
ಉಡುಪಿಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರ ಶ್ರೀಕೃಷ್ಣ ಪೂಜಾ ಪರ್ಯಾಯ ಮಹೋತ್ಸವ 2024 ಜನವರಿ 18ರಿಂದ 2026 ಜನವರಿ 17ರ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಪ್ರಯುಕ್ತ ವಿಶೇಷ ಲೇಖನ.
ಡಾ.ಬಿ.ಗೋಪಾಲಾಚಾರ್ಶ್ರೀಕೖಷ್ಣನು ಶ್ರೀಮಧ್ವಾಚಾರ್ಯರ ಭಕ್ತಿಗೆ ಒಲಿದು ಸಕಲ ಭಾಗ್ಯಗಳ ತವರಾದ ದ್ವಾರಕೆಯನ್ನು ಬಿಟ್ಟು ಉಡುಪಿಗೆ ಬಂದಿದ್ದಾನೆ ಎಂಬುದಾಗಿ ವರ್ಣಿಸಿದ್ದಾರೆ ಶ್ರೀವಾದಿರಾಜ ಗುರುಸಾರ್ವಭೌಮರು.
ದ್ವಾರಾವತೀಂ ಸಕಲಭಾಗ್ಯವತೀಂ ಉಪೇಕ್ಷ್ಯಗೋಪಾಲಬಾಲಲಲನಾಕರಪೂಜನಂ ಚಣವಾಧೀಮ್ ವಧೂಗೃಹಮತೀತ್ಯ ಸ ಮಧ್ವನಾಥೋಯತ್ರಾಸ್ತಿ ತದ್ ರಜತಪೀಠಪುರಂ ಗರೀಯಃ
ಆಚಾರ್ಯ ಮಧ್ವರು ಸುಮಾರು ಎಂಟು ನೂರು ವರ್ಷಗಳ ಹಿಂದೆ ಕರ್ನಾಟಕದ ಕರಾವಳಿಯಲ್ಲಿ ಪವಿತ್ರ ಕ್ಷೇತ್ರವೆಂದು ಪ್ರಸಿದ್ಧವಾದ ಪಾಜಕದಲ್ಲಿ ಕ್ರಿ.ಶ 1238ರಲ್ಲಿ ಅವತರಿಸಿದರು. ತತ್ವವಾದದ ಪ್ರಸಾರ ಮತ್ತು ಉಡುಪಿ ಶ್ರೀಕೃಷ್ಣ ಸನ್ನಿಧಾನದಲ್ಲಿ ನಿರಂತರ ಪೂಜಾದಿಗಳಿಗೆ ಅಷ್ಟ ಯತಿಗಳನ್ನು ನೇಮಿಸಿ ತಂತ್ರಸಾರ ಆಗಮದ ಕ್ರಮದಲ್ಲಿ ಪೂಜಾದಿ ವ್ಯವಸ್ಥೆ ಮಾಡಿದರು. ಉಷಾಕಾಲದಿಂದ ಪ್ರಾರಂಭಿಸಿ ರಾತ್ರಿಯ ಶಯನೋತ್ಸವ ಪೂಜೆಯವರೆಗೆ ಪ್ರತಿ ದಿನವೂ ಹದಿನಾಲ್ಕು ಲೋಕದೊಡೆಯನಿಗೆ ಹದಿನಾಲ್ಕು ಪೂಜೆಗಳು ನಡೆಯುತ್ತವೆ.
ಉಡುಪಿಯ ಅಷ್ಟ ಮಠಗಳು: ಶ್ರೀಮಧ್ವಾಚಾರ್ಯರು ಶ್ರೀಕೃಷ್ಣನ ಆರಾಧನೆಗಾಗಿ ಎಂಟು ಯತಿಗಳನ್ನು ನೇಮಿಸಿದರು. ಆಪತ್ಕಾಲದಲ್ಲಿ ಒಬ್ಬರಿಗೊಬ್ಬರು ಸಹಕಾರಿಗಳಾಗಿರಬೇಕೆಂದು ದ್ವಂದ್ವ ಮಠದ ವ್ಯವಸ್ಥೆಯನ್ನೂ ಮಾಡಿದರು. ಎಂಟು ಮಠಗಳಲ್ಲಿ ಎರಡೆರಡು ಮಠಗಳ ಒಂದೊಂದು ಗುಂಪಿನಂತೆ ನಾಲ್ಕು ವಿಭಾಗವನ್ನು ಮಾಡಿದರು. ಪಲಿಮಾರು-ಅದಮಾರು, ಕೃಷ್ಣಾಪುರ-ಪುತ್ತಿಗೆ, ಶೀರೂರು-ಸೋದೆ, ಕಾಣಿಯೂರá– ಪೇಜಾವರ ದ್ವಂದ್ವ ಮಠಗಳಾಗಿವೆ.
ಅಷ್ಟ ಮಠದ ಪಟ್ಟದ ದೇವರು: ಶ್ರೀಮಧ್ವಾಚಾರ್ಯರು ಶ್ರೀಪಲಿಮಾರು ಮಠದ ಮೂಲಪುರುಷ ಶ್ರೀ ಹೃಷೀಕೇಶ ತೀರ್ಥರಿಗೆ ಲಕ್ಷ್ಮಣ ಸೀತಾ ಸಮೇತ ಕೋದಂಡರಾಮ ದೇವರನ್ನು ನೀಡಿದರು. ಅದಮಾರು ಮಠದ ನರಸಿಂಹ ತೀರ್ಥರಿಗೆ ಚತುರ್ಭಜ ಕಾಳಿಯಮರ್ದನ ಕೃಷ್ಣ, ಕೖಷ್ಣಾಪುರ ಮಠದ ಜನಾರ್ದನ ತೀರ್ಥರಿಗೆ ದ್ವಿಭುಜ ಕಾಳಿಯಮರ್ದನ ಕೃಷ್ಣ, ಪುತ್ತಿಗೆ ಮಠದ ಉಪೇಂದ್ರತೀರ್ಥರಿಗೆ ರುಕ್ಮಿಣೀ ಸತ್ಯಭಾಮಾ ಸಮೇತ ವಿಟ್ಠಲ ದೇವರು, ಶೀರೂರು ಮಠದ ಶ್ರೀವಾಮನ ತೀರ್ಥರಿಗೆ ಶ್ರೀಭೂ ಸಹಿತ ವಿಟ್ಠಲ ದೇವರು, ಸೋದೆ ಮಠದ ಶ್ರೀವಿಷ್ಣುತೀರ್ಥರಿಗೆ ಭೂವರಾಹ ದೇವರು, ಕಾಣಿಯೂರು ಮಠದ ಶ್ರೀರಾಮ ತೀರ್ಥರಿಗೆ ಯೋಗನರಸಿಂಹ ದೇವರು, ಪೇಜಾವರ ಮಠದ ಅಧೋಕ್ಷಜ ತೀರ್ಥರಿಗೆ ಶ್ರೀಭೂ ಸಹಿತ ವಿಟ್ಠಲ ದೇವರನ್ನು ನೀಡಿದ್ದಾರೆ.
ಎರಡು ತಿಂಗಳ ಪರ್ಯಾಯ 2 ವರ್ಷಕ್ಕೆ ಬದಲು: ಅನ್ನಬ್ರಹ್ಮನಾದ ಶ್ರೀಕೃಷ್ಣನ ಪ್ರಧಾನ ಪೂಜೆ ನೆರವೇರಿಸಲು ಒಬ್ಬೊಬ್ಬ ಯತಿಗಳಿಗೆ ಎರಡು ತಿಂಗಳಂತೆ ಕಾಲ ವ್ಯವಸ್ಥೆಯನ್ನು ಆಚಾರ್ಯರು ಮಾಡಿದರು. ಇದನ್ನೇ ಪರ್ಯåಯ ಎನ್ನುತ್ತಾರೆ. ಎರಡು ತಿಂಗಳ ಕಾಲ ಶ್ರೀಕೖಷ್ಣ ಪೂಜೆ ನೆರವೇರಿಸಿದ ಯತಿಗಳು ಮುಂದಿನ ಯತಿಗಳಿಗೆ ಶ್ರೀಕೃಷ್ಣ ಪೂಜೆಗೆ ಅನುವು ಮಾಡಿಕೊಡಲು ಅಕ್ಷಯಪಾತ್ರೆಯ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ. ಪರ್ಯåಯ ಪೀಠಸ್ಥ ಯತಿಗಳಲ್ಲಿ ಸ್ವತಃ ತಾವೇ ಸನ್ನಿಹಿತರಾಗಿ ಶ್ರೀಕೖಷ್ಣನಿಗೆ ಮಹಾಪೂಜೆಯನ್ನು ಆಚಾರ್ಯ ಮಧ್ವರು ನೆರವೇರಿಸುತ್ತಾರೆ ಎಂಬ ಪ್ರತೀತಿ ಇದೆ. ಹೀಗಾಗಿ ಸರ್ವಜ್ಞಪೀಠದಲ್ಲಿ ಕೂಡುವ ಯತಿಗಳೇ ಮಧ್ಯಾಹ್ನದ ಮಹಾಪೂಜೆ ಮತ್ತು ರಾತ್ರಿಯ ಚಾಮರಸೇವಾ ಪೂಜೆಯನ್ನು ನಡೆಸುವ ಪದ್ಧತಿ ಪ್ರಾರಂಭವಾಯಿತು. ಈ ಪದ್ಧತಿ 250 ವರ್ಷ ನಡೆಯಿತು. ಮುಂದೆ ಮಧ್ವಾನುಜರಾದ ಶ್ರೀವಿಷ್ಣುತೀರ್ಥ ಪರಂಪರೆಯಲ್ಲಿ ಬಂದ ಭಾವಿ ಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ಅಷ್ಟಮಠದ ಯತಿಗಳಿಗೆ ರಥಬೀದಿಯಲ್ಲಿ ಪ್ರತ್ಯೇಕ ಮಠಗಳ ವ್ಯವಸ್ಥೆ ಮಾಡಿದರು. ಯತಿಗಳ ಧರ್ಮಪ್ರಚಾರ ಹಿನ್ನೆಲೆಯಲ್ಲಿ ಸಂಚಾರದ ಅನುಕೂಲತೆಗಾಗಿ ಎರಡು ತಿಂಗಳ ಪರ್ಯåಯವನ್ನು ಎರಡು ವರ್ಷಗಳಿಗೆ ವಿಸ್ತರಿಸಿದರು. ಶ್ರೀವಾದಿರಾಜರು ಪಲಿಮಾರು ಮಠದಿಂದ ಕ್ರಿ.ಶ.1522-23ರಲ್ಲಿ ದ್ವೆ ೖವಾರ್ಷಿಕ ಶ್ರೀಕೖಷ್ಣ ಪೂಜಾಪರ್ಯåಯ ಪ್ರಾರಂಭಿಸಿದರು. ಅಂದಿನಿಂದ ಒಬ್ಬೊಬ್ಬ ಯತಿಗಳು ಎರಡು ವರ್ಷಗಳಂತೆ ಶ್ರೀಕೃಷ್ಣ ಪೂಜಾ ಕೈಂಕರ್ಯ ದೀಕ್ಷೆಯನ್ನು ಸ್ವೀಕರಿಸಿದರು. ಈ ಕ್ರಮದಿಂದ ಒಬ್ಬೊಬ್ಬ ಯತಿಗಳಿಗೆ 14 ವರ್ಷಗಳಿಗೊಮ್ಮೆ ಪರ್ಯåಯದ ಸುಯೋಗ ಪ್ರಾಪ್ತವಾಗುತ್ತದೆ. ಈಗ 2024ರ ಜನವರಿ 18ಕ್ಕೆ ದ್ವೆ ೖವಾರ್ಷಿಕ ಪರ್ಯåಯದ ಐದು ನೂರು ವರ್ಷಗಳು ಪೂರ್ಣಗೊಂಡು 503ನೆಯ ವರ್ಷದ ಪ್ರಾರಂಭ. ಎಂಟು ಮಠದವರು ಎರಡು ವರ್ಷಗಳಂತೆ ಕ್ರಮವಾಗಿ ಪರ್ಯåಯವನ್ನು ನಡೆಸಿದರೆ 16 ವರ್ಷಗಳಾಗುತ್ತದೆ. ಹೀಗೆ 16 ವರ್ಷಗಳ ಪರ್ಯåಯ ಚಕ್ರದಲ್ಲಿ 31 ಪರ್ಯåಯ ಚಕ್ರ ಮುಗಿದು 32ನೇ ಪರ್ಯåಯ ಚಕ್ರದಲ್ಲಿ ಪಲಿಮಾರು, ಅದಮಾರು, ಕೃಷ್ಣಾಪುರ ಮಠಗಳ ಪರ್ಯåಯ ಮುಗಿದು ಇದೀಗ ಶ್ರೀಪುತ್ತಿಗೆ ಮಠದ ಪರ್ಯåಯದ ಸಂಭ್ರಮ.
ಪರ್ಯåಯ ಮಹೋತ್ಸವ: ಪರ್ಯಾಯ ಪೀಠವನ್ನೇರುವ ಶ್ರೀಪಾದರು ಜ.18ರ ಬೆಳಗ್ಗೆ 3 ಗಂಟೆಗೆ ಶ್ರೀ ಮಧ್ವಾಚಾರ್ಯರೇ ನಿರ್ವಿುಸಿದ ಕಾಪು ಗ್ರಾಮ ಸಮೀಪದ ದಂಡತೀರ್ಥದಲ್ಲಿ ಸ್ನಾನವನ್ನು ಮಾಡಿ ನಗರದ ಜೋಡುಕಟ್ಟೆಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀಗಳನ್ನು ಭವ್ಯವಾಗಿ ಸ್ವಾಗತಿಸಲಾಗುತ್ತದೆ. ಚಿನ್ನದ ಪಲ್ಲಕ್ಕಿಯಲ್ಲಿ ಭಾವಿ ಪರ್ಯåಯ ಶ್ರೀಗಳ ಪಟ್ಟದ ದೇವರನ್ನು ತರಲಾಗುತ್ತದೆ. ನಂತರ ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀಕೃಷ್ಣ ಮಠವನ್ನು ಪ್ರವೇಶಿಸುತ್ತಾರೆ. ಪರ್ಯåಯ ಶ್ರೀಪಾದರು ಪರ್ಯåಯ ಸ್ವೀಕರಿಸುವ ಯತಿಗಳನ್ನು ಆದರದಿಂದ ಸ್ವಾಗತಿಸಿ, ಶ್ರೀಕೃಷ್ಣ ಮುಖ್ಯಪ್ರಾಣ, ಶ್ರೀಮಧ್ವಾಚಾರ್ಯ, ಗರುಡ ದೇವರ ದರ್ಶನವನ್ನು ಮಾಡಿಸಿ, ಶ್ರೀಮಧ್ವಾಚಾರ್ಯರ ಸನ್ನಿಧಿಯಲ್ಲಿ ಶುಭಮುಹೂರ್ತದಲ್ಲಿ ಅಕ್ಷಯಪಾತ್ರೆ ಹಸ್ತಾಂತರಿಸುತ್ತಾರೆ. ನಂತರ ಆಚಾರ್ಯ ಮಧ್ವರು ಕುಳಿತು ಕೃಷ್ಣಪೂಜೆ ನೆರವೇರಿಸಿದ್ದ ಸರ್ವಜ್ಞ ಪೀಠದಲ್ಲಿ ಪರ್ಯಾಯ ಶ್ರೀಗಳನ್ನು ಕುಳ್ಳಿರಿಸುತ್ತಾರೆ. ಅ ಬಳಿಕ ದರ್ಬಾರ್ ನಡೆದು, ಮಧ್ಯಾಹ್ನದ ಮಹಾಪೂಜೆ ನಂತರ ಮಹಾ ಅನ್ನಸಂತರ್ಪಣೆ. ಹೀಗೆ ಅನೇಕ ವಿಧಗಳಲ್ಲಿ ವೈಶಿಷ್ಟ ್ಯೂರ್ಣವಾದ ಉಡುಪಿಯ ಪರ್ಯåಯ ಮಹೋತ್ಸವ ಧಾರ್ವಿುಕ, ಸಾಂಸ್ಕೃತಿಕ, ಸಾಮಾಜಿಕ ದೖಷ್ಟಿಕೋನಗಳಿಂದಾಗಿ ಇಂದು ನಾಡಿನ ಹಬ್ಬವಾಗಿ ಮಾರ್ಪಟ್ಟಿದೆ.
(ಲೇಖಕರು ಉಡುಪಿಯ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eleven =
Remember me
