ಬೆಂಗಳೂರು:ಮೊನ್ನೆ ರಾತ್ರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾಗ ಬರೋಬ್ಬರಿ 6 ಕೋಟಿ ರೂ. ನಗದು ಪ್ರಶಾಂತ್ ಮಾಡಾಳ್ ಮನೆಯಲ್ಲಿ ಪತ್ತೆಯಾಗಿತ್ತು. ಇದಾದ ಮೇಲೆ ರಾಜ್ಯ ರಾಜಕಾರಣದಲ್ಲಿ ತಲ್ಲಣವೇ ಸೃಷ್ಟಿಯಾಗಿದ್ದು ಹೇಳಿಕೆಗಳ ಮಹಾಪೂರವೇ ಹರಿಯುತ್ತಿದೆ.
ಇದಾದ ಮೇಲೆ ಪ್ರಶಾಂತ್ ಮಾಡಾಳ್ ತಂದೆ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿ ರಾಜೀನಾಮೆ ನೀಡಿದ್ದು ಅವರಿಗಾಗಿ ಇನ್ನೂ ಶೋಧ ನಡೆಯುತ್ತಿದೆ. ಈ ನಡುವೆ ಕೆಎಸ್ ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಹಗರಣಕ್ಕೆ ಸಂಬಂಧಿಸಿದ ಮತ್ತೋರ್ವ ಬಿಜೆಪಿ ಶಾಸಕನ ಹೆಸರನ್ನು ಹೇಳಿದ್ದು ಹೊಸ ಬಾಂಬ್ ಸಿಡಿಸಿದಂತಾಗಿದೆ.
ಯಾರು ಆ ಬಿಜೆಪಿ ಶಾಸಕ?ಈ ಹಿಂದೆ ಕಾಂಗ್ರೆಸ್ ಸರ್ಕಾರ ಈ ಬಿಜೆಪಿ ಶಾಸಕ ಇದ್ದಾಗ ಕೆಎಸ್ ಡಿಎಲ್ ಅಧ್ಯಕ್ಷರಾಗಿದ್ದರು. ಅದು ಬೇರ್ಯಾರೂ ಅಲ್ಲ.  ಶಾಸಕ ಭೈರತಿ ಬಸವರಾಜ್! ಭೈರತಿ ಬಸವರಾಜ್ ಅಧ್ಯಕ್ಷರಾಗಿದ್ದಾಗ ಸಿಎಸ್ಆರ್ ಫಂಡ್ ಎಂದು 3 ಕೋಟಿ ಬಳಸಿದ್ದರು ಎಂದು ಶಿವ ಶಂಕರ್ ಹೇಳಿದ್ದಾರೆ.  ಈ ಬಗ್ಗೆ ಮಾತನಾಡಿರುವ ಕೆಎಸ್ ಡಿಎಲ್ ನೌಕರರ ಸಂಘದ ಅಧ್ಯಕ್ಷ ‘ಶಾಲೆ ಕಟ್ತೀನಿ ಅಂತ ಶಾಲೊಳಗೆ ಕೋಟಿ ಹಣ ಹಾಕ್ಕೊಂಡ್ ಹೋದ್ರು. ಆ ಹಣ ಶಾಲೆಗೆ ಹೋಯ್ತಾ ಅಥವಾ ಬೇರ್ಯಾರ ಜೇಬಿಗೆ ಹೋಯ್ತಾ?’ ಎಂದು ಶಿವಶಂಕರ್ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮೀಪ ಬಂದಿರುವಾಗಲೇ ಈ ವಿಚಾರ ಬೆಳಕಿಗೆ ಬಂದಿದ್ದು ಅನೇಕ ಪ್ರಶ್ನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
