ಬೆಂಗಳೂರು:ಪರೀಕ್ಷೆಗೂ ಮುನ್ನವೇ ಎಫ್​ಡಿಎ(ಪ್ರಥಮ ದರ್ಜೆ ಸಹಾಯಕರ) ಎಕ್ಸಾಂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇದುವರೆಗೂ 34 ಆರೋಪಿಗಳನ್ನು ಬಂಧಿಸಿದ್ದು, ಲಕ್ಷಾಂತರ ಹಣ ಜಪ್ತಿ ಮಾಡಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ(ಎಫ್​ಡಿಎ) ಹುದ್ದೆಗಳ ನೇಮಕಾತಿಗೆ ಇಂದು(ಜ.24) ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ನಿನ್ನೆಯೇ ಸೋರಿಕೆ ಆಗಿದ್ದು, ಕೆಪಿಎಸ್​ಸಿ ಎಕ್ಸಾಂ ಮುಂದೂಡಿದೆ. ಲೀಕಾಸುರ ಗ್ಯಾಂಗ್​ನಲ್ಲಿರುವ ಪ್ರತಿಯೊಬ್ಬರನ್ನೂ ಬಂಧಿಸಲು ಸಿಸಿಬಿ ಕಾರ್ಯಾಚರಣೆ ಮಿಂಚಿನಂತೆ ಸಾಗಿದ್ದು, ಎಫ್​ಡಿಎ ಎಕ್ಸಾಂ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದ ಪ್ರಕರಣ ಸಂಬಂಧ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.ಇದನ್ನೂ ಓದಿರಿಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕೆಪಿಎಸ್​ಸಿಯ ಓರ್ವ ಆಫೀಸರ್​! ಲೀಕಾಸುರನ ಕರಾಳ ಮುಖ ಬಿಚ್ಚಿಟ್ಟಿದ್ದೀವಿ ನೋಡಿ
ಶಿವಮೊಗ್ಗದಲ್ಲಿ ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಔಟ್ ಆಗಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ನಿನ್ನೆ ರಾತ್ರಿಯೇ ಮಾಹಿತಿ ಪಡೆದಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸೂಚಿಸಿದ್ದೇನೆ. ಅಗತ್ಯ ಬಿದ್ದರೆ ಹುದ್ದೆಯಿಂದಲೇ ವಜಾಗೊಳಿಸಲು ಸೂಚಿಸಲಾಗಿದೆ ಎಂದರು.
ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕೆಪಿಎಸ್​ಸಿಯ ಓರ್ವ ಆಫೀಸರ್​! ಲೀಕಾಸುರನ ಕರಾಳ ಮುಖ ಬಿಚ್ಚಿಟ್ಟಿದ್ದೀವಿ ನೋಡಿ

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
