ಮೈಸೂರು:ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 21ರಿಂದ ಮೂರು ದಿನ ‘ವಿಜಯವಾಣಿ’ ಹಾಗೂ ದಿಗ್ವಿಜಯ 247 ನ್ಯೂಸ್ ಚಾನಲ್ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳದಲ್ಲಿ ಶಿವರಾತ್ರಿ ಪ್ರಯá-ಕ್ತ ನವಧಾನ್ಯಗಳ ಶಿವಲಿಂಗ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುವ ಮೂಲಕ ಶಿವರಾತ್ರಿಯ ಭಕ್ತಿ ಮೇಳೈಸಲಿದೆ. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಈ ನವಧಾನ್ಯ ಶಿವಲಿಂಗ ನಿರ್ಮಾಣ ಮಾಡಲಿದೆ. ರೈತರು ಬೆಳೆದ ಬೆಳೆಗಳಲ್ಲಿಯೇ ನವಗ್ರಹಗಳನ್ನು ಪ್ರತಿನಿಧಿಸುವ ನವಧಾನ್ಯಗಳಿಂದ 9 ಶಿವಲಿಂಗಗಳನ್ನು ನಿರ್ಮಾಣ ಮಾಡುವ ಮೂಲಕ ಮೇಳದಲ್ಲಿಯೂ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಶಿವರಾತ್ರಿಯಂದು ಧಾರ್ವಿುಕ ಆಚರಣೆಗಳು, ಗೀತಗಾಯನ ಇರಲಿದೆ. ಈ ನವಧಾನ್ಯ ಶಿವಲಿಂಗಗಳ ದರ್ಶನಕ್ಕೆ ಮೂರೂ ದಿನವು ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ಇರಲಿದೆ.
ನವಧಾನ್ಯಗಳ ಅಲಂಕಾರ:ನವಧಾನ್ಯಗಳಾದ ಅಕ್ಕಿ, ಗೋಧಿ, ಉದ್ದಿನಕಾಳು, ಹೆಸರುಕಾಳು, ಅವರೆಕಾಳು,ಕಡ್ಲೆಕಾಳು, ತೊಗರಿಬೇಳೆ, ಎಳ್ಳು, ಹುರುಳಿಕಾಳುಗಳಿಂದ ಪ್ರತಿಯೊಂದು ಲಿಂಗಕ್ಕೆ ಅಲಂಕರಿಸಿ ಆಕರ್ಷಕವಾಗಿ ಕಾಣುವಂತೆ ನಿರ್ವಣಗೊಳ್ಳಲಿವೆ. ಮಹಾಶಿವರಾತ್ರಿಯ ಮಹಿಮೆ, ಆಧ್ಯಾತ್ಮಿಕ ರಹಸ್ಯ, ಜಾಗರಣೆಯ ಜಾಗೃತಿ, ಸೃಷ್ಟಿ, ನೀತಿ ಲಯದ ಸಂಕೇತ, ಬಿಲ್ವಪತ್ರೆಯಿಂದ ಪೂಜೆ ಹಾಗೂ ಉಪವಾಸ ಮಾಡುವ ಪದ್ಧತಿ ಬಗ್ಗೆ ತಿಳಿಸಿಕೊಡá-ವರು. ಲಿಂಗರೂಪದಲ್ಲಿ ಶಿವ ಇರುವುದರಿಂದ ರುದ್ರಾಕ್ಷೇಶ್ವರ , ವಜ್ರೇಶ್ವರ , ಶಿವಲಿಂಗೇಶ್ವರ , ಬಿಲ್ವಪತ್ರೆ ಶಿವಲಿಂಗ , ಕುಂಕುಮ ಶಿವಲಿಂಗ , ಚಂದನ ಶಿವಲಿಂಗ , ನವಧಾನ್ಯ ಶಿವಲಿಂಗ ಮತ್ತು ಭತ್ಮ ವಿಭೂತ ಶಿವಲಿಂಗ ಎಂಬ ಅಷ್ಟ ಲಿಂಗಗಳ ದರ್ಶನ ಏರ್ಪಡಿಸಲಾಗುವುದು. ಈ ಮೂಲಕ ಮನುಷ್ಯರಲ್ಲಿರುವ ಮೋಹ, ಅಹಂಕಾರ, ಅಜ್ಞಾನದ ಫಲವಾಗಿ ಬದುಕು ಅಶಾಂತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಶಿವಲಿಂಗಗಳ ದರ್ಶನ ಪಡೆದು ಶಾಂತಿ, ನೆಮ್ಮದಿಯ ಬದುಕನ್ನು ತಮ್ಮದಾಗಿಸಿಕೊಳ್ಳಬಹುದು.
ನವಧಾನ್ಯಗಳ ಮಹತ್ವ
ಗೋಧಿ:ಸೂರ್ಯ ಗ್ರಹದ ಸಂಕೇತ. ಗೋಧಿಯನ್ನು ಬಳಸುವುದರಿಂದ ಪಿತ್ತ ಹಾಗೂ ಪಿತ್ತ ಪ್ರಧಾನವಾದ ದೋಷಗಳು ನಿವಾರಣೆಯಾಗುತ್ತವೆ. ಸನ್​ಸ್ಟ್ರೋಕ್​ನಂತಹ ದುಷ್ಪರಿಣಾಮಗಳನ್ನು ತಡೆಗಟ್ಟುವ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೂರ್ಯದೋಷ ಉಳ್ಳವರು ಪ್ರತಿ ಭಾನುವಾರ ನವಗ್ರಹಗಳಿಗೆ ಎರಡು ಪ್ರದಕ್ಷಿಣೆ ಬಂದು ಗೋಧಿಯನ್ನು ದಾನ ಮಾಡುವುದು ಒಳ್ಳೆಯದು.
ಅಕ್ಕಿ:ತಂಡುಲ ಹೆಸರು ಚಂದ್ರನನ್ನು ಪ್ರತಿನಿಧಿಸುತ್ತದೆ. ಚಂದ್ರನು ಮನಸ್ಸಿನ ಕಾರಕ. ಆ ಕಾರಣ ಮಾನಸಿಕವಾಗಿ ಬಲಾಢ್ಯನಾಗಲು, ಮನೋ ಏಕಾಗ್ರತೆಗೆ, ಮನಃಶಾಂತಿಗಾಗಿ, ರಕ್ತ ಚಲನೆ ಸರಾಗವಾಗಿ ಆಗಲು ಸಣ್ಣ ಮಕ್ಕಳಲ್ಲಿ ಕಾಣುವ ಎಲ್ಲ ಬಗೆಯ ವ್ಯಾದಿಗಳ ನಿವಾರಣೆಗೆ ಅಕ್ಕಿಯು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಚಂದ್ರ ದೋಷ ಇರುವವರು ಪ್ರತಿ ಸೋಮವಾರ ನವಗ್ರಹಗಳಿಗೆ ಒಂಬತ್ತು ಪ್ರದಕ್ಷಿಣೆ ಹಾಕಿ ಅಕ್ಕಿಯನ್ನು ದಾನ ಮಾಡುವುದು.
ತೊಗರಿ:ಅಂಗಾರಕನನ್ನು ಪ್ರತಿನಿಧಿಸುತ್ತದೆ. ತೊಗರಿ ಬೇಳೆಯ ಬಳಕೆಯಿಂದ ಸ್ತ್ರೀ ಸಂಬಂಧಿತ ರೋಗಗಳು ನಿವಾರಣೆಯಾಗುತ್ತವೆ. ಯಥೇಚ್ಛವಾಗಿ ತೊಗರಿಯನ್ನು ಬಳಸುವುದರಿಂದ ಹೃದಯದ ಕವಾಟಗಳಲ್ಲಿರುವ ತೊಂದರೆ, ನ್ಯೂನತೆ ಕಳೆಯುತ್ತದೆ. ರೋಗ ನಿರೋಧಕವಾಗೂ ಕೆಲಸ ಮಾಡುತ್ತದೆ. ಅಂಗಾರಕ ಅಥವಾ ಕುಜ ದೋಷ ಉಳ್ಳವರು ಪ್ರತಿ ಮಂಗಳವಾರ ನವಗ್ರಹಗಳಿಗೆ ಒಂಬತ್ತು ಪ್ರದಕ್ಷಿಣೆ ಹಾಕಿ ತೊಗರಿಬೇಳೆಯನ್ನು ದಾನ ಮಾಡಬೇಕು.
ಹೆಸರು ಕಾಳು:ಬುಧಗ್ರಹವನ್ನು ಪ್ರತಿನಿಧಿಸುತ್ತದೆ. ಹೆಸರು ಕಾಳಿನ ಬಳಕೆಯಿಂದ ಮಾತು ಸ್ಪಷ್ಟವಾಗುತ್ತದೆ. ನರನಾಡಿಗಳು ಬಲಗೊಳ್ಳುತ್ತವೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಚಿತ್ತಭ್ರಮೆ ದೂರಾಗುತ್ತದೆ, ಮೈತುರಿಸುವಿಕೆ ಮರೆಯಾಗುತ್ತದೆ. ಬುಧ ದೋಷವುಳ್ಳವರು ಪ್ರತಿ ಬುಧವಾರ ನವಗ್ರಹಗಳಿಗೆ ನಾಲ್ಕು ಪ್ರದಕ್ಷಿಣೆ ಬಂದು ಹೆಸರುಕಾಳನ್ನು ದಾನ ಮಾಡುವುದು.
ಕಡಲೆ:ಗುರು ಗ್ರಹವನ್ನು ಪ್ರತಿನಿಧಿಸುತ್ತದೆ. ಆಹಾರದಲ್ಲಿ ಕಡಲೆಕಾಳನ್ನು ಬಳಸುವುದರಿಂದ ಮಧುಮೇಹ, ಜಠರಾಗ್ನಿ ದೋಷ ನಿವಾರಣೆಯಾಗುತ್ತದೆ. ಮೇದೋಜೀರಕ ಗ್ರಂಥಿ ಜಾಗೃತಗೊಳ್ಳುತ್ತದೆ. ರಕ್ತನಾಳಗಳು ಶುದ್ಧವಾಗುತ್ತವೆ. ಗುರು ದೋಷ ಇರುವವರು ಪ್ರತಿ ಗುರುವಾರ ನವಗ್ರಹಗಳಿಗೆ ಐದು ಪ್ರದಕ್ಷಿಣೆ ಹಾಕಿ ಕಡಲೆಕಾಳನ್ನು ದಾನವಾಗಿ ಕೊಡಬೇಕು.
ಅವರೆ:ಶುಕ್ರಗ್ರಹವನ್ನು ಪ್ರತಿನಿಧಿಸುತ್ತದೆ. ಅವರೆಕಾಳಿನ ಬಳಕೆಯಿಂದ ಗುಪ್ತವ್ಯಾದಿಗಳು ದೂರಾಗುತ್ತವೆ. ಮೂತ್ರವ್ಯಾದಿ ನಿವಾರಣೆಯಾಗುತ್ತವೆ. ಮೇಧಾಶಕ್ತಿ ಹೆಚ್ಚುತ್ತದೆ. ಥೈರಾಯ್್ಡಂದ ಬಳಲುತ್ತಿರುವವರಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಶುಕ್ರದೋಷ ಉಳ್ಳವರು ಪ್ರತಿ ಶುಕ್ರವಾರ ನವಗ್ರಹಗಳಿಗೆ ಆರು ಪ್ರದಕ್ಷಿಣೆ ಬಂದು ಅವರೆಕಾಳನ್ನು ದಾನ ಮಾಡುವುದು.
ಕಪ್ಪು ಎಳ್ಳು:ಕಪ್ಪು ಎಳ್ಳು ಶನಿಗ್ರಹದ ಸಂಕೇತ. ಮಂದ ಸ್ವಭಾವ ಉಳ್ಳದ್ದು. ಸಂಧಿವಾತ, ಪಾರ್ಶ್ವವಾಯು, ಕರುಳವ್ಯಾದಿಯಿಂದ ಬಳಲುತ್ತಿರುವವರಿಗೆ ಕರಿ ಎಳ್ಳು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಒಣಕೆಮ್ಮು ಸಹ ನಿವಾರಣೆಯಾಗುತ್ತದೆ. ಶನಿ ಸಂಬಂಧಿತ ದೋಷದಿಂದ ಬಳಲುತ್ತಿರುವವರು ಪ್ರತಿ ಶನಿವಾರ ನವಗ್ರಹಗಳಿಗೆ ಏಳು ಬಾರಿ ಪ್ರದಕ್ಷಿಣೆ ಬಂದು ನಂತರ ಕರಿ ಎಳ್ಳನ್ನು ದಾನ ಮಾಡುವುದು ಒಳ್ಳೆಯದು.
ಉದ್ದು:ರಾಹು ಗ್ರಹದ ಸಂಕೇತ. ಆಹಾರದಲ್ಲಿ ಉದ್ದನ್ನು ಬಳಸುವುದರಿಂದ ಭಯ, ಉದ್ವಿಗ್ನತೆ, ಕ್ರೂರ ಜಂತುಗಳ ಬಾಧೆ, ಸರ್ಪಸುತ್ತು, ಚರ್ಮ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ. ರಾಹು ದೋಷ ಉಳ್ಳವರು ಪ್ರತಿ ಶನಿವಾರ ನವಗ್ರಹಗಳಿಗೆ ಒಂಬತ್ತು ಪ್ರದಕ್ಷಿಣೆ ಬಂದು ಉದ್ದನ್ನು ದಾನ ಮಾಡಬೇಕು.
ಹುರುಳಿ:ಕೇತು ಗ್ರಹದ ಸಂಕೇತ. ಆಹಾರದಲ್ಲಿ ಹುರುಳಿಯನ್ನು ಬಳಸುವುದರಿಂದ ಕ್ಯಾನ್ಸರ್​ನಂತಹ ಮಾರಣಾಂತಿಕ ರೋಗಗಳಿಗೆ ತೀವ್ರ ಪ್ರತಿರೋಧ ಒಡ್ಡಬಹುದು. ಗ್ರಂಥಿ ದೋಷ, ಜೀವಾಣುಗಳಿಂದ ಬರುವ ವ್ಯಾದಿಯನ್ನು ತಡೆಗಟ್ಟಬಹುದು. ಕೇತು ದೋಷವುಳ್ಳವರು ಪ್ರತಿ ಮಂಗಳವಾರ ನವಗ್ರಹಗಳಿಗೆ ಒಂಬತ್ತು ಪ್ರದಕ್ಷಿಣೆ ಬಂದು ಹುರುಳಿಕಾಳನ್ನು ದಾನವಾಗಿ ಕೊಡಬೇಕು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven + nineteen =
Remember me
