ತುಮಕೂರು:ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್. ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಮಾಡಿರುವ ಆರೋಪಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.
‘‘ಪಾಂಡವಪುರ ಪಕ್ಕದಲ್ಲಿ ಬೇಬಿ ಬೆಟ್ಟ ಅಂತ ಇದೆ. ಕೆ.ಆರ್.ಎಸ್. ಸುತ್ತಮುತ್ತಲಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ಮೈನಿಂಗ್ ಚಟುವಟಿಕೆಯನ್ನು ಬಂದ್ ಮಾಡಿದ್ದೇವೆ. ಕಳೆದ ಮೂರ್ನಾಲ್ಕು ದಿನಗಳಿಂದ ಅಲ್ಲಿ ಯಾವುದೇ ಮೈನಿಂಗ್ ನಡೆಯುತ್ತಿಲ್ಲ’’ ಎಂದು ವಿವರಿಸಿದ್ದಾರೆ.
‘‘ಡ್ಯಾಮ್ ಬಿರುಕು ಬಿಟ್ಟಿದೆ ಎಂಬ ಆರೋಪ ಕುರಿತು ತನಿಖೆ ಮಾಡಲಾಗುತ್ತಿದೆ. ಆದರೆ ನನಗೆ ತಿಳಿದ ಪ್ರಕಾರ, ಡ್ಯಾಮ್ನಲ್ಲಿ ಯಾವುದೇ ಲೀಕೇಜ್ ಇಲ್ಲ, ಯಾರೂ ಈ ಬಗ್ಗೆ ಆತಂಕ ಪಡಬೇಕಾಗಿಲ್ಲ. ತನಿಖೆ ನಡೆಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೋಟಿಸ್ ಕೊಟ್ಟು ಗಣಿಗಾರಿಕೆ ಕೇಂದ್ರಗಳನ್ನು ಮುಚ್ಚಿಸಲಾಗಿದೆ’’ ಎಂದು ಸ್ಪಷ್ಟಪಡಿಸಿದ್ದಾರೆ.
ಅನ್‌ಲಾಕ್‌ನ ಮೊದಲ ದಿನವೇ ಮದ್ಯ ತಂದು ಸಿಕ್ಕಿಬಿದ್ದ ಪ್ರವಾಸಿಗರು!

96 ಸಾವಿರ ರೂ. ಬೆಲೆಯ ಎಸಿ 5,900 ರೂಪಾಯಿಗೆ ಮಾರಾಟ! ಫುಲ್ ಖುಷ್ ಆದ ಗ್ರಾಹಕರು

ಕಿರಣ್​ಗೆ ಡಿವೋರ್ಸ್ ನೀಡಿದ ಅಮೀರ್​ಗೆ ಫಾತೀಮಾ 3ನೇ ಹೆಂಡತಿ!? ಟ್ರೆಂಡಿಂಗ್​ನಲ್ಲಿ ದಂಗಲ್ ನಟಿ

Sign in to your account
Please enter an answer in digits:11 − 4 =
Remember me
