ಮಂಡ್ಯ:ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿಗಳೆಲ್ಲ ಉಕ್ಕಿ ಹರಿಯುತ್ತಿರುವುದರಿಂದ ಜಲಾಯಶಗಳು ಬಹುತೇಕ ಭರ್ತಿಯಾಗಿವೆ. ಅದರಲ್ಲೂ ಕೆಆರ್​ಎಸ್​ ಜಲಾಶಯದಲ್ಲಿ ನೀರು ವರ್ಣರಂಜಿತವಾಗಿ ಭೋರ್ಗರೆದು ಹರಿಯುತ್ತಿವೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಜಲಾಯಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಹೆಚ್ಚುವರಿ ನೀರನ್ನು ಗೇಟ್​ಗಳನ್ನು ತೆರೆದು ಹೊರಬಿಡಲಾಗುತ್ತಿದೆ. ಪರಿಣಾಮವಾಗಿ ನೀರು ಕಲರ್​ಫುಲ್ ಆಗಿ ಕಾಣಿಸುತ್ತಿದ್ದು, ನೋಡುಗರಿಗೆ ರಂಜನೆಯನ್ನು ನೀಡುತ್ತಿದೆ.
ಕೆಆರ್​ಎಸ್ ಸದ್ಯ ಭರ್ತಿ ಹಂತಕ್ಕೆ ತಲುಪಿದ್ದು, ಡ್ಯಾಮ್​ 42,633 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 124.80 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಈಗಾಗಲೇ 123.10 ಅಡಿ ಭರ್ತಿಯಾಗಿರುವುದರಿಂದ 41000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ದೇವೇಗೌಡರ ಮನೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ: ಬೆಂಬಲದ ಕುರಿತು ಸದ್ಯಕ್ಕಿಷ್ಟೇ ತೀರ್ಮಾನ..

ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

Sign in to your account
Please enter an answer in digits:eight − 6 =
Remember me
