ಬೆಂಗಳೂರು:ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ(ಎಫ್​ಡಿಎ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇಂದು(ಜ.24) ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ನಿನ್ನೆಯೇ ಸೋರಿಕೆ ಆಗಿದ್ದು, ಎಕ್ಸಾಂ ಮುಂದೂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ, ಎಫ್​ಡಿಎ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದೇ ಕೆಪಿಎಸ್​ಸಿ ಸಿಬ್ಬಂದಿ! ಆ ಕಿಂಗ್​ಪಿನ್​ನ ಕರಾಳ ಮುಖವನ್ನ ನಾವಿಲ್ಲಿ ಬಿಚ್ಚಿಡ್ತೀವಿ ನೋಡಿ.
ಪ್ರಶ್ನೆಪತ್ರಿಕೆ ಲೀಕ್ ಆಗಿರೋ ಮಾಹಿತಿ ನೋಡಿದ್ರೆ ಇಡೀ ವ್ಯವಸ್ಥೆಯೇ‌ ಬೆಚ್ಚಿಬೀಳುತ್ತೆ. ಪ್ರಶ್ನೆಪತ್ರಿಕೆ ಸಿದ್ಧವಾದ ಜಾಗದಿಂದಲೇ ಸೋರಿಕೆಗೆ ಭಾರಿ ಪಿತೂರಿ ನಡೆದಿದ್ದು, ಲೀಕಾಸುರನ ಹಿಂದಿದೆ ಭಯಾನಕ‌ ಜಾಲ. ಈ ಪ್ರಕರಣ ಸಂಬಂಧ ಇದುವರೆಗೂ 14 ಮಂದಿಯನ್ನ ಸಿಸಿಬಿ ಬಂಧಿಸಿದೆ ಎಂದು ಮೂಲಗಳು ತಿಳಿಸಿದ್ದು, ಸಿಸಿಬಿ‌ ತನಿಖೆ ವೇಳೆ ಆ ಮಾಸ್ಟರ್ ಮೈಂಡ್​ನ ಮಾಹಿತಿ ಸಿಕ್ಕಿದೆ. ಅಂದಹಾಗೆ ಆ ಕಿಂಗ್​ಪಿನ್​ ಬೇರೆ ಯಾರೂ ಅಲ್ಲ, ಕೆಪಿಎಸ್​ಸಿ ಕಚೇರಿಯಲ್ಲಿ‌ ಕೆಲಸ ಮಾಡುವ ಓರ್ವ ಆಫೀಸರ್!ಇದನ್ನೂ ಓದಿರಿಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…
ತನಿಖಾ ದೃಷ್ಟಿಯಿಂದ ಆ ಕಿಂಕ್​ಪಿನ್ ಆಫೀಸರ್ ಹೆಸರನ್ನು ನಾವು ಬಹರಂಗ ಪಡಿಸಲ್ಲ. ಆದರೇ ಆ ಅಧಿಕಾರಿಯೇ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ್ದು. ಆ ಅಧಿಕಾರಿ ಕಚೇರಿಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರತಂದು ಆರೋಪಿ ಚಂದ್ರುಗೆ ನೀಡಿದ್ದ. ಬಳಿಕ ಚಂದ್ರು ಅವುಗಳನ್ನು ಉಲ್ಲಾಳದ ಆರ್​.ಆರ್. ರೆಸಿಡೆನ್ಸಿಯ ಫ್ಲಾಟ್​ನಲ್ಲಿಟ್ಟಿದ್ದ. ನಂತರ ತಮ್ಮ ಪ್ಲಾನ್​ನಂತೆ ಇನ್ನುಳಿದ ರಾಜ್ಯದ ವಿವಿಧೆಡೆಯ ಮೀಡಿಯೇಟರ್ಸ್​ಗೆ ಸಪ್ಲೈ ಮಾಡಲು ಸ್ಕೆಚ್ ಹಾಕಿದ್ದ. ಒಂದು ಕಡೆ ಈ ಗ್ಯಾಂಗ್ ಸದ್ದಿಲ್ಲದೇ ಪರೀಕ್ಷಾರ್ಥಿಗಳ ಆಪರೇಶನ್​ಗೆ ಕೈ ಹಾಕಿತ್ತು. ಮತ್ತೊಂದು ಕಡೆ ತಮಗಿದ್ದ ಇನ್ಫಾರ್ಮೇಶನ್ ಮೇರೆಗೆ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು, ಉಲ್ಲಾಳದ ಫ್ಲಾಟ್​ ಮೇಲೆ ದಾಳಿ ಮಾಡುತ್ತಿದ್ದಂತೆ ರೆಡ್​ಹ್ಯಾಂಡ್​ ಆಗಿ ಪ್ರಶ್ನೆಪತ್ರಿಕೆಗಳ ಲೀಕಾಸುರರು ಸಿಕ್ಕಿಬಿದ್ದಿದ್ದಾರೆ.
ಆರೋಪಿ ಚಂದ್ರು ಬೆಂಗಳೂರಿನ ಕೊರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ವಿಜಿಲೆನ್ಸ್ ಇನ್​ಸ್ಪೆಕ್ಟರ್. ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಚಂದ್ರು, ಬಳಿಕ ಇಲಾಖೆಯಲ್ಲಿರುವ ಅಧಿಕಾರಿಗಳನ್ನ ಬಳಸಿಕೊಂಡು ಪ್ರಶ್ನೆ ಪತ್ರಿಕೆ ಪಡೆದಿದ್ದ. ಈ ಹಿಂದೆಯೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಈತನ ಪಾಲಿರುವ ಮಾಹಿತಿ ಲಭ್ಯವಾಗಿದೆ.(ದಿಗ್ವಿಜಯ ನ್ಯೂಸ್​)
ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ಎಫ್​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eleven =
Remember me
