ಕೃಷಿ ಮೇಳದ ಹಲವುಮಳಿಗೆಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಖುದ್ದಾಗಿ ಭೇಟಿ ನೀಡಿ ಕೃಷಿ ಯಂತ್ರೋಪಕರಣಗಳು, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ನಂತರ ಭಾಷಣದಲ್ಲಿ ಮೇಳದ ಉದ್ದೇಶವನ್ನು ಕೊಂಡಾಡಿದ ಅವರು, ವಿಆರ್​ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಕಾರ್ಯ ಶ್ಲಾಘನೀಯ ಎಂದರು.
ವಿಜಯವಾಣಿ ಮೂಲಕ ಹೊಸ ಓದುಗರನ್ನು ಸೃಷ್ಟಿಸಿದ ಅವರು, ಈವರೆಗೂ ಪತ್ರಿಕೋದ್ಯಮ ತಲುಪದ ವಲಯಗಳಿಗೆ ಪ್ರಾಶಸ್ಱ ನೀಡಿದರು. ಯುವ ಜನತೆ ಹಾಗೂ ಸ್ತ್ರೀಯರಿಗಾಗಿ ಪತ್ರಿಕೆಗಳೇ ಇರಲಿಲ್ಲ. ಅವರಿಗೆ ವಿಜಯವಾಣಿ ಧ್ವನಿ ನೀಡಿದೆ. ಸಂಕೇಶ್ವರ ಅವರಿಗೆ ಈಗ ದಿಗ್ವಿಜಯ ಸುದ್ದಿವಾಹಿನಿ ದೊಡ್ಡ ವೇದಿಕೆಯಾಗಿದೆ. ಅಲ್ಲಿ ಕೃಷಿ ಕ್ಷೇತ್ರಕ್ಕೆ ಬೇಕಾದ ವಿಷಯಗಳನ್ನು ತಲುಪಿಸುತ್ತಿದ್ದಾರೆ. ಅವರ ಈ ಅನುಭವ ಕೃಷಿ ಮೇಳದಲ್ಲಿ ಪ್ರತಿಬಿಂಬಿತವಾಗುತ್ತಿದೆ. ಅವರ ಮಾಧ್ಯಮ ಸಂಸ್ಥೆಗಳಿಗೆ ತಲುಪುವ ರೈತರ ಸಮಸ್ಯೆಗಳು ಪತ್ರಿಕೆ ಹಾಗೂ ಟಿವಿ ಚಾನಲ್ ಮೂಲಕ ಸರ್ಕಾರ, ವಿಜ್ಞಾನಿಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ತಲುಪುತ್ತಿದೆ. ಅಲ್ಲದೆ ಅದಕ್ಕೆ ಪರಿಹಾರವೂ ದೊರಕುತ್ತಿದೆ ಎಂದರು.
ಮೂರು ದಿನಗಳ ಕೃಷಿ ಮೇಳಕ್ಕೆ ಒಂದೂವರೆ ಲಕ್ಷ ಜನರು ಭೇಟಿ ನೀಡಿ ಕೃಷಿ ತಂತ್ರಜ್ಞಾನ, ಹೊಸ ಉಪಕರಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಮೇಳದ ಯಶಸ್ಸು ವಿಜಯ ಸಂಕೇಶ್ವರ ಅವರ ಹಿರಿಮೆಗೆ ಸೇರಿದ ಮತ್ತೊಂದು ಗರಿಯಾಗಿದೆ. ನಾನು ಹತ್ತಿರದಿಂದ ಅವರನ್ನು ಬಲ್ಲೆ. ಒಂದು ಬಾರಿ ಛಲ ತೊಟ್ಟರೆ ಅದನ್ನು ಯಶಸ್ವಿಗೊಳಿಸುವ ನಾಯಕತ್ವ ಗುಣ ಅವರಲ್ಲಿದೆ. ಕೃಷಿಮೇಳದ ಯಶಸ್ಸಿಗಾಗಿ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + four =
Remember me
