ಬೆಂಗಳೂರು:ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಬಹಿರಂಗವಾದ ಬೆನ್ನಲ್ಲೇ, ಕರ್ನಾಟಕ ಲೋಕಸೇವಾ ಆಯೋಗ ತುಸು ಎಚ್ಚಂತೆ ಕಾಣುತ್ತಿದೆ. ಆಯೋಗದ ಎಡವಟ್ಟುಗಳಿಗೆ, ಅಕ್ರಮಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ಅವ್ಯವಹಾರ, ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಡುತ್ತಿದೆ. ಅಕ್ರಮ ದಾರಿಯಲ್ಲಿ ಸಾರ್ಕರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಂದವರಿಗೆ ಶಿಕ್ಷೆ ಇಲ್ಲವೇ ಎಂದೆಲ್ಲ ನಿಷ್ಟಾವಂತ ಅಭ್ಯರ್ಥಿಗಳು ಮೂದಲಿಸುತ್ತಿದ್ದಾರೆ. ಈ ನಡುವೆಯೇ ಎಸ್​ಡಿಎ ಎಕ್ಸಾಂನಲ್ಲಿ ಅಕ್ರಮ ಎಸಗಿದ ಅಭ್ಯರ್ಥಿಗಳಿಗೆ ಕೆಪಿಎಸ್​ಸಿ ಬಿಸಿ ಮುಟ್ಟಿಸಿದೆ.
2019ರ ಜೂನ್ 19ರಂದು ನಡೆದಿದ್ದ ದ್ವಿತೀಯ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಅಭ್ಯರ್ಥಿಗಳನ್ನು ಡಿಬಾರ್​ ಮಾಡಿ ಕೆಪಿಎಸ್​ಸಿ ಆದೇಶ ಹೊರಡಿಸಿದೆ.ಇದನ್ನೂ ಓದಿರಿ2023ರಲ್ಲಿ ವಿಧಾನಸಭೆ ಎಲೆಕ್ಷನ್: ಮಂಡ್ಯದಲ್ಲಿ ಟಿಕೆಟ್​ಗಾಗಿ ಹಾಲಿ ಶಾಸಕ- ಮಾಜಿ ಸಂಸದರ ಫೈಟ್​
ಅಂದು ನಡೆದಿದ್ದ ಎಸ್​ಡಿಎ ಪರೀಕ್ಷೆಗೆ ಕೆಲವರು ಪಾನಮತ್ತರಾಗಿ ಬಂದು ಸಿಕ್ಕಿಬಿದ್ದಿದ್ದರು. ಕೆಲವರು ನಕಲಿ ಪ್ರವೇಶ ಪತ್ರ ತಂದಿದ್ದರು. ಇನ್ನೂ ಕೆಲವರು ಬ್ಲೂಟೂತ್ ಮೂಲಕ ಕಾಪಿ ಮಾಡುತ್ತಾ ರೆಡ್​ಹ್ಯಾಂಡ್​ ಅಗಿ ತಗಲಾಕಿಕೊಂಡಿದ್ದರು. ಒಂದಿಬ್ಬರು ಒಎಂಆರ್ ಶೀಟ್​ಗಳನ್ನೇ ಎಗರಿಸಿದ್ದರು. ಈ ಎಲ್ಲ ಪ್ರಕರಣದ ತನಿಖೆ ನಡೆಸಿದ್ದು, ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ 12 ಮಂದಿಯನ್ನು 3 ವರ್ಷ ಕಾಲ ಡಿಬಾರ್ ಮಾಡಲಾಗಿದೆ.
ಅಂಬ್ರೇಶ್, ಶಂಕರ್ ಗೌಡ, ಸಿದ್ದರಾಮ, ಪ್ರಿಯಾಂಕ ಕದಂ, ನಿಖಿತಾ ಖಲಾಲ್ ಸೇರಿದಂತೆ 12 ಮಂದಿ ಡಿಬಾರ್ ಆದವರು. ಈ 12 ಮಂದಿಯೂ ಮುಂದಿನ ಮೂರು ವರ್ಷ ಕೆಪಿಎಸ್​ಸಿ ನಡೆಸುವ ಪರೀಕ್ಷೆಗಳಲ್ಲಿ ಭಾಗವಹಿಸುವಂತಿಲ್ಲ. ರಾಜ್ಯಪತ್ರದ ಮೂಲಕ ಕೆಪಿಎಸ್​ಸಿ​ ಆದೇಶದ ಅಧಿಸೂಚನೆ ಪ್ರಕಟವಾಗಿದೆ.
‘ಲೋಪ’ಸೇವಾ ಆಯೋಗಕ್ಕೆ ಬೇಕು ಸರ್ಜರಿ: ಹೊಂದಾಣಿಕೆ ಆಡಳಿತದಿಂದ ಕೆಪಿಎಸ್​ಸಿಗೆ ಅಪಖ್ಯಾತಿ

ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ವಿಧಾನಪರಿಷತ್​ಗೆ ಹೊಸ ಚೇರ್ಮನ್ ಬಸವರಾಜ ಹೊರಟ್ಟಿ! ಕಾಂಗ್ರೆಸ್​ ಫುಲ್​ ಸೈಲೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + one =
Remember me
