ಮಹದಾಯಿ ನದಿ ನೀರಿನ ಬಳಕೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ‘ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದ’ಕ್ಕೆ ಆಗ್ರಹ ಕೇಳಿಬಂದಿದೆ. ಪ್ರತಿವರ್ಷ ಪ್ರವಾಹ ಹಾಗೂ ಬರಕ್ಕೆ ತುತ್ತಾಗುತ್ತಿರುವ ಉಭಯ ರಾಜ್ಯಗಳ 200ಕ್ಕೂ ಅಧಿಕ ಗ್ರಾಮಗಳ ಬವಣೆ ನೀಗಿಸುವಲ್ಲಿ ಸರ್ಕಾರಗಳು ಸಮನ್ವಯ ಸಾಧಿಸಬೇಕು ಎಂದು ರೈತಪರ ಸಂಘಟನೆಗಳು ಒತ್ತಾಯಿಸಿವೆ.
ಸಮನ್ವಯತೆ ಅನಿವಾರ್ಯ:ಕರ್ನಾಟಕದ ಭಾಗವಾಗಿರುವ 814 ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಬೇಕೆಂದು ಸದಾ ಕ್ಯಾತೆ ತೆಗೆಯುವ ಮಹಾರಾಷ್ಟ್ರ ತನ್ನದೇ ಗಡಿ ಭಾಗವನ್ನು ಹೇಗೆ ನಿರ್ಲಕ್ಷಿಸಿದೆ ಎಂಬುದನ್ನು ಕಳೆದ ಬಾರಿ ಜತ್ತ ತಾಲೂಕಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ಅನಾವರಣಗೊಳಿಸಿತ್ತು. ಅಲ್ಲಿನ ಜನತೆ ‘ನೀರು ಕೊಡಿ, ಇಲ್ಲವೆ ಕರ್ನಾಟಕಕ್ಕೆ ಸೇರಲು ನಮಗೆ ಅವಕಾಶ ಕೊಡಿ’ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕೃಷ್ಣಾ ನದಿ ನೀರು ಅವಲಂಬಿಸಿರುವ ಮಹಾರಾಷ್ಟ್ರ ಹಾಗೂ ಕರ್ನಾಟಕ (ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ)ಕ್ಕೆ ನೀರಿನ ಸಮಸ್ಯೆ ನೀಗಿಸಿಕೊಳ್ಳಲು ಪರಸ್ಪರ ಸಮನ್ವಯತೆ ಸಾಧಿಸುವುದು ಅನಿವಾರ್ಯ.
ಒಪ್ಪಂದದಿಂದ ಅನುಕೂಲ
ಉತ್ತರ ಕರ್ನಾಟಕದ ಕೃಷ್ಣಾ ನದಿಪಾತ್ರದಲ್ಲಿರುವ ಜಿಲ್ಲೆಗಳಿಗೆ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಿಗೆ ಉಭಯ ರಾಜ್ಯ ಸರ್ಕಾರಗಳ ನಡುವಿನ ನೀರಿನ ಒಪ್ಪಂದದಿಂದ ಅನುಕೂಲ ವಾಗಲಿದೆ. ಆದರೆ, ಆಲಮಟ್ಟಿಯಿಂದ ಜತ್ತ ಪ್ರದೇಶದವರೆಗೆ ಸುಮಾರು 30 ಕಿ.ಮೀ. ಪೈಪ್​ಲೈನ್ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರವೇ ಮಾಡಲಿ ಎನ್ನುತ್ತಿದೆ ಮಹಾರಾಷ್ಟ್ರ. ಮತ್ತೊಂದೆಡೆ, ನಾವು ನೀರು ಹರಿಸಲು ಉಚಿತವಾಗಿ ಜಾಗ ಕಲ್ಪಿಸುತ್ತೇವೆ. ಕಾಮಗಾರಿ ನೀವೇ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಿದೆ ಎನ್ನಲಾಗಿದೆ.
ಏನಿದು ನೀರಿಗಾಗಿ ನೀರು?
2004ರಿಂದ 2014ರ ವರೆಗೆ ಪ್ರತಿವರ್ಷ 2ರಿಂದ 4 ಟಿಎಂಸಿ ನೀರನ್ನು ಮಹಾರಾಷ್ಟ್ರದ ಕೊಯ್ನಾ ಮತ್ತು ವಾರಣಾ ಅಣೆಕಟ್ಟಿನಿಂದ ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರಕ್ಕೆ ಹರಿಸಲಾಗುತ್ತಿತ್ತು. ಇದಕ್ಕೆ ಕರ್ನಾಟಕ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ 20 ಕೋಟಿ ರೂ. ಪಾವತಿಸಿತ್ತು.
ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಹೆಚ್ಚಾಗುವ ನೀರಿನ ಸಮಸ್ಯೆ ಮನಗಂಡ ಮಹಾರಾಷ್ಟ್ರದ ಆಗಿನ ಸಿಎಂ ದೇವೇಂದ್ರ ಫಡ್ನವೀಸ್, 2014ರಿಂದ ಹಣ ನಿರಾಕರಿಸುವ ಮೂಲಕ ಆಲಮಟ್ಟಿ ಜಲಾಶಯದಿಂದ ಜತ್ತ ಪ್ರದೇಶಕ್ಕೆ ‘ನೀರಿಗಾಗಿ ನೀರು ನೀಡಿ’ ಎಂಬ ಪ್ರಸ್ತಾವನೆ ಇಟ್ಟಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಬದಲಿಗೆ ಇದೀಗ ಶಿವಸೇನೆ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿದ್ದು, ಮತ್ತೆ ಭಾಷೆ ಹಾಗೂ ಗಡಿ ವಿವಾದ ಉಲ್ಬಣಿಸಿದೆ. ಇದರಿಂದ ನೀರು ವಿನಿಮಯ ಒಪ್ಪಂದಕ್ಕೆ ಹಿನ್ನಡೆಯಾಗಿದೆ.
ಮಹಾ ಸರ್ಕಾರದ ಜತೆಗಿನ ನೀರು ವಿನಿಮಯ ಒಪ್ಪಂದದ ಬಗ್ಗೆ ತಜ್ಞರಿಂದ ಕಾನೂನು ಸಲಹೆ ಪಡೆದು ಮುಂದಿನ ದಿನಗಳಲ್ಲಿ ತೀರ್ವನಿಸಲಾಗುವುದು.
| ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವ
ಉಭಯ ರಾಜ್ಯ ಸರ್ಕಾರಗಳ ಸಮನ್ವಯ ಕೊರತೆಯಿಂದ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಕರ್ನಾಟಕದ ಬೆಳಗಾವಿ ಜಿಲ್ಲೆಯ ನೂರಾರು ಗ್ರಾಮಗಳು ಮಳೆಗಾಲದಲ್ಲಿ ನೆರೆ ಹಾನಿ, ಬೇಸಿಗೆಯಲ್ಲಿ ಬರಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವುದು ತಪ್ಪಿಲ್ಲ. ಕಳೆದ ಮಳೆಗಾಲದಲ್ಲಿ ಎರಡೂ ರಾಜ್ಯಗಳು ಪ್ರವಾಹದಿಂದ ಸಾಕಷ್ಟು ಹಾನಿ ಅನುಭವಿಸಿವೆ. ಇದೀಗ ಬೇಸಿಗೆ ಆರಂಭಕ್ಕೆ ಕೆಲವೇ ವಾರ ಬಾಕಿ ಇರುವುದರಿಂದ ಕೂಡಲೇ ನದಿ ನೀರು ವಿನಿಮಯ ಒಪ್ಪಂದಕ್ಕೆ ಸರ್ಕಾರಗಳು ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದೇವೆ.
| ಅಶೋಕ ಚಂದರಗಿ ಕನ್ನಡಪರ ಹೋರಾಟಗಾರ, ಬೆಳಗಾವಿ
| ರವಿ ಗೋಸಾವಿ ಬೆಳಗಾವಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three + 4 =
Remember me
