ಬೆಂಗಳೂರು:ಔಷಧ ಬಿಲ್‌ಗಳಿಗೆ ಹಣ ಪಾವತಿಸಲು ಉಂಟಾಗಿರುವ ಅನುದಾನ ಕೊರತೆ ಕುರಿತು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(ಕೆಎಸ್‌ಎಂಎಸ್‌ಸಿಎಲ್),ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿದೆ.ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(ಎನ್‌ಎಚ್‌ಎಮ್) ಔಷಧ ಸೇರಿ ವೈದ್ಯಕೀಯ ಉಪಕರಣಗಳ ಸರಬರಾಜು ಮಾಡಿರುವ 230 ಕೋಟಿ ರೂ.ಬಿಲ್‌ಗಳು ಬಾಕಿ ಇದೆ. ಜತೆಗೆ, ನಮ್ಮ ಕ್ಲಿನಿಕ್‌ಗಳಿಗೆ ಸರಬರಾಜು ಮಾಡಿದ್ದ ಅಂದಾಜು 30-40 ಕೋಟಿ ರೂ.ಔಷಧ ಮತ್ತು ವೈದ್ಯಕೀಯ ಉಪಕರಣ ಬಿಲ್‌ಗಳು ಉಳಿದಿವೆ. ಅನುದಾನ ಕೊರತೆಯಿಂದ ಬಿಲ್‌ಗಳಿಗೆ ಹಣ ಪಾವತಿಸಲು ವಿಳಂಬವಾಗುತ್ತಿದೆ. ಹೀಗಾಗಿ, ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ನಿಗಮ ಮನವಿ ಮಾಡಿದೆ.
ಎನ್‌ಎಚ್‌ಎಂ ಅಡಿ ನಿಗಮದಿಂದ ಕೋಟ್ಯಂತರ ರೂ.ಮೌಲ್ಯದ ಔಷಧ ಮತ್ತು ವೈದ್ಯಕೀಯ ಉಪಕರಣ ಖರೀದಿಸಿದೆ. ಆದರೆ, ಆರೋಗ್ಯ ಇಲಾಖೆ ನಿಗಮಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುರ್ನಾಲ್ಕು ವರ್ಷಗಳಿಂದ ಔಷಧ ಪೂರೈಸಿದ್ದ ಬಿಲ್‌ಗಳಿಗೆ ಹಣ ಪಾವತಿಸಲು ವಿಳಂಬವಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:IPL 2024| ಗುಜರಾತ್​ನಲ್ಲೇ​ ಉಳಿದ ಹಾರ್ದಿಕ್​: ಇಲ್ಲಿದೆ ರಿಟೇನ್​, ರಿಲೀಸ್​ ಆಟಗಾರರ ಸಂಪೂರ್ಣ ಪಟ್ಟಿ…
ಎನ್‌ಎಚ್‌ಎಮ್ ವ್ಯವಸ್ಥಾಪಕ ನಿರ್ದೇಶಕ ಡಾ.ವೈ.ನವೀನ್ ಭಟ್ ಪ್ರತಿಕ್ರಿಯಿಸಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖರೀದಿಸಲಾಗಿರುವ ಔಷಧ ಮತ್ತು ಉಪಕರಣ ಬಿಲ್‌ಗಳನ್ನು ನಿಗಮ ನಮಗೆ ಕಳುಹಿಸಿದೆ. ಆದರೆ, ಒಂದೇ ಔಷಧ ಸರಬರಾಜು ಮಾಡಿರುವ ಸಂಬಂಧ ಎರಡೆರಡು ಬಿಲ್‌ಗಳು ಬಂದಿವೆ. ಹೀಗಾಗಿ, ಪ್ರತಿ ಬಿಲ್‌ಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಎಲ್ಲ ಸರಿ ಇರುವ ಬಿಲ್‌ಗಳಿಗೆ ಪೇಮೆಂಟ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಹಿಂದೆ ನಿಗದಿಪಡಿಸಿದ ಅನುದಾನಗಿಂತ ಹೆಚ್ಚುವರಿಯಾಗಿ ಔಷಧ ಖರೀದಿಸಲಾಗಿದೆ. ಆದ್ದರಿಂದ, ಔಷಧ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಲು ಸಮಸ್ಯೆಯಾಗಿದೆ ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
