ಹಾವೇರಿ:ಸರ್ಕಾರಿ ಸಾರಿಗೆ ಬಸ್​ಗಳಲ್ಲಿ 30 ಕೆಜಿ ತೂಕದವರೆಗಿನ ಲಗೇಜುಗಳನ್ನು ಉಚಿತವಾಗಿ ಸಾಗಿಸುವ ಅವಕಾಶವಿದೆ. ಆದರೆ, ಇಲ್ಲೊಬ್ಬ ಕಂಡಕ್ಟರ್​, ಸೈಕಲ್​ ಟೈರ್​ಗೂ ಟಿಕೆಟ್​ ನೀಡಿರುವುದು ಬೆಳಕಿಗೆ ಬಂದಿದೆ.
ರಾಣಿಬೆನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ನಂಬರಿನ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಉಮೇಶ್ ಪಾಟೀಲ್​​ ಎಂಬುವರು ತಮ್ಮ ಮಗನ ಜತೆ ತಮ್ಮ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಗನ ಸೈಕಲ್​ಗೆಂದು ತಂದ ಟೈರ್​ಗೂ ಕಂಡಕ್ಟರ್​ ಟಿಕೆಟ್ ನೀಡಿದ್ದಾರೆ.
ಇದನ್ನೂ ಓದಿ:ಸೋಮವಾರದಂದೇ ಹೃದಯಾಘಾತಗಳು ಹೆಚ್ಚೆಂದ ಹೊಸ ಸಂಶೋಧನೆ! ತಜ್ಞರು ಕೊಟ್ಟ ಕಾರಣ ಹೀಗಿದೆ….

ಟಿಕೆಟ್​ ದರ ಒಬ್ಬರಿಗೆ 35 ರೂಪಾಯಿ. ತಂದೆ ಮತ್ತು ಮಗ ಇಬ್ಬರಿಗೆ 70 ರೂಪಾಯಿ ಆಗುತ್ತದೆ. ಆದರೆ, ಟೈರ್​ಗೂ 5 ರೂ. ಸೇರಿಸಿ ಒಟ್ಟು 75 ರೂ. ಟಿಕೆಟ್​ ನೀಡಲಾಗಿದೆ. ಟಿಕೆಟ್​ನಲ್ಲಿ ಲಗೇಜ್​ ಯೂನಿಟ್​ 1 ಎಂದು ಉಲ್ಲೇಖಿಸಿ 5 ರೂ. ಚಾರ್ಜ್​ ಮಾಡಿದ್ದಾರೆ.
ಟೈರ್​ಗೂ ಏಕೆ ಟಿಕೆಟ್​ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕ ಉಮೇಶ್ ಪಾಟೀಲ್​ ಪ್ರಶ್ನೆ ಮಾಡಿದರೆ ನಮಗೆ ಮೇಲಿಂದ ಅದೇಶ ಬಂದಿದೆ ಎಂದು ಕಂಡಕ್ಟರ್​ ಸಮರ್ಥನೆ ನೀಡಿದ್ದಾರೆ.
ಇದನ್ನೂ ಓದಿ:ಹಿಂದೂ ಯುವತಿಯರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಪೋಸ್ಟ್ ಮಾಡಿದ ವಿದ್ಯಾರ್ಥಿ! ಹುಬ್ಬಳ್ಳಿ ಪೊಲೀಸರಿಗೆ ಚಾಲೆಂಜ್ ಮಾಡಿದ ಕಿರಾತಕ…

ಇನ್ನು ಕೆಎಸ್​ಆರ್​ಟಿಸಿಯ ನಿಮಯದ ಪ್ರಕಾರ ಪ್ರತಿ ಪ್ರಯಾಣಿಕರು 30 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ. ಅದಕ್ಕಿಂತ ಹೆಚ್ಚು ತೂಕದ ಲಗೇಜ್​ ತೆಗೆದುಕೊಂಡು ಹೋಗಿದಲ್ಲಿ ನಿಗದಿತ ತೂಕವನ್ನು ಬಿಟ್ಟು ಉಳಿದ ಹೆಚ್ಚುವರಿ ತೂಕಕ್ಕೆ ದರ ವಿಧಿಸಲಾಗುತ್ತದೆ.(ದಿಗ್ವಿಜಯ ನ್ಯೂಸ್​)
ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್​ ಗಾಂಧಿಗೆ ಬಿಗ್ ರಿಲೀಫ್; ಶಿಕ್ಷೆಗೆ ‘ಸುಪ್ರೀಂ’ ತಡೆ

ಹಾವು ಮತ್ತು ಹಸುವಿನ ಫ್ರೆಂಡ್ ​​ಶಿಪ್​​, ಸೌಹಾರ್ದತೆಯ ಸಂದೇಶ ಸಾರಿದ ಮೂಕ ಪ್ರಾಣಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 19 =
Remember me
