ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​ಸಿ) ಇದೀಗ ಬಿಡುಗಡೆ ಮಾಡಿರುವ ಪರೀಕ್ಷಾ ದಿನಾಂಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆಗೆ ಅಡ್ಡಿಯಾಗಲಿದ್ದು, ವಿದ್ಯಾರ್ಥಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಕೆಪಿಎಸ್​ಸಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಸಮೂಹ “ಎ’ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳ ನೇಮಕಾತಿ ಮುಖ್ಯಪರೀಕ್ಷೆಯನ್ನು ಡಿ.21ರಿಂದ 24ರವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆದರೆ, ಕೇಂದ್ರ ಭಾರತೀಯ ಕಂಪನಿಗಳ ಕಾರ್ಯದರ್ಶಿಳ ಸಂಸ್ಥೆ(ಐಸಿಎಸ್​ಐ) ನಡೆಸುವ ಸಿಎಸ್​(ಕಂಪನಿಗಳ ಕಾರ್ಯದಶಿ್) ಮುಖ್ಯ ಪರೀಕ್ಷೆ ಡಿ.21ರಿಂದ 28ರವರೆಗೆ ನಡೆಯಲಿದೆ. ಸ್ಟಾಫ್​​ ಸೆಲೆನ್​ ಕಮಿಷನ್​(ಎಸ್​ಎಸ್​ಸಿ) ಶೀಘ್ರಲಿಪಿಗಾರ ಹುದ್ದೆಗಳಿಗೆ ಡಿ.24ರಿಂದ 30ರವರೆಗೆ ಪರೀಕ್ಷೆಗಳನ್ನು ಅಯೋಜಿಸಿದೆ. ಎರಡು ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಪರೀಕ್ಷೆ ಬರೆಯಬೇಕು ಎಂದುಕೊಂಡ ಅಭ್ಯರ್ಥಿಗಳಿಗೆ ಕೆಪಿಎಸ್​ಸಿ ವೇಳಾಪಟ್ಟಿ ತಲೆನೋವು ತಂದಿದೆ.
ಕೆಪಿಎಸ್​ಸಿ ಪರಿಷ್ಕೃತ ವೇಳಾಪಟ್ಟಿಯನ್ನು ನ.18ರಂದು ಬಿಡುಗಡೆ ಮಾಡಿದೆ. ಈ ಹಿಂದೆ ರೂಪಿಸಿದ್ದ ವೇಳಾಪಟ್ಟಿಯಲ್ಲಿ ಯುಪಿಎಸ್​ಸಿ ಮತ್ತು ಕೆಪಿಎಸ್​ಸಿ ಪರೀಕ್ಷೆಗಳಿಗೆ ಅಂತರ ಕಡಿಮೆ ಇತ್ತು. ಅಂತರ ಹೆಚ್ಚಳ ಮಾಡಿ ಹೊಸದಾಗಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿ ಪ್ರಕಾರ ಕೂಡ ಬೇರೆ ಪರೀಕ್ಷೆಗಳಿಗೆ ತೊಂದರೆ ಉಂಟಾಗುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್​ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಕೊನೆಗೂ ಪರೀಕ್ಷೆ ಮುಂದೂಡಿದ ಕೆಪಿಎಸ್‌ಸಿ

ಉಮಾಶ್ರೀ ಕಾರು ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು! ತೀವ್ರ ಸಂಕಟಕ್ಕೆ ಸಿಲುಕಿದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
