ಬೆಂಗಳೂರು:ಸಾಮಾನ್ಯವಾಗಿ ಅಂಚೆ ಮತ್ತು ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೂ ಮುನ್ನ ಕಾಂಟಾಕ್ಟ್​ ಕ್ಲಾಸ್​ಗಳನ್ನು ​ (ಸಂಪರ್ಕ ತರಗತಿ) ನಡೆಸಲಾಗುತ್ತದೆ. ದೂರ ಶಿಕ್ಷಣ ನೀಡುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಈ ರೀತಿ ತರಗತಿಗಳನ್ನು ನಡೆಸುತ್ತವೆ.
ಆದರೆ, ಇದೇ ಮೊದಲ ಬಾರಿಗೆ ಇಂಥ ತರಗತಿಗಳನ್ನು ಆನ್​ಲೈನ್​ ಮೂಲಕ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್​ಒಯು) ನಿರ್ಧರಿಸಿದೆ. ಕೋವಿಡ್​-19 ಕಾಯಿಲೆ ಹರಡುವಿಕೆಯನ್ನು ತಡೆಗಟ್ಟಲು ಈ ಬಾರಿ ಸಂಪರ್ಕ ತರಗತಿಗಳನ್ನು ಆನ್​ಲೈನ್​ ಮೂಲಕ ನಡೆಸಲಾಗುತ್ತಿದೆ ಎಂದು ವಿವಿ ತಿಳಿಸಿದೆ.
ಇದನ್ನೂ ಓದಿ;ಕರೊನಾಗೆ ಲಸಿಕೆ ಸಜ್ಜಾದರೆ, ಮುಂದೊದಗುವ ಪರಿಸ್ಥಿತಿ ಭಾರಿ ಭೀಕರ
2019-20ನೇ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ ಪ್ರವೇಶ ಪಡೆದಿರುವ ಪ್ರಥಮ ವರ್ಷದ, 2018-19ರಲ್ಲಿ ಪ್ರವೇಶ ಪಡೆದಿರುವ ದ್ವಿತೀಯ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಆಈಗಾಗಲೇ ತರಗತಿಗಲು ಆರಂಭವಾಗಿದ್ದು, ಜೂನ್​ 5ರವರೆಗೆ ನಡೆಯಲಿವೆ.
ಆನ್​ಲೈನ್​ ತರಗತಿಗಳ ವೇಳಾಪಟ್ಟಿಯನ್ನು www.ksoumysuru.ac.in ವೆಬ್​ಸೈಟ್​ ಹಾಗೂ KSOU Students APP ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಆ್ಯಪ್​ ಹಾಗೂ ವೆಬ್​ಸೈಟ್​ನಲ್ಲಿ ದೊರೆಯುವ ಲಿಂಕ್​ ಮುಖಾಂತರ ಲೈವ್​ ತರಗತಿಗಳಿಗೆ ಹಾಜರಾಗಬಹುದು ಎಂದು ಕೆಎಸ್​ಒಯು ಪ್ರಾದೇಶಿಕ ನಿರ್ದೇಶಕ ಡಾ. ಆರ್​. ಲೋಕೇಶ್​ ತಿಳಿಸಿದ್ದಾರೆ.
ಚೆನ್ನೈನಲ್ಲಿ ತ್ಯಾಜ್ಯ ನೀರಿನಿಂದ ಹರಡುತ್ತಿದೆಯಾ ಕರೊನಾ? ಸಂಸ್ಕರಿಸಿದ ನೀರಿನಲ್ಲಿ ಕಂಡುಬಂತು ವೈರಸ್​, ದೇಶದಲ್ಲೇ ಮೊದಲ ವಿದ್ಯಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
