ಬೆಂಗಳೂರು:ಕೋವಿಡ್-19 ಹಿನ್ನೆಲೆಯಲ್ಲಿ ವಿವಿಧ ಪರೀಕ್ಷೆಗಳನ್ನು ಮುಂದೂಡಿದ್ದ ಕರ್ನಾಟಕ ಲೋಕಸೇವಾ ಆಯೋಗ ಈಗ ದಿನಾಂಕ ಮರು ನಿಗದಿಪಡಿಸಿದೆ.ಅದರಂತೆ, ಕರ್ನಾಟಕ ರಾಜ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ ಗ್ರೂಪ್ ಎ ವೃಂದದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಜುಲೈ 7 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ:ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ!
ಅಂದು ಬೆಳಗ್ಗೆ 10 ರಿಂದ 12 ರ ವರೆಗೆ ಪತ್ರಿಕೆ 1- ಸಾಮಾನ್ಯ ಅಧ್ಯಯನ ಹಾಗೂ ಮಧ್ಯಾಹ್ನ 2.30 ರಿಂದ 4.30ರ ವರೆಗೆ ಪತ್ರಿಕೆ 2- ಅಪ್ಟಿಟ್ಯೂಡ್ ಟೆಸ್ಟ್ ನಡೆಯಲಿದೆ.ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಜುಲೈ 19 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ:ಗಡಿ ವಿವಾದ: ಭಾರತದೊಂದಿಗೆ ಸಂಘರ್ಷಕ್ಕೆ ಸಿದ್ಧವಾದ ನೇಪಾಳ
ಅಂದು ಬೆಳಗ್ಗೆ 10 ರಿಂದ 12 ರ ವರೆಗೆ ಪತ್ರಿಕೆ 1 – ಸಾಮಾನ್ಯ ಅಧ್ಯಯನ ಹಾಗೂ ಮಧ್ಯಾಹ್ನ 2 ರಿಂದ 4 ವರೆಗೆ ಪತ್ರಿಕೆ 2- ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ವಿಷಯದ ಪರೀಕ್ಷೆ ನಡೆಯಲಿದೆ.2017-18 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳಿಗೆ ಆಗಸ್ಟ್ 2 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.ಅಂದು ಬೆಳಗ್ಗೆ 10 ರಿಂದ 12 ರವರೆಗೆ ಪತ್ರಿಕೆ 1, ಹಾಗೂ ಮಧ್ಯಾಹ್ನ 2 ರಿಂದ 4 ರ ವರೆಗೆ ಪತ್ರಿಕೆ 2ರ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್​​ಸಿ ಪ್ರಕಟಣ ತಿಳಿಸಿದೆ.
ಅಯ್ಯಪ್ಪ ಭಕ್ತರಿಗೆ ಸದ್ಯಕ್ಕಿಲ್ಲ ಶಬರಿಮಲೆಗೆ ಪ್ರವೇಶ; ಉತ್ಸವ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − two =
Remember me
