ಬೆಂಗಳೂರು:ಊಟಕ್ಕೆಂದು ನಿಂತಿದ್ದ ಬಸ್​ನಿಂದ ಪ್ರಯಾಣಿಕನ ಸೋಗಿನಲ್ಲಿದ್ದ ಕಳ್ಳ, ಹಣ ಕದ್ದು ಓಡಿ ಹೋಗಲು ಪ್ರಯತ್ನಿಸಿದಾಗ ಬಸ್​ ಸಿಬ್ಬಂದಿ ತಕ್ಷಣ ಸಾಹಸ ಮೆರೆದು ಕಳ್ಳನನ್ನು ಹಿಡಿದಿದ್ದಾರೆ.
KSRTC ಚಾಲನಾ ಸಿಬ್ಬಂದಿಯ ಸಮಯೋಚಿತ ಸಾಹಸ ಕಾರ್ಯ ಮತ್ತು ಧೈರ್ಯದಿಂದ ಸಹ ಪ್ರಯಾಣಿಕನಿಂದ ರೂ.5 ಲಕ್ಷ ಹಣ ಕದ್ದು ಓಡುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಸೆರೆ ಹಿಡಿಯಲಾಗಿದ್ದು ಹಣವನ್ನು ವಾಪಸ್ಸು ಮಾಡಲಾಗಿದೆ.
ನಿನ್ನೆ (ಜು.14) ಬೆಂಗಳೂರು ಕೇಂದ್ರಿಯ ವಿಭಾಗದ ಘಟಕ-04ರ ಕೆಎ-57 ಎಫ್ 3975 ವಾಹನ ಬೆಂಗಳೂರು-ತಿರುನಲ್ಲಾರ್ ಮಾರ್ಗದಲ್ಲಿ ಪ್ರಯಾಣಿಸುತ್ತಿತ್ತು. ಈ ಸಂದರ್ಭ ಆಸನ ಸಂಖ್ಯೆ 17/18ರಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಸಹ ಪ್ರಯಾಣಿಕ ದಂಪತಿಯ 5 ಲಕ್ಷ ರೂ. ಮೊತ್ತವನ್ನು ಕದಿಯಲು ಪ್ರಯತ್ನಿಸಿದ್ದಾನೆ.
ಬಸ್ಸು ಊಟಕ್ಕೆಂದು ನಿಲುಗಡೆ ಆಗಿದ್ದಾಗ, ಈ ಕಳ್ಳ ದಂಪತಿ, ತಮ್ಮ ಚೀಲವನ್ನು ಬಸ್ಸಿನಲ್ಲೇ ಬಿಟ್ಟು ಕೆಳಗಿಳಿದಿದ್ದರು. ಈ ಸಂದರ್ಭದಲ್ಲಿ ಹಣ ತುಂಬಿದ್ದ ಚೀಲವನ್ನು ಕದ್ದ ಕಳ್ಳ, ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಓಡಿಹೋಗಲು ಪ್ರಯತ್ನಿಸಿದ್ದಾನೆ.
ಇದನ್ನು ಗಮನಿಸಿದ ನಿಗಮದ ವಾಹನ ಚಾಲಕರಾದ ಮಂಜುನಾಥ್ ಹಾಗೂ ಚಾಲಕ ಕಂ ನಿರ್ವಾಹಕರಾದ ಸೋಮಪ್ಪ ಟಿ.ಎನ್ ಎನ್ನುವವರು ಕಳ್ಳ-ಪ್ರಯಾಣಿಕನನ್ನು ಬೆನ್ನಟ್ಟಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಈ ರೀತಿಯಾಗಿ ಶೌರ್ಯ ಮೆರೆದಿರುವ ಇಬ್ಬರು ಸಾರಿಗೆ ಇಲಾಖೆ ಸಿಬ್ಬಂದಿಗಳು, ಹಣವನ್ನು ದಂಪತಿಗೆ ವಾಪಸ್​ ಮಾಡಿದ್ದಾರೆ. ಈ ಕುರಿತು ಹಣ ಕಳೆದುಕೊಂಡಿದ್ದ ಪ್ರಯಾಣಿಕರಾದ ತಿರುಮುರುಗನ್ ತಮ್ಮ ಹಣ ವಾಪಸ್​ ಸಿಕ್ಕ ಕುರಿತು ಅತೀವ ಸಂತಸ ವ್ಯಕ್ತಪಡಿಸಿದ್ದು, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಇ-ಮೇಲ್ ಕಳುಹಿಸಿದ್ದಾರೆ.
ಈ ಘಟನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ವಿ.ಅನ್ಬುಕುಮಾರ್, “ಸದರಿ ಸಿಬ್ಬಂದಿಗಳ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಮತ್ತು ಪ್ರಯಾಣಿಕರ ಬಗೆಗಿನ ಕಾಳಜಿಯು ಪ್ರಶ್ನಾತೀತ. ಇಂತಹ ಸಿಬ್ಬಂದಿಗಳೇ ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ಗೌರವ. ಇವರ ಈ ಕಾರ್ಯವು ಇತರರಿಗೆ ಮಾದರಿಯಾಗಲಿ” ಎಂದು ಆಶಿಸಿದ್ದು ಸಮಯೋಚಿತ ಸೇವಾ ಕಾರ್ಯಕ್ಕೆ ಅಭಿನಂದಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 17 =
Remember me
