|ಅರವಿಂದ ಅಕ್ಲಾಪುರಶಿವಮೊಗ್ಗ
ಒಮ್ಮೆ ನಡೆದ ಪರೀಕ್ಷೆಯಲ್ಲಿ ಅಕ್ರಮದ ವಾಸನೆ. ಎರಡನೇ ಬಾರಿ ಪರೀಕ್ಷೆ ನಡೆಸಲು ಕೋರ್ಟ್ ನಿರ್ದೇಶನ ನೀಡಿದರೂ ಅಧಿಕಾರಿಗಳಿಗೆ ತಾತ್ಸಾರ. ಇದು ಕೆಪಿಸಿಎಲ್ (ಕರ್ನಾಟಕ ಪವರ್ ಕಾಪೋರೇಷನ್ ಲಿಮಿಟೆಡ್) ಅವಾಂತರ. ಇದರ ಪರಿಣಾಮ 40 ಸಾವಿರ ಯುವಕರ ಭವಿಷ್ಯ ಅತಂತ್ರವಾಗಿದೆ. ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಾರ್ಯನಿರ್ವಹಿಸಲು ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ಕೆಮಿಸ್ಟ್, ಕೆಮಿಕಲ್ ಸೂಪರ್​ವೈಸರ್​ಗಳ ಒಟ್ಟು 400 ಹುದ್ದೆಗಳ ನೇಮಕಾತಿ ಸಂಬಂಧ ಕೆಪಿಸಿಎಲ್​ನಿಂದ 2017ರ ಆಗಸ್ಟ್​ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ರಾಜ್ಯವ್ಯಾಪಿ ಸುಮಾರು 40 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 2018ರಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಯಿತು. ಇಲ್ಲಿಂದ ಶುರುವಾಗಿದ್ದೇ ರಂಪಾಟ. ಪರೀಕ್ಷೆ ಮುಗಿದು ಇನ್ನೇನು ಫಲಿತಾಂಶ ಪ್ರಕಟಿಸಬೇಕು ಎನ್ನುವ ವೇಳೆಗೆ ಕೆಲವರು ಕೋರ್ಟ್ ಮೇಟ್ಟಿಲೇರಿದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಮರು ಪರೀಕ್ಷೆ ನಡೆಸಬೇಕೆಂದು ಕಾನೂನು ಹೋರಾಟ ಆರಂಭಿಸಿದರು. ಇದರ ವಿರುದ್ಧ ಇನ್ನೊಂದು ಬಣವೂ ಕಾನೂನು ಹೋರಾಟಕ್ಕೆ ಮುಂದಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ 2019ರ ಏಪ್ರಿಲ್​ನಲ್ಲಿ ಕೆಪಿಸಿಎಲ್​ಗೆ ಸೂಚನೆ ನೀಡಿತು. ಅದಾದ ಬಳಿಕ ಸತತ ಮೂರು ವರ್ಷಗಳಿಂದ ಉದ್ಯೋಗಾಕಾಂಕ್ಷಿಗಳು ಕೆಪಿಸಿಎಲ್ ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಪ್ರಯೋಜನವಾಗಿಲ್ಲ. ಪರೀಕ್ಷೆ ನಡೆಸುವ ಬಗ್ಗೆ ಅಧಿಕಾರಿಗಳು ಆಸಕ್ತಿಯನ್ನೇ ತೋರುತ್ತಿಲ್ಲ.
ಕಳೆದ ವರ್ಷ ಒಪ್ಪಿಗೆ:ಕರೊನಾ ಸಮಸ್ಯೆ ಬಳಿಕ 2021ರ ನವೆಂಬರ್​ನಲ್ಲಿ ಸುತ್ತೋಲೆ ಹೊರಡಿಸಿದ್ದ ಆರ್ಥಿಕ ಇಲಾಖೆ ನೇರ ನೇಮಕಾತಿಗೆ ಹಸಿರು ನಿಶಾನೆ ತೋರಿತ್ತು. ಆದರೆ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ನೇಮಕಾತಿ ಆದೇಶ ಹೊರಡಿಸುವುದಕ್ಕೂ ಮುನ್ನ ಆರ್ಥಿಕ ಇಲಾಖೆ ಅನುಮತಿ ಪಡೆಯುವಂತೆ ಎಲ್ಲ ಇಲಾಖೆಗಳಿಗೂ ಸೂಚಿಸಿತ್ತು. ಇಷ್ಟೊಂದು ಅವಕಾಶಗಳಿದ್ದರೂ ಕೆಪಿಸಿಎಲ್ ನೇಮಕಾತಿಗೆ ಮುಂದಾಗದೇ ಇರುವುದು ಆಶ್ಚರ್ಯ ಮೂಡಿಸಿದೆ.
ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ಕೆಮಿಸ್ಟ್, ಕೆಮಿಕಲ್ ಸೂಪರ್​ವೈಸರ್​ಗಳ ನೇಮಕಾತಿ ಸಂಬಂಧ ಮರು ಪರೀಕ್ಷೆ ನಡೆಸಲು ಕೋರ್ಟ್ ಆದೇಶಿಸಿತ್ತು. ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ಪ್ರಕ್ರಿಯೆ ನಡೆಸಲು ಕೆಪಿಸಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
|ವಿ.ಸುನೀಲ್​ಕುಮಾರ್ಇಂಧನ ಸಚಿವ
ವಯೋಮಿತಿ ಸಮಸ್ಯೆ:ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಪಿಸಿಎಲ್, ಶಾಸಕರು, ಇಂಧನ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. 4 ವರ್ಷ ಗಳಿಂದ ನೇಮಕಾತಿ ಪ್ರಕ್ರಿಯೆಗಾಗಿ ಕಾಯುತ್ತಿರುವ ಅನೇಕ ಅಭ್ಯರ್ಥಿ ಗಳು ವಯೋಮಿತಿ ಸಮಸ್ಯೆ ಆತಂಕದಲ್ಲಿದ್ದಾರೆ. ವಯಸ್ಸಿನ ಆಧಾರದಲ್ಲಿ ಹಲವರು ಅನರ್ಹ ಗೊಳ್ಳುವ ಭೀತಿಯಿದೆ. ಇನ್ನು ಕೆಲವರು 4 ವರ್ಷದ ಹಿಂದೆ ಖಾಸಗಿ ಕಂಪನಿಗಳಲ್ಲಿ ಒದಗಿ ಬಂದ ಉದ್ಯೋಗ ಅವಕಾಶ ಬಿಟ್ಟು ಕೆಪಿಸಿಎಲ್ ನೇಮಕಾತಿ ಎದುರು ನೋಡುತ್ತಿದ್ದಾರೆ. ಈಗ ಎರಡೂ ಕಡೆ ಅವಕಾಶವಿಲ್ಲದ ಸ್ಥಿತಿ ಅವರದ್ದಾಗಿದೆ.
ಕರೊನಾ ನೆಪ:ನ್ಯಾಯಾಲಯ 2019ರಲ್ಲೇ ಮರು ಪರೀಕ್ಷೆಗೆ ಆದೇಶ ನೀಡಿದ್ದರೂ ಆ ವರ್ಷ ಸುಮ್ಮನಿದ್ದ ಅಧಿಕಾರಿಗಳಿಗೆ ಬಳಿಕ ಸಿಕ್ಕಿದ್ದು ಕರೊನಾಸ್ತ್ರ! ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ಕರೊನಾ ನೆಪ ಮಾಡಿಕೊಂಡ ಅಧಿಕಾರಿಗಳು ಮರು ಪರೀಕ್ಷೆಗೆ ಅಧಿಸೂಚನೆಯನ್ನೇ ಹೊರಡಿಸಲಿಲ್ಲ. ಕರೊನಾ ಸಂಕಷ್ಟ ಕಾಲದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿರುವುದರಿಂದ ಹೊಸ ನೇಮಕಾತಿಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂಬ ಆರ್ಥಿಕ ಇಲಾಖೆ ಸುತ್ತೋಲೆಯನ್ನೇ ಮುಂದಿಟ್ಟುಕೊಂಡ ಕೆಪಿಸಿಎಲ್ ನಿದ್ರೆಗೆ ಜಾರಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:6 − 6 =
Remember me
