ಯಾದಗಿರಿ:ಕೊಡೇಕಲ್ ಸಮೀಪ ಕೃಷ್ಣಾ ನದಿ ಪ್ರವಾಹದಲ್ಲಿ ಕುರಿಗಾಹಿ ಮತ್ತು 200ಕ್ಕೂ ಹೆಚ್ಚು ಕುರಿಗಳು ಸಿಲುಕಿದ್ದು, ಪ್ರಾಣಾಪಾಯದ ಭೀತಿ ಎದುರಾಗಿದೆ.
ಜಂಗಿನಗಡ್ಡಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ಗೆಜ್ಜಿಗುಂಡ ಎಂಬ ನಡುಗಡ್ಡೆಯಲ್ಲಿ ಮೇಯಲು ತೆರಳಿದ್ದ 200ಕ್ಕೂ ಹೆಚ್ಚು ಕುರಿಗಳ ಜತೆಗೆ ಕುರಿಗಾಹಿಗಳು ಪ್ರವಾಹದಲ್ಲಿ ಸಿಲುಕಿದ್ದಾರೆ. ಈ ಪೈಕಿ ಓರ್ವ ಕುರಿಗಾಹಿ ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಮರಳಿದ್ದು, ಕುರಿಗಳ ಜತೆಗೆ ಮತ್ತೊಬ್ಬ ಕುರಿಗಾಹಿ ನಡುಗಡ್ಡೆಯಲ್ಲೇ ಇದ್ದಾರೆ. ಪ್ರವಾಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರು ವಾಪಸ್​ ಬರಲು ಆಗುತ್ತಿಲ್ಲ.
ಇದನ್ನೂ ಓದಿರಿಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ; ಪ್ರಮೋದ್​ ಮುತಾಲಿಕ್​
ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಳು ಮತ್ತು ಕುರಿಗಾಹಿಯನ್ನು ಸುರಕ್ಷಿತವಾಗಿ ಕರೆತರಲು ತಾಲೂಕಾಡಳಿತ ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಗಿನಗಡ್ಡಿ ಸಮೀಪದಲ್ಲೇ ಬೀಡು ಬಿಟ್ಟಿದ್ದಾರೆ. ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಾಗಿರುವ ಕಾರಣ ನಡುಗಡ್ಡೆಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ಬಸವಸಾಗರ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ಪ್ರಮಾಣದ ನೀರಿನ ಒಳ ಹರಿವು ಉಂಟಾಗಿದೆ. ಜಲಾಶಯದ 21 ಮಖ್ಯ ಗೇಟುಗಳನ್ನು ತೆರೆದು 2 ಲಕ್ಷ ಕ್ಯೂಸೆಕ್​ಗೂ ಹೆಚ್ಚು ನೀರನ್ನು ನದಿಗೆ ಹರಿಸಲಾಗುತ್ತಿರುವ ಕಾರಣ ಕೃಷ್ಣೆಗೆ ಭೀಕರ ಪ್ರವಾಹ ಎದುರಾಗಿದೆ. ಇದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣಗೊಂಡಿದೆ
ಪ್ರವಾಹದ ಹೊಡೆತಕ್ಕೆ ಸಿಲುಕಿ ಮರವೇರಿದ ಹಾವುಗಳು, ಕೋತಿಗಳು… ಹಸಿವುನಿಂದ ಬಳತ್ತಿವೆ ಮೂಕಜೀವಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 14 =
Remember me
