ಮೈಸೂರು:‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಘೊಷವಾಕ್ಯದೊಂದಿಗೆ ‘ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್’ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೃಷಿ ಮೇಳದ ಮೂರನೇ ಹಾಗೂ ಅಂತಿಮ ದಿನವೂ ಕೃಷಿ ಕ್ಷೇತ್ರದಲ್ಲಿ ತೊಡಗಿದವರ ಆತ್ಮವಿಶ್ವಾಸ ಹೆಚ್ಚಿಸುವ, ತೊಡಗಬಯಸುವವರನ್ನು ಉತ್ತೇಜಿಸುವಲ್ಲಿ ಸಫಲವಾಯಿತು.
ಭಾನುವಾರ ಬೆಳಗ್ಗಿಂದಲೇ ತಂಡೋಪತಂಡವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ ಜತೆಗೆ ದೂರದ ಜಿಲ್ಲೆಗಳಿಂದಲೂ ಆಗಮಿಸಿದ ರೈತರು, ಕೃಷಿ ಆಸಕ್ತರು ಸ್ಥಾಪನೆಯಾಗಿದ್ದ 150ಕ್ಕೂ ಹೆಚ್ಚು ಮಳಿಗೆಗಳಿಗೆ ಸುಮಾರು 33 ಡಿಗ್ರಿ ತಾಪಮಾನವನ್ನೂ ಲೆಕ್ಕಿಸದೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮಾಹಿತಿ, ಸೌಲಭ್ಯಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಆಸಕ್ತಿ ತೋರಿದರು. ಮೈಸೂರು, ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಕರು ಭೇಟಿ ನೀಡಿ ಕೃಷಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ಊರಿನತ್ತ ಮರಳುವ, ಸುಸ್ಥಿರ ಬದುಕು ಕಾಣುವತ್ತ ದೃಷ್ಟಿ ನೆಟ್ಟರು. ಮೂರನೇ ದಿನವೂ ಸಂಭ್ರಮ, ಉತ್ಸಾಹದಿಂದ ಗ್ರಾಮೀಣ ಸ್ಪರ್ಧೆಗಳ ಸರಣಿಯಲ್ಲಿ ರೈತ ಸಮುದಾಯ ಭಾಗವಹಿಸಿತು.
ಒಂದೂವರೆ ವರ್ಷಕ್ಕೇ ಫಲ ನೀಡುವ ನಿನ್ನಿಥಾಯಿ ಹಳಸಿನ ತಳಿಯ ವೀಕ್ಷಣೆ, ಮಾಹಿತಿ ಪಡೆಯುವಿಕೆ ಹಾಗೂ ಮಾರಾಟ ಭರ್ಜರಿಯಾಗಿ ನಡೆಯಿತು. ಆಹಾರ ಮಳಿಗೆಗೆ ಭೇಟಿ ನೀಡಿದ ಆಹಾರ ಪ್ರಿಯರು ಉತ್ತರ ಕರ್ನಾಟಕ ರೊಟ್ಟಿ, ಮದ್ದೂರು ವಡೆ, ಮನೆಯಲ್ಲಿ ತಯಾರಿಸಿದ ಖಾರದ ಪದಾರ್ಥಗಳನ್ನು ಸವಿದು, ಮನೆಗೆ ಕೊಂಡೊಯ್ದರು. ಬೆಳಗ್ಗಿನಿಂದ ನಡೆದ ಎರಡು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಕೃಷಿ ತಜ್ಞರು, ಮಾದರಿ ಕೃಷಿಕರು, ಕೃಷಿ ಉತ್ಪಾದನೆ, ಮಾರುಕಟ್ಟೆ, ಪ್ಯಾಕೇಜಿಂಗ್, ಸಂಸ್ಕರಣೆ ಸೇರಿ ಅನೇಕ ವಿಚಾರ ಹಾಗೂ ನೂತನ ಉಪಾಯಗಳನ್ನೂ ಸೂಚಿಸಿದರು. ಯಶಸ್ವಿ ಕೃಷಿಕರು ಸೇರಿ ಭಾಗವಹಿಸಿದ ಬಹುತೇಕರು ಕೃಷಿಕರ ಸ್ವಾವಲಂಬಿ, ಗೌರವಯುತ, ಆರ್ಥಿಕವಾಗಿ ಸದೃಢ ಬದುಕು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಕೃಷಿ ಯಂತ್ರೋಪಕರಣಗಳ ಕುರಿತು ಮಳಿಗೆಗಳಲ್ಲೂ ಭಾಗವಹಿಸಿದ ರೈತರು, ಕೈಗೆಟುಕುವ ದರದಲ್ಲಿ ಸಿಗುವ, ಮನೆಯ ಪ್ರಮಾಣಕ್ಕೆ ಸಾಕಾಗುವ ಸಣ್ಣ ಟ್ರ್ಯಾಕ್ಟರ್​ಗಳತ್ತ ಹೆಚ್ಚೆಚ್ಚು ಗಮನ ಹರಿಸಿದರು. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸ್ಥಾಪಿತವಾಗಿದ್ದ ನವಧಾನ್ಯ ಶಿವಲಿಂಗಗಳು ಆಸ್ತಿಕರನ್ನು ಸೆಳೆದವು. ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲೆ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ರೈತ ಸಮುದಾಯದಲ್ಲಿ ಸುಸ್ಥಿರತೆಯ, ಸ್ವಾವಲಂಬನೆಯ ಸಾಧ್ಯತೆಯನ್ನು ಮನದಟ್ಟು ಮಾಡುವ ಮೂಲಕ ನಾಡಿನ ಅನ್ನದಾತನಲ್ಲಿ ಮೂಡಿಸಲು ಕೃಷಿಮೇಳ ಯಶಸ್ವಿಯಾಯಿತು.
ಮೇಳಕ್ಕೆ ಮೆಚ್ಚುಗೆ
ಕೃಷಿ ಮೇಳ ಆಯೋಜನೆಗೆ ಮೆಚ್ಚುಗೆ ಸೂಚಿಸಿದ ಬಾಲಚಂದ್ರ ಜಾರಕಿಹೊಳಿ, ಇಂತಹ ಮೇಳ ಆಯೋಜಿಸಿದ್ದಕ್ಕಾಗಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಧನ್ಯವಾದ ಹೇಳುತ್ತೇನೆ. ರೈತರಿಗೆ ಅನುಕೂಲವಾಗುವ ಇಂತಹ ಕಾರ್ಯಕ್ರಮ ರೂಪಿಸಿದ ಅವರಿಗೆ ದೇವರು ಹೆಚ್ಚಿನ ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 17 =
Remember me
