ಕೆ.ಆರ್.ಸಾಗರ:ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ಶುಕ್ರವಾರ 92 ಅಡಿಗೆ ಕುಸಿದಿದೆ. ಈ ನಡುವೆ ಫೆಬ್ರವರಿ ತಿಂಗಳಲ್ಲಿ ಪ್ರತಿ ನಿತ್ಯ 998 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನಿಯಂತ್ರಣ ಮಂಡಳಿ ಶಿಫಾರಸು ಮಾಡಿರುವುದು ಆತಂಕ ಹೆಚ್ಚಿಸಿದೆ.ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಅಂತೆಯೇ ಒಳಹರಿವು ಕೂಡ ಇಳಿಮುಖವಾಗುತ್ತಿರುವುದರಿಂದ ನೀರಿನ ಮಟ್ಟ ಕುಸಿಯಲಾರಂಭಿಸಿದೆ. ಇದರ ಮಧ್ಯೆ ಕಾವೇರಿ ನಿಯಂತ್ರಣ ಮಂಡಳಿ ನಿಲುವು ಆಕ್ರೋಶಕ್ಕೆ ಕಾರಣವಾಗಿದೆ.ನೀರಿನ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಕೆ.ಆರ್.ಸಾಗರ ಅಣೆಕಟ್ಟೆ ಸೇರಿದಂತೆ ಕಾವೇರಿ ನದಿ ವ್ಯಾಪ್ತಿಯ ರೈತರು ಬೇಸಿಗೆ ಬೆಳೆ ಬೆಳೆಯಲು ನೀರಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದರಿಂದಾಗಿ ಈಗಾಗಲೇ ಆತಂಕದ ಪರಿಸ್ಥಿತಿ ಎದುರಿಸುತ್ತಿರುವ ರೈತರು ಹಾಗೂ ಕಾವೇರಿಕೊಳ್ಳದ ಜಿಲ್ಲೆಗಳ ಜನರಿಗೆ ಕಾವೇರಿ ನಿಯಂತ್ರಣ ಮಂಡಳಿಯ ಶಿಫಾರಸು ಬೇಸರ ತರಿಸಿದೆ. ಹಲವು ತಿಂಗಳಿಂದ ತ.ನಾಡು ಪರವಾಗಿಯೇ ಆದೇಶ ನೀಡುತ್ತಿರುವುದು ಮಂಡಳಿಯ ರಾಜ್ಯ ವಿರೋಧಿ ನಿಲುವನ್ನು ತೋರಿಸುತ್ತಿದೆ.ಮುಂಗಾರು ಮಳೆ ಬೀಳಲು ಇನ್ನೂ 6 ತಿಂಗಳು ಬೇಕಿದೆ. ಸಧ್ಯಕ್ಕೆ ಸಂಗ್ರಹವಾಗಿರುವ ನೀರಿನಲ್ಲಿಯೇ ಅಲ್ಲಿಯವರೆಗೆ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ವರ್ಷ ಜ.19ರಂದು ಅಣೆಕಟ್ಟೆಯಲ್ಲಿ ನೀರಿನ ಮಟ್ಟ 116.61 ಅಡಿ ಇತ್ತು. ಒಳಹರಿವು 917 ಕ್ಯುಸೆಕ್, 4,140 ಕ್ಯುಸೆಕ್ ಹೊರಹರಿವಿತ್ತು. ಈ ಅಂಕಿ ಅಂಶದ ಆಧಾರದಲ್ಲಿ ಗಮನಿಸುವುದಾದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಬರೋಬರಿ 24 ಅಡಿಯಷ್ಟು ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ನಿಲುವಿನ ಬಗ್ಗೆ ಕುತೂಹಲ ಮೂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
