ಬೆಳಗಾವಿ:ಹಿಂದುತ್ವದ ಪರವಾಗಿ ಎಲ್ಲ ಬಿಜೆಪಿ ನಾಯಕರ ನಿಲುವು ಒಂದೇ ಇದೆ. ಆದರೆ ಗಟ್ಟಿ ಧ್ವನಿ ಎತ್ತಲು ರಾಜ್ಯ ಬಿಜೆಪಿಯಲ್ಲಿ ಎಲ್ಲರೂ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಈಶ್ವರಪ್ಪ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಅನ್ಯಕೋಮಿನ ಪ್ರೇಮಿಗಳೆಂದು ಭಾವಿಸಿ ಅಕ್ಕ-ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯ ನಿಲುವು ಎಲ್ಲರದ್ದೂ ಒಂದೇ ಆಗಿದೆ. ಬೆಳಗಾವಿ ಘಟನೆ ನೋಡಿದಾಗ ಇಲ್ಲಿನ ವ್ಯವಸ್ಥೆ ಸತ್ತು ಹೋಗಿದೆಯಾ. ಪ್ರಕರಣ ಬೆಳಕಿಗೆ ಬಂದಿದ್ದರೂ ಪೊಲೀಸರು ಹಲ್ಲೆಗೊಳಗಾದ ಯುವಕ, ಯುವತಿಗೆ ದೈರ್ಯ ಹೇಳಿದ್ದಾರಾ ಎಂದು ಪ್ರಶ್ನಿಸಿದ ಅವರು, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ಮುಸ್ಲಿಮರ ಮತಕ್ಕಾಗಿ ಸಿಎಂ ಹಾಗೂ ಗೃಹ ಸಚಿವರು ಕಾನೂನು ಸುವ್ಯವಸ್ಥೆ ಹಾಳಾಗಲಿ ಎಂದು ಸುಮ್ಮನೆ ಕುಳಿತ್ತಿದ್ದಾರೆ. ಹಿಂದೂ ಯುವಕರಿಗೆ ತೊಂದರೆಯಾದರೂ ಪರವಾಗಿಲ್ಲ ಎನ್ನುವ ಭಾವನೆಯಲ್ಲಿದೆ ರಾಜ್ಯ ಸರಕಾರ. ಇವರದ್ದು ಕೆಡಗಾಲ ಬಂದಿದೆ. ಜನರೇ ತಕ್ಕ ಪಾಠ ಕಲಿಸುತ್ತಾರೆ” ಎಂದರು.
ಇದನ್ನೂ ಓದಿ:ಭಾರತದಂತಹ ನಿಷ್ಠಾವಂತ ಮಿತ್ರ ರಾಷ್ಟ್ರವನ್ನು ಹೊಂದಿರುವುದು ನಮ್ಮ ಪುಣ್ಯ: ಬಾಂಗ್ಲಾ ಪ್ರಧಾನಿ
ವಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ 46 ಜನ ಬಿಜೆಪಿ ಮುಖಂಡರ ಮೇಲಿನ ಪ್ರಕರಣ ದಾಖಲಾದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, “ಬಿಜೆಪಿಯವರ ಮೇಲೆ ಕಾಂಗ್ರೆಸ್ ಬೇಕಾಷ್ಟು ಪ್ರಕರಣ ದಾಖಲಿಸಲಿ. ಜಯಪ್ರಕಾಶ ನಾಯರಾಣ ನೇತೃತ್ವದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟ ಮಾಡಿದ್ದೆವು. ಅಂದಿನ ಪ್ರಕರಣ ತೆಗೆದು ನಮ್ಮ ಮೇಲೆ ಮತ್ತೊಮ್ಮೆ ಪ್ರಕರಣ ದಾಖಲಿಸಲಿ. ನಮ್ಮದ್ದು ನ್ಯಾಯದ ಪರವಾಗಿ ಹೋರಾಟಯಿದೆ. ಶ್ರೀಕಾಂತ ಪೂಜಾರಿ ಮೇಲೆ 16 ಪ್ರಕರಣ ಇದೆ ಎನ್ನುತ್ತಾರೆ. ಆದ್ರೆ ಅವರ ಮೇಲೆ ಇದ್ದಿದ್ದು, ಒಂದೇ. ಸದ್ಯ ನ್ಯಾಯಾಲಯ ಜಾಮೀನು ನೀಡಿದೆ” ಎಂದರು.
ನಟಿ ಆಶಿಕಾ ರಂಗನಾಥ್​ಗೆ ಭಾರೀ ಮೆಚ್ಚುಗೆ; ತೆಲುಗು ನಿರ್ದೇಶಕ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
