ಮಂಡ್ಯ:ತೀವ್ರ ಹೋರಾಟದ ನಡುವೆಯೂ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕೆಲಸವನ್ನು ರಾಜ್ಯಸರ್ಕಾರ ಮಾಡಲಿಲ್ಲ. ಪರಿಣಾಮ ಜೂನ್‌ನಿಂದ ಸುಮಾರು 26 ಟಿಎಂಸಿಯಷ್ಟು ನೀರು ತ.ನಾಡಿಗೆ ಹರಿದು ಹೋಗಿದೆ. ಅಂತೆಯೇ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಬೆಳೆಗೆಂದು ಕೇವಲ 10 ಟಿಎಂಸಿ ನೀರನ್ನು ಹೊರಬಿಡಲಾಗಿದೆ ಎಂದು ತಿಳಿದುಬಂದಿದೆ.ಮುಂಗಾರು ಕೈಕೊಟ್ಟಿರುವುದರಿಂದ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಸೋಮವಾರ ಸಂಜೆ ವೇಳೆಗೆ ಡ್ಯಾಂನಲ್ಲಿ 100.83 ಅಡಿ ನೀರಿನ ಸಂಗ್ರಹವಿದೆ. 4,210 ಕ್ಯೂಸೆಕ್ ಒಳಹರಿವಿದ್ದರೆ, 6,163 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ. ಕಳೆದೆರೆಡು ದಿನದಿಂದ ಕಾವೇರಿ ಕಣಿವೆಯಲ್ಲಿ ಸ್ವಲ್ಪ ಮಳೆಯಾಗುತ್ತಿದ್ದರೂ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ತ.ನಾಡಿಗೆ ನೀರು ಹರಿಸುತ್ತಲೇ ಇರುವುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಮಾತ್ರವಲ್ಲದೆ ನೀರು ಹರಿಸದಂತೆ ನಿರಂತರ ಪ್ರತಿಭಟನೆ ನಡೆಯುತ್ತಿದೆ. ರಾಜ್ಯಸರ್ಕಾರ ಇದೇ ರೀತಿ ನೀರು ಹರಿಸುತಲ್ಲೇ ಇದ್ದರೆ ರಾಜ್ಯದ ಜನರ ಕಥೆ ಏನೆಂದು ಪ್ರಶ್ನಿಸುತ್ತಿದ್ದಾರೆ. ಇರುವ ನೀರಿನಲ್ಲಿಯೇ ಬೆಳೆಗೆ ಹಾಗೂ ನಾಲ್ಕು ಜಿಲ್ಲೆಯ ಜನರಿಗೆ ಮುಂದಿನ ಬೇಸಿಗೆವರೆಗೆ ನೀರು ಕೊಡಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
