ಬೆಂಗಳೂರು:ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಲಾಶಯ ನಿರೀಕ್ಷೆಗೂ ಮುನ್ನವೇ ಭರ್ತಿಯಾಗುವತ್ತ ಸಾಗಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆಆರ್​ಎಸ್ ಅಣೆಕಟ್ಟೆಯಲ್ಲಿ ಭಾನುವಾರ ರಾತ್ರಿ ವೇಳೆಗೆ 107 ಅಡಿ ನೀರು ಸಂಗ್ರಹವಾಗಿದೆ. 16781 ಕ್ಯೂಸೆಕ್ ಒಳಹರಿವು, 3726 ಕ್ಯೂ. ಹೊರ ಹರಿವು ಇದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 90 ಅಡಿ ನೀರಿತ್ತು. ಬೆಳಗಾವಿ ನಗರ ಸೇರಿ ಜಿಲ್ಲೆಯ ಹಲವೆಡೆ ಭಾನುವಾರವೂ ಮಳೆ ಮುಂದುವರಿದಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಯಲ್ಲಿ ಒಳಹರಿವು ಹೆಚ್ಚಿದ್ದು, ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಒಂದೂವರೆ ಅಡಿ ನೀರು ಏರಿಕೆಯಾಗಿದೆ. ನವಿಲುತೀರ್ಥ ಜಲಾಶಯಕ್ಕೆ 2,587 ಕ್ಯೂ.ಒಳ ಹರಿವು ಇದೆ.
ಬಿಸಿಲ ವಾತಾವರಣ:ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿದೆ. ಭಾನುವಾರ ದಿನವಿಡೀ ಬಿಸಿಲಿತ್ತು.
ಶಿವಮೊಗ್ಗದಲ್ಲಿ ವರುಣಾರ್ಭಟ:ಮಲೆನಾಡಿನಲ್ಲಿ ಮಳೆ ರಭಸ ತುಸು ತಗ್ಗಿದ್ದು ಭಾನುವಾರ ಚದುರಿದಂತೆ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನ ಒಂದು ತಾಸು ಭಾರಿ ಮಳೆ ಸುರಿಯಿತು. ಧಾರಾಕಾರ ಮಳೆಯಿಂದ ಚಾನಲ್, ಚರಂಡಿ ನೀರು ರಸ್ತೆ ಮೇಲೆಯೇ ಉಕ್ಕಿ ಹರಿಯಿತು. ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಬೆಂಗಳೂರು ಸುತ್ತಮುತ್ತ ಚದುರಿದಂತೆ ಮಳೆ ಸುರಿದಿದೆ.
ವೃದ್ಧೆ ಸಾವು:ವಿಜಯಪುರ ಜಿಲ್ಲೆ ಹೂವಿನಹಿಪ್ಪರಗಿ ಗ್ರಾಮದಲ್ಲಿ ಭಾನುವಾರ ಸಂಜೆ ಜಿಟಿ ಜಿಟಿ ಮಳೆಗೆ ಮನೆ ಕುಸಿದು ವೃದ್ಧೆ ಲಾಲಬಿ ನಬಿಸಾಬ ಶಾಬಾದಿ (80) ಮೃತಪಟ್ಟಿದ್ದಾರೆ.
ಮನಸ್ಸು ಕಲ್ಲಾಗಿಸಿಕೊಂಡು ಮೃತ ಶಿಶುವನ್ನು ನಾಲೆಗೆಸೆದ ತಂದೆ; ಕಾರಣ ಅಮಾನವೀಯ ಗ್ರಾಮಸ್ಥರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
