ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ರಾಜ್ಯದ ಜನರು ಹೇಳ್ತಾರೆ ಸಿದ್ದರಾಮಯ್ಯ ಸುಳ್ಳ, ಡಿಕೆಶಿ ಕಳ್ಳ ಅಂತ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಇದನ್ನೂ ಓದಿ:ರಾಹುಲ್ ಲೋಕಸಭಾ ಸದಸ್ಯತ್ವ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾ; ವಕೀಲರಿಗೆ ₹1 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ ಮಾಜಿ ಸಚಿವರು, “ಕಾಂಗ್ರೆಸ್​ ಶಾಸಕರು ಕಷ್ಟಪಟ್ಟು ಗೆದ್ದು ಬಂದಿದ್ದಾರೆ. ಶಾಸಕರು ಕ್ಷೇತ್ರಕ್ಕೆ ಹೋಗಿ ಮಣ್ಣು ತಿನ್ನಬೇಕಾ? ಜನರಿಗೆ ಏನು ಉತ್ತರ ಕೊಡಬೇಕು. ರಾಜ್ಯದಲ್ಲಿ ಕುಡಿಯಲು ನೀರಿಲ್ಲ, ಬೆಳೆ ಹಾಳಾಗಿದೆ. ಬರಗಾಲವಿದೆ. ಡಿಕೆ ಶಿವಕುಮಾರ್​ ಜೈಲಿಗೆ ಹೋಗೋದು ಖಾತ್ರಿ. ಸಿದ್ದರಾಮಯ್ಯನವರೇ ಜನರಿಗೆ ಮೋಸ ಮಾಡಿ, ಟೋಪಿ ಹಾಕಿ ಸಿಎಂ ಆಗಿದ್ದೀರಿ. ದುಡ್ಡು ಎಲ್ಲಿಂದ ತರ್ತಿರೋ ಗೊತ್ತಿಲ್ಲ” ಎಂದರು.
“2013-18ರ ಸಿದ್ದರಾಮಯ್ಯನವರಿಗೂ ಇಂದಿನ ಸಿದ್ದುಗೆ ಏನು ವ್ಯತ್ಯಾಸ? ಆಗ ಗ್ಯಾರಂಟಿ ಇರಲಿಲ್ಲ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರಲಿಲ್ಲ. ಬಿಜೆಪಿ ಸರ್ಕಾರ ಬಿಟ್ಟು ಹೋಗುವಾಗ ಸಾಕಷ್ಟು ಹಣ ಬಿಟ್ಟು ಹೋಗಿತ್ತು. ಆ ದುಡ್ಡಿನಲ್ಲಿ ರಾಜ್ಯ ನಡೆಸಿದ್ರು, ಈಗಲೂ ಅದೇ ದುಡ್ಡು ಉಳಿಯುತ್ತೆ. ಅದರಲ್ಲಿ ಗ್ಯಾರಂಟಿ ಕೊಡಬಹುದು ಅಂದುಕೊಂಡಿದ್ದರು” ಎಂದು ಹೇಳಿದರು.
ಇದನ್ನೂ ಓದಿ:ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾಗೆ ಆಘಾತ; ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹಾರ್ದಿಕ ಪಾಂಡ್ಯ ಔಟ್
“ಇನ್ನೂರು ಯುನಿಟ್ ಫ್ರೀ, ನನಗೂ ಫ್ರೀ, ನಿನಗೂ ಫ್ರೀ, ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಅಂತ ಸುಳ್ಳು ಹೇಳಿದರು. ಸುಳ್ಳು ಹೇಳಿದ ಸಿದ್ದರಾಮಯ್ಯ ಸರ್ಕಾರ ಬಹಳ ದಿನ ಉಳಿಯಲ್ಲ. ಅದಕ್ಕೆ ಜನ ಹೇಳ್ತಾರೆ ಸಿದ್ದರಾಮಯ್ಯ ಸುಳ್ಳ, ಡಿಕೆಶಿ ಕಳ್ಳ” ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಈಶ್ವರಪ್ಪ ಲೇವಡಿ ಮಾಡಿದರು.
ವಸಿಷ್ಠ ಸಿಂಹ ಜನ್ಮದಿನದಂದೇ ಘೋಷಣೆಯಾಯ್ತು ಹೊಸ ಸಿನಿಮಾ; ಟೈಟಲ್​ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
