ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಸಚಿವ ಎಸ್​ಟಿ ಸೋಮಶೇಖರ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ಯಾಂಟ್ ಜಾರಿದ್ರೆ ಅವರ ಪ್ಯಾಂಟ್​ನ್ನು ಅವರೇ ಹಾಕಿಕೊಳ್ಳಬೇಕು. ಮತ್ತೊಬ್ಬರು ಪ್ಯಾಂಟ್ ಹಾಕೋಕೆ ಆಗಲ್ಲ. ಪೊಲಿಟಿಕಲ್ ಗೇಮ್​ನಲ್ಲಿ ಕೆಲವರು ಷಡ್ಯಂತ್ರ ಮಾಡುತ್ತಾರೆ. ಹುಶಾರಾಗಿರಬೇಕು. 25 ವರ್ಷ ಶಾಸಕರಾಗಿ, ಮೂರು ಬಾರಿ ಸಚಿವರಾಗಿರೋರು ದಡ್ಡರಾ? ಎಂದು ಪ್ರಶ್ನಿಸಿದ ಅವರು, ಸಿಡಿ ನಕಲಿಯೋ? ಅಸಲಿಯೋ? ಅನ್ನುವುದನ್ನು ಮಾಧ್ಯಮಗಳು ನಿರ್ಧರಿಸಲಿ, ಪಾಪ ರಮೇಶ್ ಜಾರಕಿಹೊಳಿ ನೊಂದಿದ್ದಾನೆ ಎಂದು ಹೇಳಿದ್ದಾರೆ.
ಎಸ್​ಟಿ ಸೋಮಶೇಖರ್ ಅವರನ್ನು ನಾನು ಬಿಜೆಪಿಗಿಂತ ಚೆನ್ನಾಗಿ ಬಲ್ಲೇನು, ಸಿಡಿ ಹಿಂದೆ ಕಾಂಗ್ರೆಸ್​ ಕೈವಾಡ ಇದ್ದರೇ ಏನೇನಿದೆಯೋ ಅದನ್ನು ಮಾಧ್ಯಮಗಳ ಮುಂದೆ ಅವರೇ ಹೇಳಲಿ. 20 ವರ್ಷಗಳಿಂದ ಅವರು ಕಾಂಗ್ರೆಸ್​ನಲ್ಲಿದ್ದರಲ್ಲಾ? ಅವಾಗ ಏನೇನು ಆಗಿದೆಯೋ ಅದನ್ನೂ ಹೇಳಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್
ರಮೇಶ್ ಜಾರಕಿಹೊಳಿಯನ್ನು ನಾನು ಚೆನ್ನಾಗಿ ಬಲ್ಲೇನು. ಅವನು ನಾನು ಒಂದು ಕಾಲದಲ್ಲಿ ಚೆನ್ನಾಗಿ ಇದ್ದೇವು. ನಂತರ ನನ್ನ ಬಗ್ಗೆ ಹುಚ್ಚುಚ್ಚು ಆಗಿ ಹೇಳಿಕೆ ಕೊಟ್ಟ. ಅವತ್ತಿಂದ ಅವನ ಸ್ನೇಹವನ್ನು ನಾನು ಬಿಟ್ಟೆ ಎಂದು ಡಿಕೆಶಿ ಹೇಳಿದರು.
ಇದೆಂಥ ಹೊಸ ಅವತಾರನಪ್ಪ! ಬಲೂನು ಬಿಟ್ಟು ಭಾರತವನ್ನು ಹೆದರಿಸಲು ನೋಡ್ತಿದೆಯೇ ಪಾಕ್​?

ಈ ಫೋಟೋದಲ್ಲಿರುವವರು ರಾಜ್ಯವೊಂದರ ಮಾಜಿ ಮುಖ್ಯಮಂತ್ರಿ! ಯಾರೆಂದು ಗುರುತಿಸಿ ಹೇಳಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eighteen =
Remember me
