ಮಂಡ್ಯ:ಕೆಆರ್​ಎಸ್​ ಡ್ಯಾಂ ಮೇಲೆ ಯುವಕನೊಬ್ಬ ಪೊಲೀಸ್​ ಜೀಪ್​ನಲ್ಲಿ ಕುಳಿತು ದರ್ಬಾರ್​ ನಡೆಸಿದ್ದಾನೆ. ಕಾನೂನು ಪಾಲಿಸಬೇಕಿದ್ದ ಪೊಲೀಸಪ್ಪನಿಂದಲೇ ಯುವಕನ ದರ್ಬಾರ್​ಗೆ ಸಾಥ್ ನೀಡಲಾಗಿದೆ.
ಭದ್ರತೆ ದೃಷ್ಟಿಯಿಂದ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇದೆ. ಡ್ಯಾಂ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆಯಾಗಿದ್ದು, ಸರ್ಕಾರಿ ವಾಹನದಲ್ಲಿ ಕುಳಿತ ಯುವಕ ಮೊಬೈಲ್​ ಕ್ಯಾಮರಾಗೂ ಪೋಸ್​ ಕೊಟ್ಟಿದ್ದಾನೆ. ಯುವಕ ಜೀಪ್ ಚಲಾಯಿಸುತಿದ್ರೆ ಪಕ್ಕದಲ್ಲಿ ಕೂತಿದ್ದ ಪೊಲೀಸ್ ಅಧಿಕಾರಿ ಮೊಬೈಲ್​ನಲ್ಲಿ ಶೂಟ್ ಮಾಡಿದ್ದಾರೆ.
ಪೊಲೀಸ್ ಜೀಪ್​ಅನ್ನು ಡ್ಯಾಂ ಮೇಲೆ ಯುವಕ ಚಲಾಯಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಂಡ್ಯದಲ್ಲಿ ಸಾಮಾನ್ಯ ಜನರಿಗೊಂದು ನಿಯಮ, ಅಧಿಕಾರಿ ಕಡೆಯವರಿಗೊಂದು ನಿಯಮವೇ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ. ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಮಂಡ್ಯ ಜಿಲ್ಲೆ ಕೆಆರ್​ಎಸ್​ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶ ನಿಷೇಧವಿದ್ದರೂ ಯುವಕನೊಬ್ಬ ಪೊಲೀಸ್​ ಜೀಪ್​ನಲ್ಲಿ ದರ್ಬಾರ್ ನಡೆಸಿದ್ದಾರೆ. ಕಾನೂನು ಪಾಲಿಸಬೇಕಿದ್ದ ಪೊಲೀಸಪ್ಪನೇ ಯುವಕ ಜೀಪ್ ಚಲಾಯಿಸುವುದನ್ನ ಮೊಬೈಲ್​ನಲ್ಲಿ ಚಿತ್ರೀಕರಿಸುತ್ತಾ ಸಾಥ್​ ಕೊಟ್ಟಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.pic.twitter.com/56VFkeg54m
— Vijayavani (@VVani4U)February 27, 2021

ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ…

ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ… ಶಾಸಕನಿಗೆ ಟೋಲ್​ ಸಿಬ್ಬಂದಿ ಧಮ್ಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
