ಬೆಂಗಳೂರುಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವಿನ ಸಂಘರ್ಷ ತಾರಕಕ್ಕೇರಿದ ಬೆನ್ನಲ್ಲೇ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು 10 ದಿನಗಳ ಕಾಲ ರಜೆ ಮೇಲೆ ತೆರಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಆಯಕ್ತ ಡಾ. ರಾಕೇಶ್ ಕುಮಾರ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಲತಾಕುಮಾರಿ ಅವರು ೆ.7ರಿಂದ 17ರ ವರೆಗೆ ರಜೆ ಮೇಲೆ ತೆರಳಿದ್ದಾರೆ. ಈ ಮೂಲಕ ತಾತ್ಕಾಲಿಕವಾಗಿ ಸಂಘರ್ಷವು ಉಪಶಮನವಾಗಿದೆ. ಆದರೆ, ರಜೆ ಮುಗಿಸಿ ಬಂದ ನಂತರ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾಯ್ದುನೋಡಬೇಕಿದೆ.
ಸರ್ಕಾರವು ರೂಪಿಸಿರುವ ನಿಯಮಗಳಡಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಮತ್ತು ಆಯೋಗದ ಕಾರ್ಯದರ್ಶಿ ಅವರಿಗೆ ಇರುವ ಅಧಿಕಾರಗಳ ಬಗ್ಗೆ ಕಾನೂನು ಸಲಹೆ ನೀಡುವಂತೆ ಕೋರಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಕಾನೂನು ಆಯೋಗಕ್ಕೆ ಇತ್ತೀಚೆಗಷ್ಟೇ ಪತ್ರ ಬರೆದಿದ್ದರು.
ಇದರ ಜತೆಗೆ ಹಿಂದಿನ ಮತ್ತು ಹಾಲಿ ಕಾರ್ಯದರ್ಶಿಗಳ ಮೇಲೆ ಸಾಕ್ಷ್ಯ ಸಮೇತ ಆರೋಪಗಳನ್ನು ಮಾಡಿದ್ದರು. ಇದು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಅಲ್ಲದೆ, ವಿವಿಧ ಇಲಾಖೆಗಳ ನೇಮಕಾತಿ ಆಕಾಂಕ್ಷಿಗಳು ಕೂಡ ಪರ/ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಲತಾಕುಮಾರಿ ಮೇಲಿನ ಆರೋಪಗಳು:
ಕಾನೂನು ಕೋಶದ ಮುಖ್ಯಸ್ಥರ ಹುದ್ದೆಯ ನೇಮಕದ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದ್ದರೂ ಮತ್ತೆ ನೇಮಕ ಮಾಡಲು ಹೊಸ ಅಧಿಸೂಚನೆಯನ್ನು ಆಯೋಗದ ಅನುಮೋದನೆ ಇಲ್ಲದೆ ಆಯೋಗದ ಹೆಸರಿನಲ್ಲಿ ಜಾರಿ ಮಾಡಿರುತ್ತಾರೆ. ಸಾಂವಿಧಾನಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಆಯೋಗವನ್ನು ಅಗೌರಿಸಿದ್ದಾರೆ. ಯಾವ ನಿಯಮಗಳ ಪ್ರಕಾರ ನೇಮಕ ಮಾಡಬೇಕೆಂಬ ನಿಯಮಗಳ ಪ್ರತಿಯನ್ನು ಒದಗಿಸಿಲ್ಲ ಎಂದು ಆರೋಪ ಮಾಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seven =
Remember me
