ಬಳ್ಳಾರಿ:ತಾಲೂಕಿನ ಹಲಕುಂದಿ ಗ್ರಾಮದ ಸಮೀಪ ಮೂವರು ವಿದ್ಯಾರ್ಥಿಗಳ ಮೇಲೆ ಕೆಎಸ್​ಆರ್​ಟಿಸಿ ಬಸ್​ ಹರಿದ ಪರಿಣಾಮ ಸ್ಥಳದಲ್ಲೇ ಮೂವರೂ ದುರ್ಮರಣಕ್ಕೀಡಾದ ಘಟನೆ ತಡರಾತ್ರಿ ಸಂಭವಿಸಿದೆ.
ಎಮ್ಮಿಗನೂರಿನ ಕನಕರಾಜು(19), ಮುರುಡಿ ಗ್ರಾಮದ ಶಂಕರ(18), ಸಂಡೂರು ನಾಗೇನಹಳ್ಳಿಯ ಹೊನ್ನೂರ(22) ಮೃತ ದುರ್ದೈವಿಗಳು. ಇವರೆಲ್ಲರೂ ಬಳ್ಳಾರಿಯ ಎಸ್ಸಿ- ಎಸ್ಟಿ ಹಾಸ್ಟಲ್ ವಿದ್ಯಾರ್ಥಿಗಳು. ಇವರು ಮಧ್ಯರಾತ್ರಿ ಹೊರಗೆ ಏಕೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ನಿನ್ನೆ(ಭಾನುವಾರ) ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಜೇವರ್ಗಿ ಘಟಕದ ಸರ್ಕಾರಿ ಬಸ್ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇಹದ ಕೆಲ ಭಾಗ ನಜ್ಜುಗುಜ್ಜಾಗಿತ್ತು. ಈ ಬೀಕರತೆ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಫಿಫಾ ವಿಶ್ವಕಪ್: ಸೋಲಿನ ಆಘಾತದಿಂದ ಕ್ರೀಡಾಂಗಣದಲ್ಲೇ ಕುಳಿತ ಫೈನಲ್​ ಹೀರೋ ಎಂಬೆಪ್ಪೆಗೆ ಸಮಾಧಾನ ಹೇಳಿದ ಫ್ರೆಂಚ್ ಅಧ್ಯಕ್ಷ

ಕೋವಿಡ್​ಗೆ ತಾಯಿ ಬಲಿ… ಒಂದೊತ್ತಿನ ಊಟಕ್ಕೂ ಬೀದಿಬೀದಿ ಅಲೆಯುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 9 =
Remember me
