ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ನಲ್ಲಿ ಕ್ರಿಸ್​ಮಸ್​ ಹಬ್ಬಕ್ಕೆ ಶುಭಾಶಯ ಕೋರಿ ಸಂದೇಶ ಮುದ್ರಿಸುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಡವಟ್ಟು ಮಾಡಿಕೊಂಡಿತ್ತು. ಟಿಕೆಟ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನಿಗಮ, ಮುದ್ರಿತ ಸಂದೇಶ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಟಿಕೆಟ್​ನಲ್ಲಿ ಕ್ರಿಸ್​ಮಸ್​ ಹಬ್ಬದ ಶುಭಾಶಯ ತಿಳಿಸುವ ಸಂದೇಶ ಪ್ರಿಂಟ್​ ಆಗಿರುವ ಬಗ್ಗೆ ಕೆಎಸ್​ಆರ್​ಟಿಸಿ ವಿರುದ್ಧ ಸಾಕಷ್ಟು ಮಂದಿ ಕಿಡಿಕಾರಿದ್ದರು. ಹಿಂದು ಧರ್ಮದ ಹಬ್ಬಗಳಿಗೆ ಈವರೆಗೆ ಯಾಕೆ ಶುಭಾಶಯ ಸಂದೇಶ ಟಿಕೆಟ್​ನಲ್ಲಿ ಮುದ್ರಿಸಿಲ್ಲ? ಎಂದು ಪ್ರಶ್ನಸಿದ್ದರು.
ಕೆಎಸ್​ಆರ್​ಟಿಸಿ ನಿಗಮದ ಒಟ್ಟು 83 ಟಕಗಳಲ್ಲಿ 16 ವಿಭಾಗಗಳಿದ್ದು, ನಿತ್ಯ 10,200 ಇಟಿಎಂ(ಇಲೆಕ್ಟ್ರಿಕ್​ ಟಿಕೆಟ್​ ಮೆಶಿನ್​)ಗಳಲ್ಲಿ ಮುದ್ರಿತ ಮಾಹಿತಿಯನ್ನು ಅಪ್ಲೋಡ್​ ಮಾಡಲಾಗುತ್ತದೆ. ಟಿಕೆಟ್​ ವಿತರಣಾ ಯಂತ್ರಗಳ ಮೂಲಕ ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬ ಹಾಗೂ ಇತರ ರಜಾ ದಿನಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಟಕಗಳಲ್ಲಿ ಆಂತರಿಕ ಬಳಕೆಗಾಗಿ ಮಾತ್ರ ಕಲ್ಪಿಸಲಾಗಿದೆ.
ವೈರಲ್​ ಆಗಿರುವ ಟಿಕೆಟ್​ನಲ್ಲಿ ದಾಖಲಾಗಿರುವ ಕ್ರಿಸ್​ಮಸ್​ ಹಬ್ಬದ ಸಂದೇಶ ಡಿ.25ರಂದು ಮಾತ್ರ ಮುದ್ರಿತವಾಗಿದೆ. ಇದು ಚಿಕ್ಕಬಳ್ಳಾಪುರ ವಿಭಾಗದ, ಚಿಕ್ಕಬಳ್ಳಾಪುರ, ಶಿಡ್ಲಟ್ಟ ಮತ್ತು ಚಿಂತಾಮಣಿ ಟಕದ ಟಿಕೆಟ್​ಗಳಲ್ಲಿ ಮಾತ್ರ ಮುದ್ರಿತವಾಗಿದೆ. ಇದನ್ನು ಈಗಾಗಲೇ ಸರಿಪಡಿಸಲಾಗಿದೆ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟನೆ ನೀಡಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen + fifteen =
Remember me
