ಮೈಸೂರು:ಕೆ‌ಎಸ್‌ಆರ್‌ಟಿಸಿ ಬಸ್​ ಅನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಲಕನ ಮೇಲೆ ಹತ್ತಾರು ಜನರ ಎದುರೇ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಬೋಳನಹಳ್ಳಿ ಬಳಿ ಗುರುವಾರ ಈ ಘಟನೆ ಸಂಭವಿಸಿದ್ದು, ಪಿರಿಯಾಪಟ್ಟಣ ಡಿಪೋ ಬಸ್​ನ ಚಾಲಕ ವೆಂಕಟೇಶ್ ಹಲ್ಲೆಗೊಳಗಾಗಿದ್ದಾರೆ. ಹಾಸನದಿಂದ ಮೈಸೂರಿಗೆ ಬಸ್ ಬರುತ್ತಿತ್ತು. ಮಾರ್ಗಮಧ್ಯೆ ಟ್ರಿಪ್ಪಲ್ ರೈಡ್‌ನಲ್ಲಿದ್ದ ಬೈಕ್ ಅನ್ನು ಬಸ್​ ಚಾಲಕ ಹಿಂದಿಕ್ಕಿದ ಎಂಬ ಕೋಪಕ್ಕೆ, ಬಹುದೂರ ಫಾಲೋ ಮಾಡಿಕೊಂಡು ಬಂದ ಬೈಕ್​ ಸವಾರರು ಬಸ್ ಅನ್ನು ಅಡ್ಡಗಟ್ಟಿದರು.ಇದನ್ನೂ ಓದಿರಿಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಬಸ್‌ನಿಂದ ಹೊಗೆ ಬಂತು ಎಂದು ಕ್ಯಾತೆ ತೆಗೆದ ಯುವಕರು, ಪ್ರಯಾಣಿಕರ ಎದುರಲ್ಲೇ ಮಾತಿಗೆ ಮಾತು ಬೆಳೆಸಿ ಗಲಾಟೆ ಮಾಡಿದರು. ಅಲ್ಲದೆ ಸಾರಿಗೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಕಣ್ಣೆದುರಲ್ಲೇ ದುಷ್ಕರ್ಮಿಯೊಬ್ಬ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಗಾಯಗೊಂಡು ನರಳಾಡುತ್ತಿದ್ದ ಚಾಲಕನ್ನು ಪ್ರಯಾಣಿಕರು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಲ್ಲೆಯ ದೃಶ್ಯವನ್ನು ಪ್ರಯಣಿಕರೊಬ್ಬರು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದು, ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ಒಳಗಾಗಿದ್ದ ಚಾಲಕನನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆ, ಕೈಗಳಿಗೆ ಪೆಟ್ಟಾಗಿದೆ. ತೀವ್ರ ರಕ್ತಸ್ರಾವ ಆಗಿರುವುದರಿಂದ ಹಿಮೋಗ್ಲೋಬಿನ್ ಕಡಿಮೆ ಇದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬಸ್ ಚಾಲಕ ವೆಂಕಟೇಶ್​ಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯ ಡಾ.ಎಚ್.ವಿ.ಸಂತೃಪ್ತ್ ಮಾಹಿತಿ ನೀಡಿದ್ದಾರೆ.
100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 11 =
Remember me
