ಬೆಂಗಳೂರು:ರಾಜ್ಯಾದ್ಯಂತ ಲಾಕ್​ಡೌನ್​ ಕಾರಣದಿಂದಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಪರೀಕ್ಷೆ, ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆ ಮೊದಲಾದ ಪ್ರಕ್ರಿಯೆಗಳನ್ನು ಮುಂದೂಡಿದೆ. ಹಲವು ನೆಮಕಗಳಿಗೆ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿದಿದೆ. ಆದರೆ, ಕೆಲ ಹುದ್ದೆಗಳ ಭರ್ತಿಗೆ ಆಯ್ಕೆ ಪಟ್ಟಿ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಕಾರ್ಮಿಕರ ರಾಜ್ಯ ವಿಮಾ ಸೇವೆಯ ವೈದ್ಯಕೀಯ ವಿಮಾ ಅಧಿಕಾರಿಗಳ ಒಟ್ಟು 159 (ಹೈ.ಕ 16 ಸ್ಥಾನಗಳು ಸೇರಿ) ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಮೂವರು ಮಹಿಳಾ ಸ್ಟಾಫ್​ ನರ್ಸ್​ಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಇಲಾಖೆಯ ನವೋದಯ ವಸತಿ ಶಾಲೆಗಳಲ್ಲಿ ಸ್ನಾತಕೋತ್ತರ ಪದವೀಧರ ಕಂಪ್ಯೂಟರ್​ ಶಿಕ್ಷಕರ ಆರು ಹುದ್ದೆಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಸ್ಣಾತಕೋತ್ತರ ಪದವೀಧರ ಇಂಗ್ಲಿಷ್​ ಭಾಷಾ ಬೋಧಕರ ಆರು ಹುದ್ದೆಗಳು (1 ಹೈದರಾಬಾದ್​ ಕರ್ನಾಟಕ ಮೀಸಲು ಸೇರಿ) ಹಾಗೂ ಸ್ನಾತಕೋತ್ತರ ಪದವೀಧರ ಗಣಿತ ಶಿಕ್ಷಕರ ಆರು ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಪಿಎಸ್​ಸಿ ಪ್ರಕಟಿಸಿದೆ.ಈ ಎಲ್ಲ ಆಯ್ಕೆ ಪಟ್ಟಿಯನ್ನು ಏಪ್ರಿಲ್​ 24ರಂದು ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಪಟ್ಟಿ ಪ್ರಕಟವಾದ ಏಳು ದಿನಗಳೊಳಗೆ ಸಲ್ಲಿಸಬೇಕೆಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ಅಂತಿಮ ಆಯ್ಕೆ ಪ್ರಕಟಮುರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆ:ಮುರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರು, ಕನ್ನಡ ಉಪನ್ಯಾಸಕರು, ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ( ಮೂರು ಹುದ್ದೆಗಳಲ್ಲಿ ತಲಾ 3 ಹೈ-ಕ ಮೀಸಲು ಹಾಗೂ ತಲಾ 7 ಇತರ ವೃಂದದ ಹುದ್ದೆಗಳಿವೆ) ನೇಮಕಕ್ಕೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
ವಿವರಗಳಿಗೆhttp://kpsc.kar.nic.in/ಸಂಪರ್ಕಿಸಬಹುದು.
ವಲಸೆ ಕಾರ್ಮಿಕರಿಗೆ ವಿಶೇಷ ರೈಲು, ಉಚಿತ ಪ್ರಯಾಣ; ರೈಲ್ವೆ ಇಲಾಖೆಯಿಂದಲೇ ಸಿದ್ಧವಾಗುತ್ತಿದೆ ಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
