ಶಿವಮೊಗ್ಗ:ಕೇಂದ್ರ ಸರ್ಕಾರ ದೇಶದ್ರೋಹಿ ಸಂಘಟನೆ ಪಿಎಫ್​ಐಯನ್ನು ಬ್ಯಾನ್ ಮಾಡಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ದೇಶಭಕ್ತ ಮುಸ್ಲಿಂ ನಾಯಕರು ಬೆಂಬಲ ಕೊಡಬೇಕು. ಪಿಎಫ್​ಐ ಕಾರ್ಯಕರ್ತರಿಗೆ ಹಿರಿಯರು ಬುದ್ಧಿ ಹೇಳಬೇಕು ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದರು.
ಕಿಡಿಗೇಡಿಗಳು ‘ಚಡ್ಡಿಗಳೇ ಎಚ್ಚರ, ಪಿಎಫ್ಐ ನಾವು ಮರಳಿ ಬರುತ್ತೇವೆ’ ಎಂದು ರಸ್ತೆ ಮೇಲೆ ಬರೆದಿದ್ದರು. ಇದಕ್ಕೆ ಗರಂ ಆಗಿರುವ ಮಾಜಿ ಸಚಿವ ಈಶ್ವರಪ್ಪ, ರಸ್ತೆ ಮೇಲೆ, ಗೋಡೆ ಮೇಲೆ ಹೇಡಿಗಳಿಂದ ಮಾತ್ರ ಬರೆಯಲು ಸಾಧ್ಯ. ಆರ್​ಎಸ್​​ಎಸ್​ ಅನ್ನು ಯಾರಿಂದಲೂ, ಏನೂ ಮಾಡಲು ಸಾಧ್ಯವಿಲ್ಲ. ಅವರ ಅಪ್ಪನಿಂದಲೂ ಬುದ್ಧಿ ಕಲಿಸಲು ಸಾಧ್ಯವಿಲ್ಲ ಎಂದರು.
ಪಿಎಫ್​ಐನಂತಹ ದೇಶದ್ರೋಹಿ ಸಂಘಟನೆಗಳು ಮತ್ತೆ ಹುಟ್ಟಿಕೊಂಡರೆ ಅವರ ಸೊಂಟ ಮುರಿಯುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ. ಮುಂದೆ ಈ ರೀತಿಯಾಗಿ ಮಾಡಿದರೆ ಸರ್ಕಾರ ಸರಿಯಾಗಿ ಬುದ್ಧಿ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 20 =
Remember me
