ಬೆಂಗಳೂರು:ಇಂದು(ಅ.17) ದಿ. ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ‘ಕ್ಷತ್ರಿಯ’ ಸಿನಿಮಾ ತಂಡ ಚಿರು ಅಭಿಮಾನಿಗಳಿಗೆ ನಂಬಲಾಗದ ಸರ್​ಪ್ರೈಸ್ ಕೊಟ್ಟಿದೆ.
ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಸಾವಿಗೂ ಮೊದಲೇ ಚಿರು ಅನುಭವಿಸಿದ್ದರು..! ಸಂಭ್ರಮದಲ್ಲಿ ಕೇಕ್ ತಿನ್ನಿಸಿದ್ದಾರೆ ಚಿರು… ಮಗುವನ್ನ ಮುದ್ದಾಡಿರುವ ಝಲಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಯುವ ಸಾಮ್ರಾಟ್. ರಿಯಲ್ ಲೈಫ್​ನಲ್ಲಿ ಚಿರು ಅನುಭವಿಸಲಾಗದ್ದು ರೀಲ್ ನಲ್ಲಿ ಆಗಿದೆ. ಈ ದೃಶ್ಯಗಳು ಮನಕಲಕುವಂತಿವೆ.
ನಟ ಚಿರಂಜೀವಿ ಸರ್ಜಾ‌ಗೆ ಇಂದು 36ನೇ ಹುಟ್ಟುಹಬ್ಬ. ಬರ್ತ್​ಡೇ ಪ್ರಯುಕ್ತ ಚಿರು ನಟನೆಯ ‘ಕ್ಷತ್ರಿಯ’ ಸಿನಿಮಾದ ಟೀಸರ್​​ ರಿಲೀಸ್ ಮಾಡಿರುವ ಚಿತ್ರತಂಡ, ‘ನಮ್ಮೊಂದಿಗೆ, ನಿಮ್ಮೊಂದಿಗೆ, ಎಂದೆಂದಿಗೂ ಇರೋ ಚಿರಂಜೀವಿ ಸರ್ಜಾ ಚಿರಂಜೀವಿನೇ’ ಎಂದು ಹೇಳಿದೆ.
ಟೀಸರ್​ ರಿಲೀಸ್​ ಮಾಡುವ ಮೂಲಕ ಚಿರುಗೆ ವಿಶ್​ ಮಾಡಿರೋ ಚಿತ್ರತಂಡ, ಕ್ಷತ್ರಿಯ ಟೀಸರ್​ನಲ್ಲಿ ಚಿರು ಅಭಿಮಾನಿಗಳಿಗೆ ಸರ್​ಪ್ರೈಸ್ ಕೊಟ್ಟಿದೆ. ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ರೀಲ್​ ಲೈಫ್​ನಲ್ಲಿ ಚಿರು ಅನುಭವಿಸಿದ್ದರು. ಆ ದೃಶ್ಯವನ್ನು ಬಿಡುಗಡೆ ಮಾಡಿದೆ.
ಚಿರು ಇಲ್ಲದ ಮೊದಲ ವರ್ಷದ ಜನ್ಮದಿನವನ್ನು ಕುಟುಂಬಸ್ಥರು ಆಚರಿಸಿದ್ದಾರೆ. ಚಿರು ಇದ್ದಿದ್ದರೆ ಇಂದಿಗೆ 35 ವರ್ಷ ಪೂರೈಸಿ 36ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಇಂದೇ ಜೂ.ಚಿರು ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ ಇದೆ.
VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ

PHOTO GALLERY| ಚಿರು ಫೋಟೋ ಇಟ್ಟುಕೊಂಡು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
