ರಾಮನಗರ:ಮಾಗಡಿಯಲ್ಲಿಂದು ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಕಾರ್ಯಕರ್ತರನ್ನು ಬೇವರ್ಸಿಗಳು ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮ್ಮ ಭಾಷಣದ ವೇಳೆ ಹಿಂದೆ ಯಾರು ನಿಲ್ಲದಂತೆ ಡಿಕೆಶಿ ಕಾರ್ಯಕರ್ತರಿಗೆ ಹೇಳಿದರು. ನಾನು ದೂರದಲ್ಲಿ ಇದೀನಿ ಹಿಂದೆ ಕುಳಿತಿರುವವರಿಗೆ ಕಾಣಲಿ ಅಂತ ಎಲ್ಇಡಿ ಪರದೆ ಹಾಕಿದ್ದಾರೆ. ಇವರೆಲ್ಲ ಅಡ್ಡ ಬಂದ್ಬಿಟ್ರು ಬೇವರ್ಸಿಗಳು ಎಂದು ತೆಗಳಿದ್ದಾರೆ.
ಇದನ್ನೂ ಓದಿ:ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಗೊತ್ತಾ?: ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ
ಮಾಗಡಿ ವಿಧಾನಸಭಾ ಕ್ಷೇತ್ರದ ಜಾಲಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಕಾರ್ಯಕರ್ತರಿಗೆ ಬೈದ ವಿಡಿಯೋ ಇದೀಗ ವೈರಲ್ ಆಗಿದ್ದು, ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಂತಾಗಿದೆ.
ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿಸ ಡಿಕೆಶಿ, 2023ರ ವಿಧಾನಸಭಾ ಚುನಾವಣೆಯ ಸರ್ವೆಯನ್ನು ನಾನು ಮಾಡಿಸಿದ್ದೇನೆ. ಕಾಂಗ್ರೆಸ್ 139 ರಿಂದ 140 ಸೀಟ್ ಗೆಲ್ಲುತ್ತದೆ. ಬಿಜೆಪಿ 65 ಸೀಟ್ ಗೆಲ್ಲಬಹುದು. ಉಳಿದದ್ದು ಎಷ್ಟು ಎಂದು ನೀವೆ ಲೆಕ್ಕಹಾಕಿಕೊಳ್ಳಿ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್​ಗೆ 19 ರಿಂದ 20 ಸೀಟ್ ಬರುತ್ತೆ ಎಂದರು.
ಇದೇ ವೇಳೆ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಹೊಸದೇನಲ್ಲ, ಮೊದಲಿನಿಂದ ಅವರು ಬಿಜೆಪಿಗೆ ಬೆಂಬಲಿಸ್ತಿದ್ರು‌. ಅವರ ಇಷ್ಟದ ಹಾಗೆ ಅವರು ಮಾಡ್ತಾರೆ. ಅದು ಅವರ ವೈಯಕ್ತಿಕ ವಿಚಾರ. ಅವರು ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು. ಅವರಿಗೆ ಒಳ್ಳೆದಾಗಲಿ ಎಂದರು. (ಏಜೆನ್ಸೀಸ್​)
ನಾನು ಸರ್ವೆ ಮಾಡಿಸಿದ್ದೇನೆ ಕಾಂಗ್ರೆಸ್​ 140 ಸ್ಥಾನಗಳಲ್ಲಿ ಗೆಲ್ಲಲಿದೆ: ಡಿ.ಕೆ. ಶಿವಕುಮಾರ್​

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಒಯೊ ಸಂಸ್ಥಾಪಕ ರಿತೇಶ್​ ಅಗರ್ವಾಲ್​ಗೆ ಪಿತೃ ವಿಯೋಗ​

5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್​ ಪರೀಕ್ಷೆ ರದ್ದು: ಹೈಕೋರ್ಟ್ ಮಹತ್ವದ ಆದೇಶ​

Sign in to your account
Please enter an answer in digits:sixteen + eighteen =
Remember me
