ಬೆಂಗಳೂರು:ಕೆಪಿಸಿಸಿ ಕಾರ್ಯಾಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯಕ್ರಮ ಭಾನುವಾರ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಿತು. ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ರಾಮಲಿಂಗಾರೆಡ್ಡಿ ಹಾಗೂ ಧೃವನಾರಾಯಣ್‌ ನೂತನ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇಬ್ಬರು ನಾಯಕರು ಪದಗ್ರಹಣ ಮಾಡಿದ್ದಾರೆ. ನೂತನ ಮಾದರಿಯಲ್ಲಿ ಸೋನಿಯಾ ಗಾಂಧಿ ಟೀಂ ಮಾಡಿದ್ದಾರೆ. ರಾಮಲಿಂಗಾರೆಡ್ಡಿ ಬಿಬಿಎಂಪಿ ಕಾರ್ಪೋರೇಷನ್ ಸದಸ್ಯರಾಗಿ ಬಂದವರು. 7 ಬಾರಿ ಶಾಸಕರಾಗಿ ಆಯ್ಕೆಯಾಗಿ, ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದಾರೆ. ಯಾರೂ ಗೆಲ್ಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ ಗೆಲುವು ಸಾಧಿಸಿದ್ರು. ಪಕ್ಷದ ಆಧಾರ ಸ್ತಂಭವಾಗಿ ನಿಂತ ಅವರನ್ನ ಕಾಂಗ್ರೆಸ್ ಮರೆಯಲು ಸಾಧ್ಯವಿಲ್ಲ. ಇದಕ್ಕಾಗಿ ಅವರಿಗೆ ಜವಾಬ್ದಾರಿ ಹಂಚಲಾಗಿದೆ ಎಂದರು.
ಧೃವನಾರಾಯಣ್ ಕೂಡ ವಿದ್ಯಾರ್ಥಿ ನಾಯಕರಾಗಿ ಬಂದವರು. ಬಳಿಕ ಲೋಕಸಭೆಗೆ ಆಯ್ಕೆಯಾದವರು. ಇವರಿಬ್ಬರಿಗೂ ಅಧಿಕಾರ ಹಂಚಿಕೆ ಮಾಡಲಾಗಿದೆ. ಹೆಚ್ಚಿನ ಜವಾಬ್ದಾರಿಯನ್ನು ನಾವೆಲ್ಲ ಒಗ್ಗಟ್ಟಾಗಿ ಮಾಡಬೇಕಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ಮೇಲೆ ನಂವಿಕೆ ಇಟ್ಟಿದ್ದಾರೆ. ನಿಂಬೆಹಣ್ಣಿನ ಹುಳಿ ಇತರ ಹಣ್ಣುಗಳ ಹುಳಿಗಿಂತ ಶ್ರೇಷ್ಠ. ಮಲ್ಲಿಕಾರ್ಜುನ ಖರ್ಗೆ ಅವರು ಹತ್ತು ಬಾರಿ ಚುನಾವಣೆ ಗೆದ್ದಿದ್ದಾರೆ. ಅವರ ಸಾಮರ್ಥ್ಯ ಗುರುತಿ ಅವರನ್ನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕರ್ನಾಟಕದ ನಾಯಕರು ಸಮರ್ಥರು ಅನ್ನೋದನ್ನ ನಮ್ಮ ನಾಯಕರು ತೋರಿಸಿದ್ದಾರೆ ಎಂದು ಡಿಕೆಶಿ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಡಿ.ಕೆ. ಸುರೇಶ್, ಬಿ.ಸಿ. ಚಂದ್ರಶೇಖರ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು.
ಪಾಲಕರು ಬೆಂಗಳೂರಿಗೆ ಹೊರಟ ಬೆನ್ನಲ್ಲೇ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವಿನ ಮನೆಯ ಕದ ತಟ್ಟಿದ್ದೇಕೆ?

ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ

ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − five =
Remember me
