ಶಿರಸಿ:ಉತ್ಸಾಹಿ ರೈತರಿಗೆ ಭತ್ತದ ಬೀಜದಿಂದ ತೆನೆ ಕೊಯ್ದು ಅದರ ಸಂಗ್ರಹಣೆವರೆಗಿನ ಪ್ರತಿ ಹಂತದ ತಾಂತ್ರಿಕತೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲು ಇಲ್ಲಿನ ಕೃಷಿ ಇಲಾಖೆಯು ‘ಕ್ಷೇತ್ರ ಪಾಠಶಾಲೆ’ ಅನಾವರಣಗೊಳಿಸಿದೆ. ಈ ವರ್ಷ 25 ಉತ್ಸಾಹಿಗಳು ಮೊದಲ ಹಂತದ ಪಾಠಕ್ಕಾಗಿ ಗದ್ದೆಗಿಳಿದಿದ್ದಾರೆ.
ರೈತರ ಜಮೀನುಗಳನ್ನೇ ಕಲಿಕಾ ಸ್ಥಳವಾಗಿಸಿಕೊಂಡು, ರೈತರ ಕ್ಷೇತ್ರ ಪಾಠಶಾಲೆ ಕಾರ್ಯನಿರ್ವಹಿಸುತ್ತಿದೆ. ಇದೊಂದು ವಿಶಿಷ್ಟವಾದ ಗುಂಪು ಕಲಿಕಾ ವಿಧಾನವಾಗಿದೆ. ರೈತರು ತಾಂತ್ರಿಕತೆಯ ಬಗ್ಗೆ ಕೇಳಿ, ಕಂಡು, ಆಚರಿಸಿ, ಪೂರ್ಣಜ್ಞಾನ ಪಡೆದು ಆತ್ಮವಿಶ್ವಾಸ ಗಳಿಸುವಲ್ಲಿ ನೆರವಾಗುತ್ತದೆ. ಪ್ರಸಕ್ತ ವರ್ಷ ಮಹಿಳೆಯರು, ಪುರುಷರು ಸೇರಿ ಒಟ್ಟು 25ರಷ್ಟು ಉತ್ಸಾಹಿಗಳು ಕ್ಷೇತ್ರ ಪಾಠಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ತಾಲೂಕಿನ ಜಾನ್ಮನೆಯಲ್ಲಿ ಕ್ಷೇತ್ರ ಪಾಠಶಾಲೆಯ ಪ್ರಾತ್ಯಕ್ಷಿಕ ನಡೆಸಲಾಗುತ್ತಿದೆ.
ಏನೇನು ಕಲಿಕೆ?:ಭತ್ತದ ಕೃಷಿಗೆ ಸಂಬಂಧಿಸಿ ಹೊಲ ಹದಗೊಳಿಸುವುದು; ಬೀಜದ ತಳಿ ಆಯ್ಕೆ; ನಾಟಿ, ಸಸಿಯ ನಡುವೆ ಅಂತರ; ನಾಟಿಯ ಆಳದ ಪರಿಜ್ಞಾನ; ಗೊಬ್ಬರ ಹಾಕುವ ವಿಧಾನ; ಕೀಟ, ರೋಗಗಳನ್ನು ಗುರುತಿಸುವುದು ಹಾಗೂ ನಿಯಂತ್ರಿಸುವುದ; ಹೊಡೆ ನಿರ್ವಹಣೆ; ನೀರಿನ ಬಳಕೆ; ಜೊಳ್ಳು ರೋಗ ಲಕ್ಷಣ ನಿಯಂತ್ರಣ; ಕಟಾವು ಹಾಗೂ ದಾಸ್ತಾನುಗಳ ಬಗ್ಗೆ ಹಂತ ಹಂತವಾಗಿ ಕೃಷಿ ಪಾಠಶಾಲೆಯಲ್ಲಿ ತಿಳಿಸಿಕೊಡಲಾಗುತ್ತದೆ.
ಮಾಡಿ ಕಲಿ ನೋಡಿ ತಿಳಿ:ಶುಕ್ರವಾರದಿಂದ ಈ ಕಲಿಕೆ ಆರಂಭವಾಗಿದ್ದು, ಮುಂದಿನ ಆರು ತಿಂಗಳ ಅವಧಿಯವರೆಗೆ ಇರುತ್ತದೆ. ಕೃಷಿ ಇಲಾಖೆಯ ಇಬ್ಬರು ತಜ್ಞರು ಉತ್ಸಾಹಿ ರೈತರಿಗೆ ಪಾಠ, ಪ್ರಾತ್ಯಕ್ಷಿಕೆ ಮಾಡುತ್ತಾರೆ. ಭತ್ತ ಬೆಳೆಯುವ ಅವಧಿ 130ರಿಂದ 140 ದಿನಗಳವರೆಗೆ ಆಗುತ್ತದೆ. ಈ ಒಂದು ಬೆಳೆ ಅವಧಿಯಲ್ಲಿ ಪ್ರತಿ ತಿಂಗಳಿಗೆ ಒಂದರಂತೆ ಒಟ್ಟಾರೆ 6 ಪಾಠಗಳನ್ನು ಮಾಡಲಾಗುತ್ತದೆ. ರೈತರ ಮನೆಯ ಜಗುಲಿ ಮೇಲೆ ಕೃಷಿಯ ತಿಳಿವಳಿಕೆ ನೀಡಿ ನಂತರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಮಾಡಿ ಕಲಿ ನೋಡಿ ತಿಳಿ ಎಂಬ ವಿಶೇಷ ಶಿಕ್ಷಣ ಪದ್ಧತಿಯಂತೆ ಈ ಪಾಠಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ರೈತರಿಗೆ ಕಲಿತ ವಿಷಯಗಳು ಪೂರ್ಣವಾಗಿ ಮನದಟ್ಟಾಗುತ್ತದೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಈ ಪಾಠಶಾಲೆಯ ಕಲಿಕೆಯೆಡೆ ಉತ್ಸಾಹಿಗಳು ಹೆಚ್ಚುತ್ತಿದ್ದಾರೆ.
ಭತ್ತದ ಕೃಷಿಯನ್ನು ಅರಿತು ಮಾಡಿದರೆ ಯಶಸ್ಸು ಸಾಧ್ಯ. ಇದನ್ನು ತಿಳಿಯಲು ಕೃಷಿ ಇಲಾಖೆಯ ಕ್ಷೇತ್ರ ಪಾಠಶಾಲೆ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಕಲಿತರೆ ಕೃಷಿ ಸುಲಭವಾಗುತ್ತದೆ. | ಯಮುನಾ,ಕ್ಷೇತ್ರ ಪಾಠಶಾಲೆ ಫಲಾನುಭವಿ
ದೀರ್ಘಕಾಲ ಗುಂಪಿನಲ್ಲಿ ಕಲಿಯುವ ವಿಧಾನ ಇದಾಗಿದ್ದು, ಕೃಷಿಯ ಸಮಗ್ರ ಅರಿವು ರೈತರಿಗಾಗುತ್ತದೆ. ಬೀಜದಿಂದ ಬೀಜದವರೆಗಿನ ತಾಂತ್ರಿಕತೆಯನ್ನು ರೈತರಿಗೆ ತಿಳಿಸಿಕೊಟ್ಟರೆ ಉತ್ತಮ ಕೃಷಿಕರಾಗಿ ಹೊರಹೊಮ್ಮಲು ಸಾಧ್ಯ. ಹೀಗಾಗಿ, ಪ್ರಾಯೋಗಿಕವಾಗಿಯೇ ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ. | ಮಧುಕರ ನಾಯ್ಕಕೃಷಿ ಇಲಾಖೆ ಅಧಿಕಾರಿ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four + nineteen =
Remember me
