ಬೆಂಗಳೂರು:ಕಂದಾಯ ಸಚಿವನಾಗಿದ್ದ ಬಳಿಕ ರೈತರ ಮೇಲೆ ಹಾಕುತ್ತಿರುವ ಒತ್ತುವರಿ ಕೇಸ್‌ಗಳನ್ನು ಕೈಬಿಡಲಾಗಿದೆ. ಮನೆ ಬಾಗಿಲಿಗೆ ಪಿಂಚಣಿ ಸೇರಿ ಹಲವು ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಕೊಟ್ಟಿದೆ. ಇನಾಂ ಜಮೀನು ಅನ್ನು ಮರಳಿ ರೈತರಿಗೆ ನೀಡುವ ಸಲುವಾಗಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಗ್ರಾಮ ವಾಸ್ತವ್ಯ ಯೋಜನೆಯುಡಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಪರಿಕಲ್ಪನೆಯಡಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೃಷಿ ಮೇಳ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ಮೇಳದಲ್ಲಿ ಸರ್ಕಾರದ ಹಲವು ಯೋಜನೆಗಳ ಕುರಿತು ಜನರಿಗೆ ತಲುಪಿಸುವುದು,ರೈತರಿಗೆ ಜಾಗೃತಿ ಮೂಡಿಸುವುದು, ದೇಶದ ಬೆನ್ನಲುಬು ರೈತರು ಸದೃಢವಾಗಿ ಕೋಟ್ಯಂತರ ಮಂದಿ ಅನ್ನ ನೀಡಲು ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿರುವ ವಿಜಯವಾಣಿ ಮತ್ತು ದಿಗ್ವಿಜಯಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಸಚಿವರು ಆಶಿಸಿದರು.
ರಾಜ್ಯದಲ್ಲಿ ಪ್ರಖ್ಯಾತಿ ಹಿಂದಿರುವ ವಿಜಯವಾಣಿ ಪತ್ರಿಕೆ ಮೂಲೆ ಮೂಲೆಗೆ ತಲುಪುತ್ತಿದೆ. ಪತ್ರಿಕಾ ಧರ್ಮದಲ್ಲಿ ಪತ್ರಿಕೆ ನಡೆಸುವ ಜತೆಗೆ ರೈತರಿಗೆ ಜಾಗೃತಿ ನೀಡುವುದು ಸೇರಿ ಸರ್ಕಾರದ ಸವಲತ್ತುಗಳನ್ನು ಮುಟ್ಟಿಸುವ ದೃಷ್ಟಿಯಿಂದ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಮೇಳ ಆಯೋಜಿಸಿದೆ. ಇಂಥ ಕಾರ್ಯ ಮಾಡುತ್ತಿರುವ ಪತ್ರಿಕೆ ಮತ್ತು ಸುದ್ದಿವಾಹಿನಿಗೆ ನಾನು ಅಭಿನಂದನೆ ಸಲ್ಲಿಸತ್ತೇನೆ ಎಂದರು.
ಸಮಾಜ ಬಗ್ಗೆ ಕಳಕಳಿ ಇಟ್ಟುಕೊಂಡು ಪತ್ರಿಕೆ ಕಾರ್ಯ ನಿರ್ವಹಿಸುತ್ತಿದೆ. ರೈತ ಕುಟುಂಬದಿಂದ ಬಂದಿರುವ ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ, ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ವಿಶೇಷವಾಗಿ ಕೃಷಿ ಮೇಳ ಕಾರ್ಯಕ್ರಮಕ್ಕೆ ಆದ್ಯತೆ ನೀಡಿರುವ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗರ್ಲ್​ಫ್ರೆಂಡ್​ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಮೈಕೆಲ್​ ಕ್ಲಾರ್ಕ್​ಗೆ ಶಾಕ್​ ಕೊಟ್ಟ ಬಿಸಿಸಿಐ!

ಫೋಟೋ ಪೋಸ್​ ಕೊಡಲು ಹೋಗಿ ಜೀವನವೇ ಕ್ಲೋಸ್; ತಮಾಷೆಗೆ ಹಾವನ್ನು ಕೊರಳಿಗೆ ಸುತ್ತಿಕೊಂಡಾತ ಕಡಿತಕ್ಕೊಳಗಾಗಿ ಸಾವು

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ದರ್ಪ ಮೆರೆದ ತುಮಕೂರು ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × five =
Remember me
