ಮೈಸೂರು:ಕೆ.ಆರ್​. ಆಸ್ಪತ್ರೆಯ ವಾರ್ಡ್​ನಲ್ಲೇ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ವಾರ್ಡಿನ ಕಿಟಕಿ ಗ್ರಿಲ್​ ಕಿತ್ತು, ಒಳ ನುಗ್ಗಿ ಪೈಶಾಚಿಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
30 ವರ್ಷದ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿಯಿಂದ ಅಮಾನುಷ ಕೃತ್ಯ ನಡೆದಿದೆ. ರಾತ್ರಿ ವೇಳೆ ಕಿಟಕಿ ಮೂಲಕ ನುಗ್ಗಿ ಆರೋಪಿ ಅತ್ಯಾಚಾರ ಎಸಗುತ್ತಿದ್ದನಂತೆ. ಈ ಬಗ್ಗೆ ವೃದ್ಧೆ ಮಾಹಿತಿ ನೀಡಿದರೂ ವೈದ್ಯರು ಕ್ರಮ ಕೈಗೊಳ್ಳದೇ ಇರುವ ಆರೋಪವಿದೆ. ಅಲ್ಲದೆ, ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರೆನ್ನಲಾಗಿದೆ.
ಇದೀಗ ಪ್ರಕರಣ ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಬೆಳಕಿಗೆ ಬಂದಿದೆ. ಅದೇ ವಾರ್ಡ್​ನ ವೃದ್ಧೆಯಿಂದ ಸತ್ಯ ಬಯಲಾಗಿದೆ. ಅತ್ಯಾಚಾರ ಬಗ್ಗೆ ವಾರದ ಹಿಂದೆಯೇ ವೃದ್ಧೆ ವೈದ್ಯರಿಗೆ ಮಾಹಿತಿ ನೀಡಿದಳು. ಆದರೆ, ಮಾಹಿತಿ ನೀಡಿದ ವೃದ್ಧೆ ಮೇಲೆಯೇ ಹಲ್ಲೆ ಮಾಡಿ ಬಾಯಿ ಬಿಡದಂತೆ ಆಸ್ಪತ್ರೆ ಸಿಬ್ಬಂದಿ ಬೆದರಿಕೆ ಹಾಕಿರುವ ಅರೋಪವು ಇದೆ.
ಕೂಗಳತೆ ದೂರದಲ್ಲಿರುವ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕೃತ್ಯ ನಡೆದಿದೆ. ಮಾನವ ಹಕ್ಕುಗಳ ಸೇವಾ ಸಮಿತಿ ನೀಡಿದ ಮಾಹಿತಿಯಿಂದ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇತ್ತ ವಿಷಯ ಬಹಿರಂಗವಾಗುತ್ತಿದ್ದಂತೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಪರಾರಿಯಾಗಿದ್ದಾರೆ.
ಪೊಲೀಸರು ಬಂದರೂ ವೈದ್ಯರು ಮಾತ್ರ ಇನ್ನು ಸ್ಥಳಕ್ಕೆ ಬಂದಿಲ್ಲ. ಇತ್ತ ಅಮಾನವೀಯ ಕೃತ್ಯ ಕೇಳಿ ನೆರೆ-ಹೊರೆ ವಾರ್ಡ್​ನ ರೋಗಿಗಳ ಪೋಷಕರು ಬೆಚ್ಚಿಬಿದ್ದಿದ್ದಾರೆ.(ದಿಗ್ವಿಜಯ ನ್ಯೂಸ್​)
ವಿವಾಹಿತೆಯನ್ನು ಮರುಮದ್ವೆಯಾದವನ ಕಣ್ಣು ಆಕೆಯ ಮಗಳ ಮೇಲೆ ಬಿತ್ತು: ಮುಂದಾಗಿದ್ದು ಊಹಿಸದ ಘಟನೆ!

ಎರಡೇ ಸಾಕಾ? 3 ಬೇಕಾ?: ಲಸಿಕೆ ಡೋಸೇಜ್ ಬಗ್ಗೆ ಜಯದೇವ ಆಸ್ಪತ್ರೆ ಅಧ್ಯಯನ

ಹೊಸಬರ ಹೊಸ ಪ್ರೇಮಕಥೆ; ಶಶಾಂಕ್ ಹೊಸ ಚಿತ್ರ ಲವ್ 360

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
