ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ತನ್ನ ವಾಗ್ಧಾಳಿಯನ್ನು ಮುಂದುವರೆಸಿರುವ ಕರ್ನಾಟಕ ಕಾಂಗ್ರೆಸ್​ ಮುಸ್ಲಿಮರ ಮೀಸಲಾತಿ ರದ್ಧತಿ ವಿಚಾರವಾಗಿ ಸರಣಿ ಟ್ವೀಟ್​ ಮಾಡಿದೆ.
ಬಸವರಾಜ್​ ಬೊಮ್ಮಾಯಿ ಅವರೇ ಮೀಸಲಾತಿ ಘೋಷಣೆ ಬರೀ ನಿಮ್ಮ ರಾಜಕೀಯ ಗಿಮಿಕ್​ ಎಂದು ಕರ್ನಾಟಕ ಕಾಂಗ್ರೆಸ್​ ಸರಣಿ ಟ್ವಿಟ್​ ಮಾಡುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಬಸವರಾಜ್​ ಬೊಮ್ಮಾಯಿ ಅವರೇ ನಿಮ್ಮ ಮೀಸಲಾತಿ ಗಿಮಿಕ್​ ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜನತೆಗೆ ಈಗ ನಿಮ್ಮ ಉತ್ತರವೇನು, ಸಬೂಬುಗಳೇನು ಎಂದು ಪ್ರಶ್ನಿಸಿದೆ.
'@BSBommaiಅವರೇ,ನಿಮ್ಮ "ಮೀಸಲಾತಿ ಗಿಮಿಕ್" ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಜನತೆಗೆ ಈಗ ನಿಮ್ಮ ಉತ್ತರವೇನು, ಸಾಬೂಬುಗಳೇನು?ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂ ಎತ್ತಿ ಹಿಡಿದಿದೆ.ಹಾಗೂ ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಬೆತ್ತಲುಗೊಳಿಸಿದೆ.
ಇದನ್ನೂ ಓದಿ:ಧಾರ್ಮಿಕ ಘೋಷಣೆ ಕೂಗುವಂತೆ ಬಾಲಕನ ಮೇಲೆ ಹಲ್ಲೆ; ಆರೋಪಿ ಬಂಧನ
ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂ ಎತ್ತಿ ಹಿಡಿದಿದೆ ಹಾಗೂ ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಬೆತ್ತಲುಗೊಳಿಸಿದೆ ಎಂದು ಟೀಕಿಸಿದೆ.
ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್‌ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ದಾರ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಬಿಜೆಪಿ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.
ಅನುಷ್ಠಾನ ಅಸಾಧ್ಯ ಎಂಬುದು ಸುಪ್ರೀಂ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ ಎಂದು ಸರಣಿ ಟ್ವೀಟ್​ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್‌ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ದಾರ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು@BJP4Karnatakaಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ."ಅನುಷ್ಠಾನ ಅಸಾಧ್ಯ" ಎಂಬುದು ಸುಪ್ರೀಂ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ.pic.twitter.com/Dqji0e32Fx
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
