ ಏನೆಂದು ಹೇಳಿ ಎಂದು ಬಿಜೆಪಿ ಸರ್ಕಾರವನ್ನು ಡಿಕೆಶಿ ಪ್ರಶ್ನಿಸಿದರು. ಮಿಸ್ಟರ್ ಯಡಿಯೂರಪ್ಪ, ನಿಮ್ಮ ಕೆಲಸ ಏನು ಹೇಳಿ? 40%ನಿಂದಾಗಿ ಬಿಜೆಪಿ 40 ಸ್ಥಾನ ಗೆಲ್ಲಲಿದೆ. ಯುವಕರಿಗೆ, ವರ್ತಕರಿಗೆ ಮೋಸ ಮಾಡಿದ್ದೀರಿ. ಈ ಬಾರಿಯ ಚುನಾವಣೆಯಲ್ಲಿ ನೀವು 40 ಸೀಟು, ನಾವು 150 ಸೀಟ್ ಗೆಲ್ಲುತ್ತೇವೆ. ಇದನ್ನು ರಕ್ತದಲ್ಲಿ ನಾನು ಬರೆದುಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಒದಿ:ವಿಜಯಪುರದಲ್ಲಿ ಲೈವ್ ವಿಡಿಯೋ ಆನ್​ ಮಾಡಿ ವಿವಾಹಿತೆ ಸಾವಿಗೆ ಶರಣು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
